ಧರ್ಮಸ್ಥಳ ಸಂಸ್ಥೆಯಿಂದ ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ

Education Scholarship : ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ (SKDRDP) ಅಡಿಯಲ್ಲಿ ಸ್ವ ಸಹಾಯ ಸಂಘಗಳ ಅಥವಾ ಪ್ರಗತಿ ಬಂದು ಸದಸ್ಯರ ಮಕ್ಕಳು ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ

Education Scholarship : ದಕ್ಷಿಣ ಕನ್ನಡದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ (Shri Kshetra Dharmasthala), ಈವರೆಗೆ ಜನೋಪಯೋಗಿ ಕಾರ್ಯವನ್ನು ಸಾಕಷ್ಟು ಮಾಡಿದೆ.

ಇವುಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ (scholarship) ನೀಡುವ ಕೆಲಸವನ್ನು ಕೂಡ ಬಹಳ ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಸುಜ್ಞಾನ ನಿಧಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ (SKDRDP) ಅಡಿಯಲ್ಲಿ ಸ್ವ ಸಹಾಯ ಸಂಘಗಳ ಅಥವಾ ಪ್ರಗತಿ ಬಂದು ಸದಸ್ಯರ ಮಕ್ಕಳು ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿ ಮಕ್ಕಳು ಸುಜ್ಞಾನ ನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಶಿಕ್ಷಣಕ್ಕೆ ಆರ್ಥಿಕ ನೆರವು ಪಡೆದುಕೊಳ್ಳಬಹುದು.

ಧರ್ಮಸ್ಥಳ ಸಂಸ್ಥೆಯಿಂದ ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ - Kannada News

ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ 2 ಹೊಸ ರೂಲ್ಸ್; ಇಲ್ಲವಾದರೆ ಖಾತೆಗೆ ಹಣ ಬರೋಲ್ಲ

ಸುಜ್ಞಾನ ನಿಧಿ ಶಿಷ್ಯವೇತನ! (Sujnana Nidhi scholarship)

ಸುಜ್ಞಾನ ನೀಡಿ ಶಿಷ್ಯವೇತನವನ್ನು 202324ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್ ಮಾಡಲು (professional courses) ಇಂಜಿನಿಯರಿಂಗ್ ಓದಲು ಹೋಗುವ ವಿದ್ಯಾರ್ಥಿಗಳು ಕೂಡ ಪಡೆದುಕೊಳ್ಳಬಹುದು. ಇಲ್ಲಿಯವರೆಗೆ ರಾಜ್ಯದ 72,500 ವಿದ್ಯಾರ್ಥಿಗಳಿಗೆ 87 ಕೋಟಿ ರೂ. ವಿದಾರ್ಥಿವೇತನವನ್ನು ಸುಜ್ಞಾನ ನಿಧಿ ವಿದ್ಯಾರ್ಥಿ ವೇತನದ ಅಡಿಯಲ್ಲಿ ನೀಡಲಾಗಿದೆ.

ಧರ್ಮಸ್ಥಳ ಸಂಸ್ಥೆಯ ಪ್ರಗತಿ ಬಂದು ಅಥವಾ ಸ್ವಸಹಾಯ ಸಂಘದಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವುದಾದರೆ ವೃತ್ತಿಪರ ಕೋರ್ಸ್ ಹಾಗೂ ತಾಂತ್ರಿಕ ಶಿಕ್ಷಣ ಪಡೆದುಕೊಳ್ಳುವುದಾದರೆ ಸುಜ್ಞಾನ ನೀತಿ ವಿದ್ಯಾರ್ಥಿ ವೇತನಕ್ಕೆ ತಕ್ಷಣ ಅರ್ಜಿ ಸಲ್ಲಿಸಿ.

ಹೊಸ ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ರಾತ್ರೋರಾತ್ರಿ ಹೊಸ ನಿಯಮ!

Education scholarshipವಿದ್ಯಾರ್ಥಿ ವೇತನದ ಮೊತ್ತ! (Scholarship amount)

ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ, ವಿದ್ಯಾರ್ಥಿಯ ವಿದ್ಯಾಭ್ಯಾಸದ ಕೋರ್ಸ್ಗೆ ಅನುಗುಣವಾಗಿ ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಉದಾಹರಣೆಗೆ ಐಟಿಐ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 4000 ವಿದ್ಯಾರ್ಥಿವೇತನ ಸಿಗುತ್ತದೆ. ಅದೇ ರೀತಿ ಬೇರೆ ಬೇರೆ ಕೋರ್ಸ್ ಗಳಿಗೆ ಬೇರೆ ಬೇರೆ ವಿದ್ಯಾರ್ಥಿ ವೇತನದ ಮೊತ್ತ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ಹಿಂದಿನ ವರ್ಷದ ಅಂಕಪಟ್ಟಿ
10ನೇ ತರಗತಿಯ ಅಂಕಪಟ್ಟಿ
ಆಧಾರ್ ಕಾರ್ಡ್
ಪಾಲಕರ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್
ಯೋಜನಾ ಕಚೇರಿಯ ಶಿಫಾರಸು ಪತ್ರ
ಬ್ಯಾಂಕ್ ಖಾತೆಯ ವಿವರ
ಸಂಘದ ನಿರ್ಣಯ ಪುಸ್ತಕ
ಯಾವ ಕೋರ್ಸ್ಗೆ ಸೇರಿದ್ದೀರಿ ಎನ್ನುವುದರ ಬಗ್ಗೆ ಆಯಾ ಕಾಲೇಜಿನ ದೃಢೀಕರಣ ಪ್ರಮಾಣ ಪತ್ರ

ಈ ಹಿಂದೆ ವಿದ್ಯಾರ್ಥಿ ವೇತನ ಪಡೆದುಕೊಂಡಿರುವ ವಿದ್ಯಾರ್ಥಿಗಳು ಕೂಡ ಈ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.

ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್

ಅರ್ಜಿ ಸಲ್ಲಿಸುವುದು ಹೇಗೆ! (How to apply)

ಎಸ್ ಕೆ ಡಿ ಆರ್ ಡಿ ಪಿಯ, ಸಿ ಎಸ್ ಆರ್ ಕಚೇರಿಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29ನೇ ಫೆಬ್ರವರಿ 2024.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (contact for more details):
9591770660
6366358320

Such students will get Education scholarship, Apply Today

Follow us On

FaceBook Google News

Such students will get Education scholarship, Apply Today