ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ (below poverty line) ಕ್ಕೆ ಪಡಿತರ ಚೀಟಿ ಹೊಂದಿದ್ದರೆ ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದರೆ ಉಚಿತ ಪಡಿತರ ನೀಡಲಾಗುತ್ತದೆ. ಅದರ ಜೊತೆಗೆ ಸರ್ಕಾರದಿಂದ ಜಾರಿಯಾಗುವ ಸಾಕಷ್ಟು ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಬಿಪಿಎಲ್ ಕಾರ್ಡ್ ಇಂದು ಬಹಳ ಮುಖ್ಯ ದಾಖಲೆ ಎನಿಸಿದೆ. ಯಾಕಂದ್ರೆ ಸರ್ಕಾರದ ಹೊಸ ಹೊಸ ಯೋಜನೆಗಳು ಪರಿಚಯ ಬೀಳುತ್ತಿರುವ ಹಿನ್ನೆಲೆಯಲ್ಲಿ ಯಾರ ಬಳಿ ಬಿಪಿಎಲ್ ಪಡಿತರ ಚೀಟಿ ಇದೆಯೋ ಅವರು ಸುಲಭವಾಗಿ ಈ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಪಡೆದುಕೊಳ್ಳಬಹುದು. ಇದೆಲ್ಲದರ ನಡುವೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ನಿಮ್ಮ ಜಮೀನು ಅಕ್ಕ-ಪಕ್ಕದವರು ಒತ್ತುವರಿ ಮಾಡಿದ್ರೆ, ಈ ರೀತಿ ಮಾಡಿ ಸಾಕು!
ಪಡಿತರ ಚೀಟಿ ಹೊಂದಿರುವವರಿಗೆ ಸಿಗಲಿದೆ ಮತ್ತೊಂದು ಸೌಲಭ್ಯ!
ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಉಚಿತ ಅಕ್ಕಿಯನ್ನು ನೀಡುತ್ತಿದೆ. ಹಾಗೂ ರಾಜ್ಯ ಸರ್ಕಾರ ಭರವಸೆ ನೀಡಿದಂತೆ 5 ಕೆಜಿ ಉಚಿತ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಬಿಪಿಎಲ್ ಪಡಿತರ ಹೊಂದಿರುವವರಿಗೆ ಮತ್ತೊಂದು ಯೋಜನೆಯ ಮೂಲಕ ಇನ್ನಷ್ಟು ಪ್ರಯೋಜನ ಒದಗಿಸಲು ಮುಂದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪೆಂಡಿಂಗ್ ಹಣ ಪಡೆಯಲು ಈ ರೀತಿ ಮಾಡಿ!
ಪಡಿತರ ಅಕ್ಕಿ ಜೊತೆಗೆ ಸಿಗಲಿದೆ ಸಿರಿಧಾನ್ಯ!
ಅಂತ್ಯೋದಯ (antyodaya card) ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು ಅಕ್ಕಿ ಮತ್ತು ಗೋಧಿಯ ಜೊತೆಗೆ ಇನ್ನು ಮುಂದೆ ಸಿರಿಧಾನ್ಯವನ್ನು ಕೂಡ ಪಡೆದುಕೊಳ್ಳಲಿದ್ದಾರೆ. ಈ ಹಿಂದೆ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಫಲಾನುಭವಿಗಳಿಗೆ, 21 ಕೆಜಿ ಅಕ್ಕಿ ಹಾಗೂ 14 ಕೆಜಿ ಗೋಧಿ ಉಚಿತವಾಗಿ ನೀಡಲಾಗುತ್ತಿತ್ತು.
ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್; ಇನ್ಮುಂದೆ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ
ಇನ್ನು ಮುಂದೆ 9 ಕೆಜಿ ಗೋಧಿ ಹಾಗೂ 5 ಕೆಜಿ ಸಿರಿಧಾನ್ಯ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇತರ ಪಡಿತರ ವಸ್ತುಗಳ ಪ್ರಮಾಣವನ್ನು ಕಡಿಮೆ ಮಾಡಿ ಸಿರಿಧಾನ್ಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಫಲಾನುಭವಿ ಕುಟುಂಬದವರು ಪೌಷ್ಟಿಕ ಆಹಾರ (nutrient food) ಸೇವಿಸಿದಂತೆ ಆಗುತ್ತದೆ ಎನ್ನುವುದು ಸರ್ಕಾರದ ನಿಲುವು.
ಇದೆ ಬರುವ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿಯೇ ಸಿರಿಧಾನ್ಯ ವಿತರಣೆ ಆರಂಭಿಸಲಾಗುವುದು ಎನ್ನುವ ಮಾಹಿತಿ ಇದೆ. ಒಟ್ಟಿನಲ್ಲಿ ಸಿರಿಧಾನ್ಯ ಕೂಡ ನೀಡಿದರೆ ಸಾಕಷ್ಟು ಕುಟುಂಬಕ್ಕೆ ಇನ್ನಷ್ಟು ಪೌಷ್ಟಿಕತೆ ಸಿಗಲಿದೆ.
ಗೃಹಲಕ್ಷ್ಮಿ 6ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇಂತಹವರಿಗೆ ಹಣ ವರ್ಗಾವಣೆ ಆಗೋಲ್ಲ
More benefits for ration card Holders, New service starting from tomorrow
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.