ಗೃಹಲಕ್ಷ್ಮಿ 6ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇಂತಹವರಿಗೆ ಹಣ ವರ್ಗಾವಣೆ ಆಗೋಲ್ಲ
ಗೃಹಲಕ್ಷ್ಮಿ 6ನೇ ಕಂತಿನ ಹಣ ನಿಮ್ಮ ಖಾತೆಗೆ (Bank Account) ಯಾವುದೇ ಸಮಸ್ಯೆ ಇಲ್ಲದೆ ತಲಪಲು ನಿಯಮಗಳನ್ನು ಪಾಲಿಸಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ 6ನೇ ಕಂತಿನ ಹಣ ಇನ್ನೇನು ಸದ್ಯದಲ್ಲಿಯೇ ಬಿಡುಗಡೆ ಆಗಲಿದ್ದು, ನಿಮ್ಮ ಖಾತೆಗೂ (Bank Account) ಹಣ ಬರಬೇಕು ಅಂದ್ರೆ ನೀವು ಇದೊಂದು ಮುಖ್ಯವಾಗಿರುವ ಕೆಲಸ ಮಾಡಬೇಕು. ಇಲ್ವಾದ್ರೆ ಐದು ಕಂತಿನ ಹಣವನ್ನು ಪಡೆದುಕೊಂಡು ಸುಮ್ಮನಾಗಬೇಕು ಅಷ್ಟೇ, ಯಾಕೆಂದರೆ ಸರ್ಕಾರ ಇಂತಹ ಒಂದು ಮಹತ್ವದ ಆದೇಶವನ್ನು ಹೊರಡಿಸಿದೆ.
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದ ನಂತರ ರಾಜ್ಯದಲ್ಲಿ ವಾಸಿಸುವ ಕೋಟ್ಯಾಂತರ ಮಹಿಳೆಯರು ತಮ್ಮ ಸಣ್ಣ ಪುಟ್ಟ ಖರ್ಚುಗಳನ್ನು ಪ್ರತಿ ತಿಂಗಳು ನಿಭಾಯಿಸುವಲ್ಲಿ ಸಹಾಯಕವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಈಗಾಗಲೇ ಐದು ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ. ಅಂದ್ರೆ 10,000 ದೊಡ್ಡ ಮೊತ್ತ ಮಹಿಳೆಯರ ಖಾತೆಗೆ ಜಮಾ ಆಗಿದೆ.
5 ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳು ರದ್ದು; ರಾತ್ರೋ-ರಾತ್ರಿ ಹೊಸ ಪಟ್ಟಿ ಬಿಡುಗಡೆ
ಇದೀಗ ರಾಜ್ಯ ಸರ್ಕಾರ ಆರನೇ ಕಂತಿನ ಹಣ ಬಿಡುಗಡೆಗು ಮುನ್ನ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ನಿಮ್ಮ ಖಾತೆಗೆ ಸಂಬಂಧಪಟ್ಟ ಇದೊಂದು ಕೆಲಸ ಮಾಡಿಕೊಳ್ಳದೆ ಇದ್ದರೆ ನಿಮಗೆ ಮುಂದಿನ ತಿಂಗಳಿನ ಹಣ ಬಿಡುಗಡೆ ಆಗುವುದಿಲ್ಲ.
ಎನ್ ಪಿ ಸಿ ಐ ಮ್ಯಾಪಿಂಗ್ ಕಡ್ಡಾಯ! (NPCI mapping mandatory)
ನಿಮ್ಮ ಬ್ಯಾಂಕ್ ಖಾತೆಗೆ NPCI mapping ಕಡ್ಡಾಯವಾಗಿದೆ ಇದಕ್ಕಾಗಿ ನೀವು ಬ್ಯಾಂಕ್ (Bank) ಗೆ ಹೋಗಿ ಸಿಬ್ಬಂದಿಗಳ ಬಳಿ ಅಥವಾ ಬ್ಯಾಂಕ್ ಮ್ಯಾನೇಜರ್ ತಮ್ಮ ಖಾತೆಗೆ NPCI ಮ್ಯಾಪಿಂಗ್ ಆಗಬೇಕು ಎಂದು ಹೇಳಿ. ನಂತರ ಅವರ ಸಹಾಯದಿಂದ ನಿಮ್ಮ ಖಾತೆಗೆ ಮ್ಯಾಪಿಂಗ್ ಮಾಡಿಸಿಕೊಳ್ಳಿ. ಒಂದು ವೇಳೆ ಇನ್ನು ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ, ಎನ್ ಪಿಸಿಐ ಮ್ಯಾಪಿಂಗ್ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.
ಸ್ವಂತ ಮನೆಯಿಲ್ಲದ ಬಡವರಿಗೆ ಮನೆ ಭಾಗ್ಯ! ಸರ್ಕಾರದಿಂದ ಹೊಸ ವಸತಿ ಯೋಜನೆ
ಇಕೆವೈಸಿ ಮಾಡಿಕೊಳ್ಳಿ (E-KYC)
ರಾಜ್ಯದಲ್ಲಿ ಒಟ್ಟು ಇಲ್ಲಿಯವರೆಗೆ ಸಂದಾಯವಾಗಿರುವ ಅರ್ಜಿಗಳಲ್ಲಿ ಸುಮಾರು 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು. ಇಷ್ಟು ಜನರಲ್ಲಿ ಬಹುತೇಕ ಎಲ್ಲರ ಖಾತೆಗೂ ಹಣ ಜಮಾ ಆಗುತ್ತಿದೆ.
ಆದರೆ ಸಿಕ್ಕಿರುವ ವರದಿಯ ಪ್ರಕಾರ 15 ಲಕ್ಷ ಮಹಿಳೆಯರ ಖಾತೆಗೆ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದನ್ನು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಥವಾ ಆನ್ಲೈನ್ ಮೂಲಕವೂ ಮಾಡಬಹುದು. ನಿಮ್ಮ ಖಾತೆಗೆ ಕೆವೈಸಿ ಆಗಿದ್ಯೋ ಇಲ್ವೋ ಎನ್ನುವುದನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ತಿಳಿದುಕೊಳ್ಳಿ.
ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ! ಮೊದಲು ಈ ಜಿಲ್ಲೆಯ ಜನರಿಗೆ ಹಣ ಜಮಾ
ಆರನೇ ಕಂತಿನ ಹಣ ಬಿಡುಗಡೆ ಯಾವಾಗ? (6TH MONTH INSTALLMENT)
ಫೆಬ್ರವರಿ ತಿಂಗಳ ಮೊದಲ ವಾರ ಜನವರಿ ತಿಂಗಳ ಹಣ ಅಂದರೆ 6ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಪ್ರತಿ ಕಂತು ಬಿಡುಗಡೆ ಆದಾಗ ಬಿಡುಗಡೆಯಾದ ದಿನವೇ ಎಲ್ಲಾ ಮಹಿಳೆಯರ ಖಾತೆಗೂ ಹಣ ಜಮಾ ಆಗುವುದಿಲ್ಲ. ಇದಕ್ಕೆ ಇನ್ನೂ ಒಂದು ವಾರದಿಂದ 15 ದಿನಗಳವರೆಗೆ ಕಾಯಬೇಕಾಗುತ್ತದೆ.
ಎಲ್ಲಾ ಜಿಲ್ಲೆಗಳಿಗೆ ಏಕಕಾಲಕ್ಕೆ ಹಣ ಬಿಡುಗಡೆ ಆದರೂ ಕೂಡ ಅದು ಮಹಿಳೆಯರ ಖಾತೆಯನ್ನು ತಲುಪುವುದಿಲ್ಲ ಯಾಕೆಂದರೆ ಆರ್ ಬಿ ಐ ನಿಯಮದ ಪ್ರಕಾರ ಒಂದು ದಿನಕ್ಕೆ ಇಷ್ಟು ಹಣವನ್ನು ಮಾತ್ರ ಸರ್ಕಾರ ವಹಿವಾಟು ಮಾಡಬಹುದು. ಹೀಗಾಗಿ ಎಲ್ಲರ ಖಾತೆಗೆ (Bank Account) ಹಣ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂಬುದು ನೆನಪಿರಲಿ.
ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೆ ಅವಕಾಶ!
Big Update on Gruha Lakshmi Scheme, Money Will Not transfer to such people