ಮಹಿಳೆಯರಿಗಾಗಿ ಸರ್ಕಾರದ ಮತ್ತೊಂದು ಯೋಜನೆ; ಸಿಗಲಿದೆ ಇನ್ನಷ್ಟು ಬೆನಿಫಿಟ್
ವಿದ್ಯಾಭ್ಯಾಸಕ್ಕಾಗಿ ಅಥವಾ ಕೆಲಸವನ್ನು ಹುಡುಕಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ಹೆಣ್ಣು ಮಕ್ಕಳು (women) ಕೂಡ ವಲಸೆ ಬರುತ್ತಾರೆ. ಹೀಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಥವಾ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು, ತಮ್ಮ ಸಣ್ಣ ಪುಟ್ಟ ಹಳ್ಳಿಯಿಂದ ಪೇಟೆಗೆ ಬಂದು ವಾಸಿಸುವ ಮಹಿಳೆಯರಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟಪಡುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಉಳಿದುಕೊಳ್ಳಲು ಸರಿಯಾದ ವಸತಿ ವ್ಯವಸ್ಥೆ ಕೂಡ ಇರುವುದಿಲ್ಲ.
ಇಂತಹ ಮಹಿಳೆಯರನ್ನು ಗುರುತಿಸಿ ಅವರಿಗೆ ವಸತಿ ಸೌಲಭ್ಯ (Housing Facility) ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರ ಸಖಿ ನಿವಾಸ ಯೋಜನೆ ಆರಂಭಿಸಿದೆ. ಸಖಿ ನಿವಾಸ ಯೋಜನೆಯನ್ನು ಈ ಹಿಂದೆ ಕೇಂದ್ರ ಸರ್ಕಾರ ಆರಂಭಿಸಿತು.
ಆದರೆ ಈಗ ರಾಜ್ಯ ಸರ್ಕಾರ ಅದಕ್ಕೆ ಅನುದಾನವನ್ನು ನೀಡುವುದರ ಮೂಲಕ ಮಹಿಳೆಯರಿಗೆ ಸುರಕ್ಷತೆ ನೀಡುವ ಸಲುವಾಗಿ ವಸತಿ ವ್ಯವಸ್ಥೆಯನ್ನು ಮಾಡಿಕೊಡಲಿದೆ.
ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ 2 ಹೊಸ ರೂಲ್ಸ್; ಇಲ್ಲವಾದರೆ ಖಾತೆಗೆ ಹಣ ಬರೋಲ್ಲ
ಏನಿದು ಸಖಿ ನಿವಾಸ ಯೋಜನೆ? Sakhi nivasa Yojana
1972-73 ನಲ್ಲಿ ಸಖಿ ನಿವಾಸ ಯೋಜನೆಯನ್ನು ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಈ ಯೋಜನೆಗೆ ಹೆಚ್ಚಿನ ಮಹತ್ವವನ್ನು ಯಾರು ನೀಡಲಿಲ್ಲ ಯಾವಾಗ ಈ ಯೋಜನೆ ಆರಂಭವಾಗಿತ್ತೋ ಆಗ ಪಟ್ಟಣಕ್ಕೆ ಕೆಲಸ ಹುಡುಕಿ ಬರುವ ಮಕ್ಕಳ ತಾಯಂದಿರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಮಹಿಳೆಯರಿಗೆ ವಸತಿ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಸರಕಾರವೇ ಕಟ್ಟಡ ನಿರ್ಮಾಣ ಮಾಡಿ ಹಾಸ್ಟೆಲ್ (hostel) ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತದೆ.
ಸಖಿ ನಿವಾಸ ಯೋಜನೆಗೆ ಯಾರು ಅರ್ಹರು?
ವಿದ್ಯಾರ್ಥಿನಿಯರು, ವಿಚ್ಚೇದಿತ ಮಹಿಳೆಯರು, 18 ವರ್ಷದ ಮಗಳು ಮತ್ತು ತಾಯಿ, ವಿಕಲಾಂಗ ಮಹಿಳೆಯರು, 12 ವರ್ಷದವರೆಗಿನ ಗಂಡು ಮಗು ಮತ್ತು ತಾಯಿ.
ಹೊಸ ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ರಾತ್ರೋರಾತ್ರಿ ಹೊಸ ನಿಯಮ!
ವರ್ಕಿಂಗ್ ವುಮನ್ ಹಾಸ್ಟೆಲ್ ನಿರ್ಮಾಣ! (Working women hostel)
ನಗರಾ ಅಥವಾ ಪಟ್ಟಣ ಪ್ರದೇಶಗಳಿಗೆ ಬಂದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಬಡ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ ಮಾಡಿ ವಸತಿ ವ್ಯವಸ್ಥೆ ಕಲ್ಪಿಸಿಕೊಡುವ ಯೋಜನೆ ಇದಾಗಿದೆ ಹಾಗಾಗಿ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಶ್ವವಿದ್ಯಾಲಯಗಳ ಆವರಣದಲ್ಲಿ ವರ್ಕಿಂಗ್ ಹಾಸ್ಟೆಲ್ ನಿರ್ಮಾಣ ಮಾಡಲು ಜಾಗಕ್ಕಾಗಿ ಅನುಮತಿ ಕೇಳಿದೆ.
ಒಂದು ವೇಳೆ ವಿಶ್ವವಿದ್ಯಾಲಯಗಳ ಆವರಣದಲ್ಲಿ ವರ್ಕಿಂಗ್ ವುಮೆನ್ ಹಾಸ್ಟೆಲ್ ನಿರ್ಮಾಣ ಮಾಡಲು ಅವಕಾಶ ನೀಡಿದರೆ ಸರ್ಕಾರ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲಿದೆ. ಇದರಿಂದ ಸಾಕಷ್ಟು ಮಹಿಳೆಯರಿಗೆ ಉಚಿತವಾಗಿ ಅಥವಾ ಅತಿ ಕಡಿಮೆ ಬೆಲೆಗೆ ವಸತಿ ಹಾಗೂ ಊಟ ಕಲ್ಪಿಸಿಕೊಡಲಾಗುವುದು. ಸದ್ಯದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರ ಸಖಿ ನಿವಾಸ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಇನ್ನಷ್ಟು ಸೌಲಭ್ಯ ನೀಡುವ ಸಾಧ್ಯತೆ ಇದೆ.
ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್
Another government scheme for women, get more benefits
Our Whatsapp Channel is Live Now 👇