ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಈ ಹೊಸ ನಿಯಮ ಪಾಲಿಸಲೇಬೇಕು!
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣವನ್ನು ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ವಿಚಾರದಲ್ಲಿ ಸರ್ಕಾರಕ್ಕೆ ಮೊದಲು ಇದ್ದಷ್ಟು ಗೊಂದಲ ಈಗಿಲ್ಲ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣವನ್ನು ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ವಿಚಾರದಲ್ಲಿ ಸರ್ಕಾರಕ್ಕೆ ಮೊದಲು ಇದ್ದಷ್ಟು ಗೊಂದಲ ಈಗಿಲ್ಲ.
ಎಲ್ಲಾ ಮಹಿಳೆಯರ ಖಾತೆಗೆ ಕೂಡ ಬಹುತೇಕ ಹಣ ಜಮಾ ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ಮಹಿಳೆಯರು ತಮ್ಮ ಖಾತೆಗೆ 2,000 ಬರಬೇಕು ಅಂದ್ರೆ ಈ ಒಂದು ಕೆಲಸವನ್ನು ಮಾಡಬೇಕು. ಇದು ಸರ್ಕಾರದ ಆದೇಶವಾಗಿದ್ದು, ನೀವು ತಕ್ಷಣ ಈ ಕೆಲಸ ಮಾಡಿ. ಇಲ್ಲವಾದರೆ ಆರನೇ ಕಂತಿನ ಹಣ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದ್ದು ನಿಮಗೆ ಆ ಹಣ ಬಾರದೆ ಇರಬಹುದು.
ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ
ಸಾಕಷ್ಟು ಜನ 2013ಕ್ಕಿಂತಲೂ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಹಾಗೂ ಈಗ 10 ವರ್ಷ ಕಳೆದಿದ್ದರೂ ಕೂಡ ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಸಿಕೊಂಡಿಲ್ಲ. ಹೀಗಾಗಿ ಸರ್ಕಾರ ತಿಳಿಸಿರುವ ಪ್ರಕಾರ ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ಅಪ್ಡೇಟ್ ಮಾಡಿಕೊಳ್ಳಬೇಕು. ಹೆಸರು ಬದಲಾವಣೆಯಿಂದ ಹಿಡಿದು ವಿಳಾಸ , ಜನ್ಮ ದಿನಾಂಕ ಮೊದಲಾದ ಬದಲಾವಣೆಗಳನ್ನು ಮಾಡಿಕೊಳ್ಳುವುದು.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಇರುತ್ತದೆಯೋ ಆಧಾರ್ ಕಾರ್ಡ್ ನಲ್ಲಿಯೂ ಕೂಡ ಅದೇ ಇರಬೇಕು ಜೊತೆಗೆ ನೀವು ಬಳಸುವ ಮೊಬೈಲ್ಗೆ ಆಧಾರ್ ಲಿಂಕ್ (Aadhaar Card link) ಕೂಡ ಆಗಿರಬೇಕು.
ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ 2 ಹೊಸ ರೂಲ್ಸ್; ಇಲ್ಲವಾದರೆ ಖಾತೆಗೆ ಹಣ ಬರೋಲ್ಲ
ಆಧಾರ್ ಸೀಡಿಂಗ್ (Aadhaar seeding)
ಈ ಕೆಲಸವು ಕೂಡ ಸಾಕಷ್ಟ ಮಹಿಳೆಯರು ಇದುವರೆಗೆ ಮಾಡಿಸಿಕೊಂಡಿಲ್ಲ. ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ಯೋ ಇಲ್ವಾ ಚೆಕ್ ಮಾಡಿ.
ಸಾಕಷ್ಟು ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಇರುವುದಕ್ಕೆ ಮುಖ್ಯ ಕಾರಣ, ಸರ್ವರ್ ಸಮಸ್ಯೆಯಿಂದಾಗಿ ಬ್ಯಾಂಕ್ಗಳಲ್ಲಿ ಸೀಡಿಂಗ್ಗಾಗಿ ಕೊಟ್ಟರು ಕೂಡ ಅದು ಸಾಧ್ಯವಾಗಿಲ್ಲ ಹಾಗಾಗಿ ಅಂತಹ ಮಹಿಳೆಯರ ಖಾತೆಗೂ ಹಣ ಬರುವುದಿಲ್ಲ.
ಹೊಸ ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ರಾತ್ರೋರಾತ್ರಿ ಹೊಸ ನಿಯಮ!
ಇದರ ಜೊತೆಗೆ ಈಕೆ ವೈ ಸಿ (E-KYC) ಮಾಡಿಸಿಕೊಳ್ಳುವುದು ಎನ್‌ಪಿಸಿಐ ಕೂಡ ಕಡ್ಡಾಯವಾಗಿದೆ. ಸುಮಾರು 15 ಲಕ್ಷ ಮಹಿಳೆಯರ ಖಾತೆಗೆ ಈಕೆ ವೈ ಸಿ ಪೂರ್ಣಗೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗಾಗಿ ನಿಮಗೆ ಹಣ ಬಂದಿಲ್ಲ ಎಂದರೆ ಇದು ಸರ್ಕಾರದ ತಪ್ಪಲ್ಲ ನಿಮ್ಮ ಖಾತೆಯಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಂಡಿಲ್ಲ ಎಂದು ಅರ್ಥ. ಹಾಗಾಗಿ ಆರನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ತಕ್ಷಣ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.
ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್
ಗೃಹಲಕ್ಷ್ಮಿ ಸ್ಟೇಟಸ್ ತಿಳಿಯಿರಿ (Check your Graha lakshmi status)
ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿದ್ಯೋ ಇಲ್ವೋ ಎನ್ನುವುದನ್ನು ಚೆಕ್ ಮಾಡಲು ಗೂಗಲ್ ನಲ್ಲಿ ಮಾಹಿತಿ ಕಣಜ (Mahiti kanaja) ಎಂದು ಸರ್ಚ್ ಮಾಡಿ. ಮೊದಲಿಗೆ ಕಾಣಿಸುವ ಮಾಹಿತಿ ಕಣಜ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮಾಹಿತಿ ಕಣಜ ಪುಟ ತೆರೆದುಕೊಳ್ಳುತ್ತದೆ. ಈಗ ಮೇಲ್ಭಾಗದಲ್ಲಿ ಇರುವ ಗೃಹಲಕ್ಷ್ಮಿ ಸ್ಥಿತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಈಗ ಎಷ್ಟು ತಿಂಗಳ ಹಣ ನಿಮ್ಮ ಖಾತೆಗೆ ಜಮಾ ಆಗಿದೆ, ರೇಷನ್ ಕಾರ್ಡ್ ಯಾರ ಹೆಸರಿನಲ್ಲಿ ಇದೆ ಪ್ರತಿಯೊಂದು ಮಾಹಿತಿಯನ್ನು ನೀವು ತಿಳಿಯಬಹುದು.
This new rule must be followed to get Gruha Lakshmi money for the next installment