ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್
ನಮ್ಮ ಬಳಿ ಇರುವ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card Correction) ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ, ಮಾಡುವುದು ಹೇಗೆ ತಿಳಿಯೋಣ
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ (Ration Card) ಬಹಳ ಪ್ರಮುಖವಾಗಿರುವ ಗುರುತಿನ ಚೀಟಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹವಣಿಸುತ್ತಿದ್ದಾರೆ.
ಕಳೆದ ಎರಡುವರೆ ವರ್ಷಗಳಿಂದಲೂ ಕೂಡ ಅರ್ಜಿ ಸಲ್ಲಿಸಿ ಇದುವರೆಗೆ ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಲು ಗ್ರಾಹಕರಿಗೆ ಸಾಧ್ಯವಾಗಿಲ್ಲ. ಆದರೆ ಸದ್ಯದಲ್ಲಿ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭಗೊಳ್ಳಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಗೃಹಜ್ಯೋತಿ ಯೋಜನೆಯ ಜೀರೋ ವಿದ್ಯುತ್ ಬಿಲ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್
ಇರುವ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card Correction) ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಎಷ್ಟೋ ಬಾರಿ ನಾವಿರುವ ಸ್ಥಳದಿಂದ ಸ್ಥಳಾಂತರಗೊಂಡಿರುತ್ತೇವೆ. ಅಂತಹ ಸಮಯದಲ್ಲಿ ರೇಷನ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸುವುದು (address change) ಬಹಳ ಮುಖ್ಯ, ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ (Bank Account) ವಿಳಾಸ ಮ್ಯಾಚ್ ಆಗದೆ ಇದ್ದಲ್ಲಿ ಗ್ಯಾರಂಟಿ ಯೋಜನೆಯ ಪ್ರಯೋಜನವೂ ಕೂಡ ಸಿಗುವುದಿಲ್ಲ ಎಂಬುದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದು ಎಲ್ಲಿ? ( Ration card Correction)
ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ರೈತರ ಖಾತೆಗೆ ಈ ದಿನ ಜಮಾ ಆಗಲಿದೆ 2,000 ರೂಪಾಯಿ, ಅಧಿಕೃತ ಘೋಷಣೆ
ರೇಷನ್ ಕಾರ್ಡ್ ನಲ್ಲಿ ಯಾವ ತಿದ್ದುಪಡಿ ಮಾಡಬಹುದು?
*ಹೊಸ ಸದಸ್ಯರ ಹೆಸರು ಸೇರ್ಪಡೆ
*ಮೃತಪಟ್ಟವರ ಹೆಸರು ತೆಗೆಸುವುದು
*ವಿಳಾಸ ಬದಲಾಯಿಸುವುದು
ಬೇಕಾಗಿರುವ ದಾಖಲೆಗಳು; (needed documents)
ಹೊಸ ಹೆಸರು ಸೇರ್ಪಡೆಗೆ-
ಜನನ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಯಜಮಾನನ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್
ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 4 ಸಾವಿರ ಮಾಡಿಕೊಳ್ಳಿ! ಹೊಸ ಅಪ್ಡೇಟ್
ವಿಳಾಸ ಬದಲಾಯಿಸುವುದಿದ್ದರೆ –
ಕುಟುಂಬ ಯಜಮಾನನ ರೇಷನ್ ಕಾರ್ಡ್
ಆಧಾರ್ ಕಾರ್ಡ್
ವಿಳಾಸದ ಪುರಾವೆ (ಮನೆ ಅಗ್ರಿಮೆಂಟ್, ಕರೆಂಟ್ ಬಿಲ್ etc)
ಮೃತಪಟ್ಟವರ ಹೆಸರು ತೆಗೆಯುವುದಿದ್ದರೆ – ಮರಣ ಪ್ರಮಾಣ ಪತ್ರ (death certificate)
ಅರ್ಜಿ ಸ್ಟೇಟಸ್ ಚೆಕ್ ಮಾಡಬಹುದು! (Check your application status)
ನೀವು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ನಂಬರ್ ಅಥವಾ ಪ್ರತಿ ಕೊಡುತ್ತಾರೆ. ಅದನ್ನು ಪಡೆದುಕೊಳ್ಳಿ. ಬಳಿಕ ಆನ್ಲೈನ್ ನಲ್ಲಿ ನೀವು ಸ್ಟೇಟಸ್ ಚೆಕ್ ಮಾಡಬಹುದು.
ಆನ್ಲೈನ್ ನಲ್ಲಿ ಸ್ಟೇಟಸ್ ಚೆಕ್ ಮಾಡಲು, https://ahara.kar.nic.in/Home/EServices ಆಹಾರ ಇಲಾಖೆಯ ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. ಎಡ ಭಾಗದಲ್ಲಿ ಕಾಣಿಸುವ ಮೂರು ಲೈನ್ಗಳ ಮೇಲೆ ಕ್ಲಿಕ್ ಮಾಡಿ.
ಮುಂದಿನ ಹಂತದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ತಿದ್ದುಪಡಿ ವಿನಂತಿ ಸ್ಥಿತಿ ಎನ್ನುವ ಆಯ್ಕೆ ಇರುತ್ತದೆ. ಅದನ್ನು ಟ್ಯಾಪ್ ಮಾಡಿ.
ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ 3 ಲಕ್ಷ ತನಕ ಬಡ್ಡಿ ರಹಿತ ಸಾಲ
ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಅರ್ಜಿ ನಂಬರ್ ಅನ್ನು ಹಾಕಿ. ನಿಮ್ಮ ತಿದ್ದುಪಡಿ ಅರ್ಜಿ ಯಾವ ಸ್ಥಿತಿಯಲ್ಲಿ ಇದೆ ಎಂಬುದನ್ನು ತಿಳಿಯಬಹುದು.
ವಿಶೇಷ ಸೂಚನೆ – ಎಲ್ಲಾ ಸೇವಾ ಕೇಂದ್ರಗಳಲ್ಲಿಯೂ ಕೂಡ ತಿದ್ದುಪಡಿ ಮಾಡಿಕೊಳ್ಳುತ್ತಿಲ್ಲ. ಕೆಲವು ಸರ್ವರ್ ಸಮಸ್ಯೆಯಿಂದಾಗಿ ತಿದ್ದುಪಡಿ ಆಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಹತ್ತಿರದ ಸೇವಾಕೇಂದ್ರಕ್ಕೆ ಹೋಗಿ ಮಾಹಿತಿಯನ್ನು ಕೊಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೊಟ್ರೆ, ಯಾವಾಗ ತಿದ್ದುಪಡಿ ಕೆಲಸ ಆರಂಭವಾಗುತ್ತದೆಯೋ ಆಗ ಅವರು ನಿಮ್ಮ ಹೆಸರಿನ ತಿದ್ದುಪಡಿ ಮಾಡಬಹುದು ಹಾಗೂ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಅವರಿಗೆ ತಿಳಿಸಿದರೆ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
Add name of new member in ration card, Here is the Details