ಹೊಸ ವೋಟರ್ ಐಡಿ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಮೊಬೈಲ್ ನಲ್ಲೇ ಮಾಡಿಕೊಳ್ಳಿ
ಇಂದು ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ (smartphone) ಇದ್ರೆ ಸಾಕು ಎಲ್ಲಾ ಕೆಲಸವನ್ನೂ ಸುಲಭವಾಗಿ ಮನೆಯಲ್ಲಿಯೇ ಕುಳಿತು ಮಾಡಿಕೊಳ್ಳಬಹುದು. ಬ್ಯಾಂಕ್ (Bank) ವ್ಯವಹಾರದಿಂದ ಹಿಡಿದು ಯಾವುದಾದರೂ ಕೆಲಸಕ್ಕೆ ಅರ್ಜಿ ಸಲ್ಲಿಸುವುದಿದ್ದರು ಕೂಡ ಮಾಡಿಕೊಳ್ಳಬಹುದು.
ಅದೇ ರೀತಿ ಈಗ ವೋಟರ್ ಐಡಿ ನವೀಕರಣ (voter ID update) ಕ್ಕೆ ಅಥವಾ ಹೊಸ ವೋಟರ್ ಐಡಿ ಪಡೆದುಕೊಳ್ಳಲು ಕೂಡ ನೀವು ಯಾವುದೇ ಸೇವಾ ಕೇಂದ್ರಗಳಿಗೆ ಅಥವಾ ಚುನಾವಣಾ ಆಯೋಗದ ಕಚೇರಿಗೆ ಹೋಗಬೇಕಿಲ್ಲ. ಕೆಲವೇ ನಿಮಿಷಗಳಲ್ಲಿ ಮೊಬೈಲ್ ಮೂಲಕವೇ ಈ ಕೆಲಸವನ್ನು ಮಾಡಿಕೊಳ್ಳಬಹುದು.

ಧರ್ಮಸ್ಥಳ ಸಂಸ್ಥೆಯಿಂದ ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ
ಆನ್ಲೈನ್ ಮೂಲಕ ಮತದಾರ ಚೀಟಿ ನವೀಕರಣ ಮಾಡಿಕೊಳ್ಳುವುದು ಹೇಗೆ?
ದೇಶದಲ್ಲಿ ವೋಟರ್ ಐಡಿಗೆ ತನ್ನದೇ ಆಗಿರುವ ಮಹತ್ವ ಇದೆ. ಪ್ರತಿ ಚುನಾವಣೆಯಲ್ಲೂ ನಾವು ನಮ್ಮ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಬೇಕೇ ಬೇಕು. ನೀವು ಮತಗಟ್ಟೆಗೆ ಹೋಗಿ ವೋಟರ್ ಐಡಿ ಇಲ್ಲದೆ ಇದ್ರೆ ವೋಟ್ ಹಾಕಲು ಸಾಧ್ಯವಿಲ್ಲ. ಇನ್ನು ಸದ್ಯದಲ್ಲಿಯೇ ಲೋಕಸಭಾ ಚುನಾವಣೆ (Loksabha election) ಕೂಡ ಆರಂಭವಾಗಲಿದ್ದು, ಈಗಲೇ ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳುವುದಿದ್ದರೆ ಅಥವಾ ಈಗಿರುವ ವೋಟರ್ ಐಡಿ ಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಬೇಕಿದ್ದರೆ ತಕ್ಷಣವೇ ಮೊಬೈಲ್ ನಲ್ಲಿ ಮಾಡಿಕೊಳ್ಳಿ.
ವೋಟರ್ ಐಡಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು, https://voterportal.eci.gov.in/ ಚುನಾವಣಾ ಆಯೋಗದ ಈ ವೆಬ್ಸೈಟ್ಗೆ ಭೇಟಿ ನೀಡಿ. ಈಗ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. ಅಲ್ಲಿ ಫಾರ್ಮ್ 8A ಆಯ್ಕೆ ಮಾಡಿ. ಈ ಫಾರ್ಮ್ ಅನ್ನು ಭರ್ತಿ ಮಾಡಬೇಕು.
ಮಹಿಳೆಯರಿಗಾಗಿ ಸರ್ಕಾರದ ಮತ್ತೊಂದು ಯೋಜನೆ; ಸಿಗಲಿದೆ ಇನ್ನಷ್ಟು ಬೆನಿಫಿಟ್
ಈ ಫಾರ್ಮ್ ನಲ್ಲಿ ಅಗತ್ಯ ಇರುವ ಮಾಹಿತಿಗಳನ್ನು ಭರ್ತಿ ಮಾಡಿ ನಂತರ ನಿಮ್ಮ ವೋಟರ್ ಐಡಿಯಲ್ಲಿ ಯಾವ ಬದಲಾವಣೆ ಆಗಬೇಕು ಎಂಬುದನ್ನು ನಮೂದಿಸಬೇಕು.
ಬಳಿಕ ನಿಮ್ಮ ಪಾಸ್ಪೋರ್ಟ್ ಅಥವಾ ಆಧಾರ್ ಕಾರ್ಡ್ ಅನ್ನು ಮುಖ್ಯ ದಾಖಲೆಯಾಗಿ ಅಪ್ಲೋಡ್ ಮಾಡಬೇಕು. ಈಗ ನೀವು ಅರ್ಜಿ ಸಲ್ಲಿಸಲು ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ. ಇದು ಕೇವಲ 15 ರಿಂದ 20 ನಿಮಿಷಗಳ ಕೆಲಸವಾಗಿದ್ದು ನಿಮಗೆ ಕೊಡಲಾಗುವ ಒಂದು ಅರ್ಜಿ ಸಂಖ್ಯೆಯನ್ನು ಇಟ್ಟುಕೊಳ್ಳಿ ಇದರ ಮೂಲಕ ನೀವು ಸ್ಟೇಟಸ್ ಚೆಕ್ ಮಾಡಬಹುದು.
ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ 2 ಹೊಸ ರೂಲ್ಸ್; ಇಲ್ಲವಾದರೆ ಖಾತೆಗೆ ಹಣ ಬರೋಲ್ಲ
ವೋಟರ್ ಐಡಿ ನವೀಕರಣಕ್ಕೆ ಇರುವ ಅಪ್ಲಿಕೇಶನ್ಗಳು!
Voter Helpline App
Saksham App
cVIGIL App
Voter Turnout App
https://voters.eci.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ ನೀವು 18 ವರ್ಷ ತುಂಬಿದ್ದರೆ ಹೊಸ ವೋಟರ್ ಐಡಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಬಹುದು.
ಹೊಸ ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ರಾತ್ರೋರಾತ್ರಿ ಹೊಸ ನಿಯಮ!
Apply For New voter id and correction by Smartphone Online