ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆ ಹಣ ರಿಲೀಸ್! ಒಟ್ಟಿನಲ್ಲಿ ಎಲ್ಲರಿಗೂ ಬಂತು ಹಣ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಆರಂಭವಾದ ನಂತರ, ಸಾಕಷ್ಟು ಮಹಿಳೆಯರಿಗೆ ನೆಮ್ಮದಿ ಸಿಕ್ಕಿದೆ ಎನ್ನಬಹುದು. ಪ್ರತಿ ತಿಂಗಳು ಕಷ್ಟ ಪಡುವ ಮಹಿಳೆಯರು ಈಗ ಪ್ರತಿ ತಿಂಗಳು 2,000ಗಳನ್ನು ಉಚಿತವಾಗಿ ಪಡೆದು ತಮ್ಮ ತಿಂಗಳ ಸಣ್ಣಪುಟ್ಟ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ಆದಷ್ಟು ಮಹಿಳೆಯರು ಸರಕಾರಕ್ಕೆ ಕೃತಜ್ಞತೆ ಸೂಚಿಸಿದ್ದಾರೆ.
ಇಷ್ಟಾಗಿ ಇದುವರೆಗೆ ಆರಂಭದಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೂ ಕೂಡ ಹಣ ಬಾರದೇ ಇರುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಹುಡುಕಿದರೆ ಮಾತ್ರ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ.
ಕುರಿ ಮೇಕೆ ಹಸು ಸಾಕಾಣಿಕೆ ಮಾಡಲು ಉಚಿತವಾಗಿ ತರಬೇತಿ; ಅರ್ಜಿ ಆಹ್ವಾನ
ಎಷ್ಟೋ ಮಹಿಳೆಯರ ಖಾತೆಗೆ KYC ಆಗದೆ ಇರುವುದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕೆಲವು ತಾಂತ್ರಿಕ ದೋಷಗಳು (technical issues) ಕೂಡ ಮಹಿಳೆಯರ ಖಾತೆಗೆ (Bank Account) ಹಣ ಬಾರದಂತೆ ಮಾಡಿವೆ.
ನಾವು ಈ ಲೇಖನದಲ್ಲಿ ನೀವು ಪೆಂಡಿಂಗ್ (pending amount) ಇರುವ ಹಣವನ್ನು ಪಡೆದುಕೊಳ್ಳಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಮುಂದೆ ಓದಿ.
ನಿಮಗಿನ್ನು ಒಂದೂ ಕಂತಿನ ಹಣ ಬಂದಿಲ್ವಾ? ಹಾಗಾದ್ರೆ ಹೀಗೆ ಮಾಡಿ!
ಸಿಡಿಪಿಓ ಕಚೇರಿಗೆ ಭೇಟಿ! (Visit CDPO office)
ನಿಮಗಿನ್ನೂ ಒಂದು ಕಂತಿನ ಹಣವು ಬಾರದೇ ಇದ್ದರೆ, ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಯಾಕೆ ಹಣ (Money Deposit) ಬಂದಿಲ್ಲ ಎನ್ನುವ ಮಾಹಿತಿ ಪಡೆಯಿರಿ. ನೀವು ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎನ್ನುವುದನ್ನು ತಿಳಿಯಬಹುದು, ಸಮಸ್ಯೆ ತಿಳಿದರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ದೊಡ್ಡ ಕೆಲಸವೇನು ಅಲ್ಲವೇ ಅಲ್ಲ?
ಇಂತಹ ರೈತರಿಗೆ ಬೆಳೆ ಪರಿಹಾರ ನಿಧಿ ಹಣ ಜಮಾ ಆಗಿದೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!
ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಈ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಂಡಿದ್ಯಾ ಚೆಕ್ ಮಾಡಿ!
ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಇದು ಬಹಳ ಮುಖ್ಯವಾಗಿರುವ ಘಟ್ಟ. ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ (E-KYC ) ಆಗದೆ ಇದ್ರೆ ಹಣ ಜಮಾ ಆಗಲು ಸಾಧ್ಯವೇ ಇಲ್ಲ. ಹಾಗಾಗಿ ನೀವು ಬ್ಯಾಂಕ್ ನಲ್ಲಿ ನಿಮ್ಮ ಖಾತೆಗೆ ಈಕೆ ವೈ ಸಿ ಆಗಿದೆಯಾ ಎನ್ನುವುದನ್ನು ಚೆಕ್ ಮಾಡಬೇಕಾಗುತ್ತದೆ.
ಆಧಾರ್ ಲಿಂಕ್, NPCI mapping ಕೂಡ ಕಡ್ಡಾಯವಾಗಿರುವುದರಿಂದ ಬ್ಯಾಂಕ್ ಗೆ ಹೋಗಿ ಈ ಕೆಲಸವನ್ನು ಕೂಡ ಪೂರ್ಣಗೊಳಿಸಿಕೊಳ್ಳಿ. ನೀವು ಇದನ್ನ ಮಾಡಿದ್ರೆ, ನಿಮ್ಮ ಖಾತೆ ಅಪ್ಡೇಟ್ ಆಗದೇ ಇರಬಹುದು ನಿಮ್ಮ ಖಾತೆಯನ್ನು ಅಪ್ಡೇಟ್ ಮಾಡಿಸಿ.
ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಈ ಹೊಸ ನಿಯಮ ಪಾಲಿಸಲೇಬೇಕು!
ಸಿ ಡಿ ಪಿ ಓ ಕಚೇರಿಯಲ್ಲಿ ನಿಮ್ಮ ಅರ್ಜಿ ಅನುಮೋದನೆ ಬಾಕಿ ಇದ್ದರೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಖಾತೆಗೆ ಕೆವೈಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರೆ ಪೆಂಡಿಂಗ್ ಇರುವ ಹಣ ಕೂಡ ಬರುತ್ತದೆ. ಯಾಕಂದ್ರೆ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರುತ್ತದೆ.
ಆದರೆ ಬ್ಯಾಂಕಿಗೆ ಬಂದಿರುವ ಈ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ತಾಂತ್ರಿಕ ಸಮಸ್ಯೆಗಳು ಪರಿಹಾರವಾಗಬೇಕು. ಗೆಲವು ಆಟೋಮ್ಯಾಟಿಕ್ ಪ್ರೋಸೆಸ್ ಆಗಿರುವುದರಿಂದ ಕೆವೈಸಿ ಪ್ರಕ್ರಿಯೆ ಆಗದೇ ಇರುವ ಖಾತೆಯನ್ನು ಕಂಪ್ಯೂಟರ್ ಅಥವಾ ಸರ್ವರ್ ಗುರುತಿಸುವುದಿಲ್ಲ. ಹೀಗಾಗಿ ನಿಮ್ಮ ಖಾತೆಗೆ ಹಣ ಬಾರದೆ ಇರುವ ಸಾಧ್ಯತೆ ಇದೆ ಹಾಗಾಗಿ ನಾವು ಈಗ ಹೇಳಿರುವ ಕೆಲಸವನ್ನು ಮಾಡಿ ನಿಮ್ಮ ಖಾತೆಗೆ ಪೆಂಡಿಂಗ್ ಇರುವ ಹಣ ಜಮಾ ಆಗುತ್ತದೆ.
ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ
Pending Gruha Lakshmi Yojana Fund Release, Check Status Now