ಸ್ವಂತ ಮನೆಯಿಲ್ಲದ ಬಡವರಿಗೆ ಮನೆ ಭಾಗ್ಯ! ಸರ್ಕಾರದಿಂದ ಹೊಸ ವಸತಿ ಯೋಜನೆ

Story Highlights

ರಾಜ್ಯ ಸರ್ಕಾರ ಮನೆ ಇಲ್ಲದವರಿಗೆ ಮನೆ ನಿರ್ಮಾಣ (own house) ಮಾಡಿಕೊಡುವ ಹೊಸ ವಸತಿ ಯೋಜನೆಯನ್ನು (Housing Scheme) ಜಾರಿಗೆ ತರಲು ನಿರ್ಧರಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) 5 ಗ್ಯಾರಂಟಿ ಯೋಜನೆ (guarantee schemes) ಗಳ ಮೂಲಕ ಜನರ ಮನಸ್ಸನ್ನು ಗೆದ್ದಿದೆ ಎಂದೇ ಹೇಳಬಹುದು. ಈಗ ಜನರಿಗೆ ಅನುಕೂಲವಾಗುವಂತಹ ಮತ್ತೊಂದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದು, ಇದನ್ನು ಆರನೇ ಗ್ಯಾರಂಟಿ ಯೋಜನೆ ಎಂದು ಪರಿಗಣಿಸಲಾಗುತ್ತಿದೆ.

ಸರ್ಕಾರದ ಆರನೇ ಗ್ಯಾರಂಟಿ ಯೋಜನೆ! (Government 6th guarantee scheme)

ಐದು ಗ್ಯಾರಂಟಿ ಯೋಜನೆಗಳಲ್ಲಿ ಸರ್ಕಾರ ಯಶಸ್ಸನ್ನು ಸಾಧಿಸಿದೆ. ವಸತಿ ಸಚಿವ ಜಮೀರ್ ಅಹ್ಮದ್ ಅವರು ಆರನೇ ಗ್ಯಾರಂಟಿ ಯೋಜನೆಯ ಬಗ್ಗೆ ಇತ್ತೀಚಿಗೆ ಮಾತನಾಡಿದರು. ಈ 6ನೇ ಗ್ಯಾರಂಟಿ ಯೋಜನೆ ಯಾವುದು ಇರಬಹುದು ಗೊತ್ತಾ? ಸರ್ಕಾರ ಹೊಸ ವಸತಿ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ.

ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ! ಮೊದಲು ಈ ಜಿಲ್ಲೆಯ ಜನರಿಗೆ ಹಣ ಜಮಾ

ಸರ್ಕಾರದ ಹೊಸ ವಸತಿ ಯೋಜನೆ!

ಒಂದು ಸೂರು ಪ್ರತಿಯೊಬ್ಬ ಪ್ರಜೆಯ ಕನಸಾಗಿರುತ್ತದೆ. ತಮ್ಮದೇ ಆಗಿರುವ ಮನೆ ನಿರ್ಮಾಣ ಮಾಡಿಕೊಳ್ಳಲು ಜನ ಸಾಕಷ್ಟು ಕಷ್ಟ ಪಡುತ್ತಾರೆ. ಅದರಲ್ಲೂ ನಿರ್ಗತಿಕರು ಬಡವರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಕನಸು ಕಾಣಲು ಕೂಡ ಹಿಂಜರಿಯುತ್ತಾರೆ.

ಆದರೆ ಇದೀಗ ರಾಜ್ಯ ಸರ್ಕಾರ ಮನೆ ಇಲ್ಲದವರಿಗೆ ಮನೆ ನಿರ್ಮಾಣ (own house) ಮಾಡಿಕೊಡುವ ಹೊಸ ವಸತಿ ಯೋಜನೆಯನ್ನು (Housing Scheme) ಜಾರಿಗೆ ತರಲು ನಿರ್ಧರಿಸಿದೆ.

B. Z ಜಮೀರ್ ಅಹಮ್ಮದ್ ಖಾನ್, ಇತ್ತೀಚಿಗೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವದ ನಿಮಿತ್ತ ಮಾತನಾಡಿ, ಸದ್ಯದಲ್ಲಿ, ಅಂದರೆ ಫೆಬ್ರವರಿ ಅಂತ್ಯದ ಒಳಗೆ ಬಡವರಿಗೆ 36,000 ಮನೆ ಹಸ್ತಾಂತರಿಸಲಾಗುವುದು ಹಾಗೂ ಇದೇ ವರ್ಷ 1.30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಇದು ಬಡವರಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದಿದ್ದಾರೆ.

ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೆ ಅವಕಾಶ!

housing schemeವಸತಿ ಯೋಜನೆಗೆ ರಾಜ್ಯ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ!

ಕೇಂದ್ರ ಸರ್ಕಾರವು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಹೊಸ ಮನೆ ನಿರ್ಮಾಣ ಮಾಡಿಕೊಳ್ಳೋದಕ್ಕೆ ಸಹಾಯ ಮಾಡಲು ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದೀಗ ರಾಜ್ಯದಲ್ಲಿ ಬಡವರಿಗೆ ಸ್ವಂತ ಮನೆ ನಿರ್ಮಿಸಿ ಕೊಡುವ ಸಲುವಾಗಿ, ರಾಜ್ಯ ಸರ್ಕಾರವು ಕೂಡ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ.

ರಾಜೀವ್ ಗಾಂಧಿ ಆವಾಸ್ ಯೋಜನೆ (Rajiv Gandhi aawas Yojana) ಯ ಅಡಿಯಲ್ಲಿ ಸಾಕಷ್ಟು ಮನೆ ನಿರ್ಮಾಣ ಹಾಗೂ ನಿರ್ಮಾಣಗೊಂಡಿರುವ ಮನೆಯನ್ನು ಹಸ್ತಾಂತರಿಸುವ ಕೆಲಸ ನಡೆಯಬೇಕಿದೆ.

ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆ ಹಣ ರಿಲೀಸ್! ಒಟ್ಟಿನಲ್ಲಿ ಎಲ್ಲರಿಗೂ ಬಂತು ಹಣ

ಸಾಕಷ್ಟು ಮನೆ ನಿರ್ಮಾಣದ ಕಾರ್ಯ ಅಪೂರ್ಣಗೊಂಡಿದೆ. ಮನೆ ನಿರ್ಮಾಣಕ್ಕೆ ಸರ್ಕಾರ 4.50 ಲಕ್ಷ ರೂಪಾಯಿಗಳನ್ನು ನೀಡುತ್ತದೆ ಆದರೆ ಈ ಹಣದಲ್ಲಿ ಒಂದು ಪುಟ್ಟ ಮನೆ ನಿರ್ಮಾಣ ಕೂಡ ಸಾಧ್ಯವಿಲ್ಲ. ಇದಕ್ಕಾಗಿ ಸರ್ಕಾರಕ್ಕೆ 500 ಕೋಟಿಗಳನ್ನು ಹೆಚ್ಚುವರಿಯಾಗಿ ಅನುಮೋದನೆ ನೀಡಲು ಕೇಳಿಕೊಳ್ಳಲಾಗಿತ್ತು.

ಈಗಾಗಲೇ 300 ಕೋಟಿ ಬಿಡುಗಡೆಗೆ ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ಫೆಬ್ರವರಿ ತಿಂಗಳಿನ ಅಂತ್ಯದ ಒಳಗೆ 36,000 ಮನೆಗಳನ್ನು ವಿತರಣೆ ಮಾಡಲಾಗುವುದು. ಹಾಗೂ ವಿಜಯನಗರ ಜಿಲ್ಲೆಯಂದಿರಲ್ಲೇ 1960 ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎನ್ನುವ ಗುಡ್ ನ್ಯೂಸ್ ನೀಡಿದ್ದಾರೆ ಸಚಿವ ಜಮೀರ್ ಅಹಮದ್. ಸದ್ಯದಲ್ಲಿ ಇನ್ನಷ್ಟು ಹೊಸ ಮನೆ ನಿರ್ಮಾಣದ ಕೆಲಸವೂ ಕೂಡ ಆರಂಭಗೊಳ್ಳಲಿದೆ ಎಂದಿದ್ದಾರೆ.

ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ

New Housing Scheme by Govt, for the poor who do not have their own house