ಕುರಿ ಮೇಕೆ ಹಸು ಸಾಕಾಣಿಕೆ ಮಾಡಲು ಉಚಿತವಾಗಿ ತರಬೇತಿ; ಅರ್ಜಿ ಆಹ್ವಾನ
ಕುರಿ ಅಥವಾ ಮೇಕೆ ಸಾಕಾಣಿಕೆಗೆ (goat and ship husbandry training) ತರಬೇತಿ ಹೊಂದಿರುವುದು ಬಹಳ ಮುಖ್ಯ, ಉಚಿತವಾಗಿ ತರಬೇತಿ ನೀಡಲಾಗುತ್ತಿದೆ
ನೀವು ಕೃಷಿಕರಾಗಿದ್ದರೆ ಅಥವಾ ಕೃಷಿಕನ ಮಕ್ಕಳಾಗಿದ್ದು ಈಗ ಕೃಷಿ (Agriculture) ಯ ಬಗ್ಗೆ ಆಸಕ್ತಿ ಹೊಂದಿದ್ದರೆ, ಕೃಷಿಯ ಉಪಕಸುವನ್ನು ನೀವು ಆಯ್ದು ಕೊಳ್ಳಬಹುದು, ಉಪಕಸುಬು ಅಂದರೆ ಹೈನುಗಾರಿಕೆ, ಪಶು ಸಂಗೋಪನೆ, ಮೀನು ಸಾಕಾಣಿಕೆ ರೇಷ್ಮೆ ಸಾಕಾಣಿಕೆ ಮೊದಲಾದ ಕೆಲಸಗಳನ್ನು ಹೆಸರಿಸಬಹುದು. ಹಾಗಂದ ಮಾತ್ರಕ್ಕೆ ಉಪಕಸುಬು ಮಾಡುವುದು ಕೂಡ ಅಷ್ಟು ಸುಲಭವಲ್ಲ.
ಹೌದು, ಯಾವ ಕೆಲಸವೂ ಸುಲಭವಲ್ಲ ಅದರಲ್ಲೂ ನಮಗೆ ಆ ಕೆಲಸ ಗೊತ್ತಿಲ್ಲದೇ ಇದ್ದರೆ ಅದನ್ನು ಮಾಡುವುದು ಕಷ್ಟ. ಅದೇ ರೀತಿ ಕುರಿ ಅಥವಾ ಮೇಕೆ ಸಾಕಾಣಿಕೆಗೆ (goat and ship husbandry training) ಕೂಡ ತರಬೇತಿ ಹೊಂದಿರುವುದು ಬಹಳ ಮುಖ್ಯ.
ಇಂತಹ ರೈತರಿಗೆ ಬೆಳೆ ಪರಿಹಾರ ನಿಧಿ ಹಣ ಜಮಾ ಆಗಿದೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!
ನೀವು ಈ ರೀತಿ ಪ್ರಾಣಿ ಸಾಕಾಣಿಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಮಾಡಿದರು ಕೂಡ ಪ್ರಾಣಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು. ಇದರಿಂದ ನಿಮ್ಮ ಉದ್ಯಮ ಸಂಪೂರ್ಣ ನಾಶವಾಗಬಹುದು. ಹಾಗಂದ ಮಾತ್ರಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ. ಕುರಿ ಮೇಕೆ ಸಾಕಾಣಿಕೆಗೆ ನಿಮಗೆ ತರಬೇತಿಯನ್ನು ನೀಡಲಿದೆ ಈ ಸಂಸ್ಥೆ!
ದಾವಣಗೆರೆಯಲ್ಲಿ ತರಬೇತಿ! (Training in Davangere)
ದಾವಣಗೆರೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ, ಮತ್ತು ಆಸಕ್ತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆಗೆ ತರಬೇತಿ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಈ ಹೊಸ ನಿಯಮ ಪಾಲಿಸಲೇಬೇಕು!
ಪ್ರಸ್ತುತ ದಿನದಲ್ಲಿ ಯಾವುದೇ ಉದ್ಯಮ ಮಾಡುವುದಿದ್ದರು ಅದರಲ್ಲಿ ಸಾಂಪ್ರದಾಯಿಕ ಪದ್ಧತಿಕ್ಕಿಂತಲೂ, ವೈಜ್ಞಾನಿಕವಾಗಿ ಉದ್ಯಮ ಮಾಡಿದರೆ ಹೆಚ್ಚು ಫಲಪ್ರದವಾಗಿರುತ್ತದೆ. ಹಾಗಾಗಿ ಈ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆಯನ್ನು ವೈಜ್ಞಾನಿಕವಾಗಿ ಹೇಗೆ ಸುಸಜ್ಜಿತವಾಗಿ ಸಾಕಾಣಿಕೆ ಮಾಡಬಹುದು ಹಾಗೂ ಅಧಿಕ ಲಾಭವನ್ನು ಗಳಿಸಬಹುದು ಎನ್ನುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ.
ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ
ತರಬೇತಿ ನಡೆಯುವ ಸ್ಥಳ ಮತ್ತು ದಿನಾಂಕ! (Training venue)
ಪಶು ವೈದ್ಯಕೀಯ ತರಬೇತಿ ಕೇಂದ್ರ ಪಶು ಆಸ್ಪತ್ರೆ, ದಾವಣಗೆರೆ. ತರಬೇತಿ ಯನ್ನು ಜನವರಿ ತಿಂಗಳಿನ ಕೊನೆಯವರೆಗೆ ನೀಡಲಾಗುವುದು.
ತರಬೇತಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!
ತಮ್ಮ ಫೋಟೋ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ತರಬೇತಿಯ ದಿನ ಸ್ಥಳಕ್ಕೆ ಹಾಜರಾಗತಕ್ಕದ್ದು.
ಹೊಸ ವೋಟರ್ ಐಡಿ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಮೊಬೈಲ್ ನಲ್ಲೇ ಮಾಡಿಕೊಳ್ಳಿ
ಅರ್ಜಿ ಸಲ್ಲಿಸುವುದು ಹೇಗೆ? (How to apply for training)
ದಾವಣಗೆರೆ ಪಶು ಆಸ್ಪತ್ರೆಯನ್ನು ನೇರವಾಗಿ ಸಂಪರ್ಕಿಸಿ, ತರಬೇತಿಯ ದಿನ ಸ್ಥಳಕ್ಕೆ ಹೋಗಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ. 0819223377.
Free training to raise sheep, goats and cows