ಇಂತಹ ರೈತರಿಗೆ ಬೆಳೆ ಪರಿಹಾರ ನಿಧಿ ಹಣ ಜಮಾ ಆಗಿದೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!
ರಾಜ್ಯದ ಸಾಕಷ್ಟು ಪ್ರದೇಶಗಳನ್ನು ಬರಪೀಡಿತ ಪ್ರದೇಶ (Drought prone area) ಎಂದೇ ಘೋಷಿಸಲಾಗಿದೆ. ರೈತರಿಗೆ ಬೆಳೆ ಪರಿಹಾರ ನಿಧಿಯನ್ನು ಸರ್ಕಾರ ನೀಡುತ್ತಿದೆ.
ಒಬ್ಬ ರೈತ (farmer) ತನ್ನ ಬೆಳೆ (crop) ಯನ್ನು ಅವಲಂಬಿಸಿರುವುದೇ ಕಾಲಕಾಲಕ್ಕೆ ಆಗುವ ಮಳೆ (Rain) ಯಿಂದಾಗಿ. ಇಂದು ಮಳೆ ಸರಿಯಾಗಿ ಬಾರದಿದ್ದರೆ ಅಥವಾ ಅತಿಯಾಗಿ ಮಳೆ ಬಂದರೆ ತನ್ನ ಸಂಪೂರ್ಣ ಬೆಳೆಯನ್ನು ಕಳೆದುಕೊಳ್ಳುತ್ತಾನೆ. ಒಬ್ಬ ರೈತನ ಬೆಳೆನಾಶ ಅಂದ್ರೆ ಅದು ಆತನಿಗೆ ಮಾತ್ರ ಆಗುವ ನಷ್ಟವಲ್ಲ. ಇಡೀ ದೇಶವೇ ಇದರಿಂದ ಆರ್ಥಿಕ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.
ಹೀಗಾಗಿ ಪ್ರತಿ ಬಾರಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ (Central government) ಅಥವಾ ರಾಜ್ಯ ಸರ್ಕಾರ (State government)!ಗಳು ಒಂದಲ್ಲ ಒಂದು ಯೋಜನೆಯ ಮೂಲಕ ಅಗತ್ಯ ಇರುವ ನೆರವನ್ನು ನೀಡುತ್ತಾರೆ.
ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಈ ಹೊಸ ನಿಯಮ ಪಾಲಿಸಲೇಬೇಕು!
ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಅಭಾವದಿಂದಾಗಿ ರೈತರು ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಹೀಗಾಗಿ ರಾಜ್ಯದ ಸಾಕಷ್ಟು ಪ್ರದೇಶಗಳನ್ನು ಬರಪೀಡಿತ ಪ್ರದೇಶ (Drought prone area) ಎಂದೇ ಘೋಷಿಸಲಾಗಿದೆ. ಹಾಗೂ ಇಂತಹ ಪ್ರದೇಶದಲ್ಲಿ ವಾಸಿಸುವ ರೈತರಿಗೆ ಬೆಳೆ ಪರಿಹಾರ ನಿಧಿಯನ್ನು ಸರ್ಕಾರ ನೀಡುತ್ತಿದೆ.
ಸರ್ಕಾರದಿಂದ ಬೆಳೆ ಪರಿಹಾರ ನಿಧಿ ಬಿಡುಗಡೆ!
ರಾಜ್ಯ ಸರ್ಕಾರ ತಿಳಿಸಿರುವಂತೆ ಯಾವ ಸ್ಥಳವನ್ನು ಬರಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆಯೋ, ಆ ಪ್ರದೇಶದಲ್ಲಿ ಇರುವ ರೈತರಿಗೆ ಬೆಳೆ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲಾಗುವುದು. ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೂಡ ಕಾರ್ಯಕ್ರಮ ಒಂದರಲ್ಲಿ ಮಾತನಾಡಿ ಬೆಳೆ ಪರಿಹಾರ ನಿಧಿಯನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಇದೀಗ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾದದ್ದು ರೈತರು ಮೊದಲ ಕಂತಿನಲ್ಲಿ 2000ಗಳನ್ನು ತಮ್ಮ ಖಾತೆಗೆ ಡಿಬಿಟಿ ಮಾಡಿಸಿಕೊಳ್ಳಲಿದ್ದಾರೆ.
ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ
ಪರಿಹಾರ ತಂತ್ರಾಂಶ ಬಳಕೆ!
ಪ್ರಸ್ತುತ ಕಂದಾಯ ಇಲಾಖೆ (revenue department) ಯಿಂದ ನಿರ್ವಹಿಸಲ್ಪಡುತ್ತಿರುವ ಪರಿಹಾರ ತಂತ್ರಾಂಶವನ್ನು ಬಳಕೆ ಮಾಡಿ ಸರಕಾರದ ಯೋಜನೆಗಳ ಪ್ರಯೋಜನ ಹಾಗೂ ಅದರಿಂದ ಸಿಗುವ ಡಿಬಿಟಿ (DBT) ಹಣದ ಬಗ್ಗೆ ಮಾಹಿತಿ ಪಡೆಯಬಹುದು. ಬೆಳೆ ಪರಿಹಾರದ ಮತ್ತು ಪಾರದರ್ಶಕವಾಗಿ ರೈತರ ಖಾತೆಗೆ (Bank Account) ತಲುಪುವಂತೆ ಮಾಡಲು ಪರಿಹಾರ ತಂತ್ರಾಂಶ ಅಭಿವೃದ್ದಿ ಪಡಿಸಲಾಗಿದೆ.
ಪರಿಹಾರ ತಂತ್ರಾಂಶದಲ್ಲಿ ಲಭ್ಯವಿರುವ ಸೇವೆಗಳು!
ಬರ ಪರಿಹಾರ
ಮಳೆಯಿಂದ ಉಂಟಾಗಿರುವ ಹೆಚ್ಚು ಹಾನಿ
ಭೂಕುಸಿತ
ರೋಗ ಹಾಗೂ ಕೀಟದಿಂದ ಉಂಟಾಗಿರುವ ಬೆಳೆ ನಾಶ.
ಈ ತಂತ್ರಾಂಶವನ್ನು ಬಳಸಿಕೊಂಡು ಯಾವ ವರ್ಷ ಯಾವ ರೈತರಿಗೆ ಎಷ್ಟು ಬೆಳೆ ಪರಿಹಾರ ಒದಗಿಸಲಾಗಿದೆ ಎನ್ನುವ ಮಾಹಿತಿ ಪಡೆಯಬಹುದು. ಇದಕ್ಕಾಗಿ ನೀವು, https://parihara.karnataka.gov.in/service87/ ಮೇಲೆ ಕ್ಲಿಕ್ ಮಾಡಿ ಬೆಳೆ ಪರಿಹಾರ ತಂತ್ರಾಂಶದ ಪುಟ ತೆರೆದುಕೊಳ್ಳುತ್ತದೆ. ಬಳಿಕ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಪರಿಹಾರದ ವರ್ಷ, ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
ಹೊಸ ವೋಟರ್ ಐಡಿ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಮೊಬೈಲ್ ನಲ್ಲೇ ಮಾಡಿಕೊಳ್ಳಿ
ಈಗ ಮತ್ತೊಂದು ಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ನೀವು ಹಿಂಗಾರು, ಮುಂಗಾರು, ಬೇಸಿಗೆ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ (get report) ಎಂದು ಕೊಟ್ಟರೆ, ಪರಿಹಾರದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಈ ಪರಿಹಾರದ ಪಟ್ಟಿಯಲ್ಲಿ ರೈತರ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು ಹಾಗೂ ಜಮಾ ಆಗಿರುವ ಮೊತ್ತವನ್ನು ತಿಳಿದುಕೊಳ್ಳಬಹುದು.
Crop Relief Fund money has been deposited for such farmers