ನಿಮ್ಮ ಜಮೀನು ಅಕ್ಕ-ಪಕ್ಕದವರು ಒತ್ತುವರಿ ಮಾಡಿದ್ರೆ, ಈ ರೀತಿ ಮಾಡಿ ಸಾಕು!

ನಿಮ್ಮ ಜಮೀನು ಒತ್ತುವರಿ ಆಗಿದ್ದರೆ ಅದನ್ನು ತೆರವುಗೊಳಿಸುವುದು ಹೇಗೆ? ತಿಳಿಯಿರಿ

Bengaluru, Karnataka, India
Edited By: Satish Raj Goravigere

ಸಾಮಾನ್ಯವಾಗಿ ಹಳ್ಳಿ (village) ಗಳಲ್ಲಿ ಎಲ್ಲಾ ಕೃಷಿ ಭೂಮಿಗಳು (agriculture land) ಕೂಡ ಒಂದಕ್ಕೊಂದು ಹೊಂದಿಕೊಂಡೆ ಇರುತ್ತವೆ. ಹಾಗಾಗಿ ಎಷ್ಟೋ ಸಮಯದಲ್ಲಿ ಜಮೀನಿನ ಒತ್ತುವರಿ ಆಗುವ ಸಂದರ್ಭ ಎದುರಾಗಬಹುದು.

ಇದರಿಂದ ಎಷ್ಟೋ ರೈತರು ತಮ್ಮ ಇರುವ ಸ್ವಂತ ಜಮೀನನ್ನು (Own Property) ಕೂಡ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿದೆ. ಇದಕ್ಕೆ ನೀವು ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

Big update for those who have a house in government land

ರೈತರಿಗೆ ಭರ್ಜರಿ ಗಿಫ್ಟ್! ಕೃಷಿ ಉಪಕರಣಗಳ ಖರೀದಿಗೆ ಸಿಗಲಿದೆ 50% ರಿಯಾಯಿತಿ!

ಒತ್ತುವರಿ ತೆರವು ಗೊಳಿಸುವುದು ಹೇಗೆ?

ನೀನು ಹದ್ದುಬಸ್ತು (land survey) ಮಾಡುವ ಸಂದರ್ಭದಲ್ಲಿ, ಅಂದರೆ ನಿಮ್ಮ ಜಮೀನನ್ನು ಸರ್ವೇ ಮಾಡಿಸಿದ ಸಂದರ್ಭದಲ್ಲಿ, ನಿಮ್ಮ ಜಮೀನು ಅಕ್ಕಪಕ್ಕದವರಿಂದ ಒತ್ತುವರಿ ಆಗಿದೆ ಎಂದು ಕಂಡುಬಂದರೆ, ನೀವು ಅದನ್ನು ತೆರವುಗೊಳಿಸಬಹುದು. ಕರ್ನಾಟಕ ಲ್ಯಾಂಡ್ ರೆವೆನ್ಯೂ ರೂಲ್ಸ್ 1966 ಪ್ರಕಾರ ಒಬ್ಬ ಸರ್ವೆಯರ್ (surveyor) ನಿಮ್ಮ ಜಮೀನಿಗೆ ಬಂದು ಸರ್ವೇ ಮಾಡಿ ನಕ್ಷೆ ತಯಾರಿಸಿ ಕೊಟ್ಟರೆ ಅದು ಕಾನೂನು ಬದ್ಧವಾಗಿರುತ್ತದೆ. ಹಾಗಾಗಿ ಈ ನಕ್ಷೆಯಲ್ಲಿ ಭೂಮಿ ಒತ್ತುವರಿ ಆಗಿದ್ದು ಕಂಡು ಬಂದರೆ ಅದನ್ನ ತೆರವುಗೊಳಿಸಲು ಸಾಧ್ಯವಿದೆ.

ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪೆಂಡಿಂಗ್ ಹಣ ಪಡೆಯಲು ಈ ರೀತಿ ಮಾಡಿ!

ಹದ್ದುಬಸ್ತು ಮಾಡುವಾಗ ಈ ವಿಷಯ ನೆನಪಿನಲ್ಲಿ ಇರಲಿ!

ಸಾಕಷ್ಟು ಅರ್ಜಿದಾರರು ತಮ್ಮ ಜಮೀನು ಸರ್ವೆ ಮಾಡುವಾಗ ಪಕ್ಕದವರಿಗೆ ನೋಟಿಸ್ (notice) ಕೊಡುವುದಿಲ್ಲ. ಹೀಗೆ ನೋಟಿಸ್ ಕಳುಹಿಸಲು ಸರ್ಕಾರಕ್ಕೆ ಹಣ ಪಾವತಿ ಮಾಡಬೇಕು. ಇದೇ ಕಾರಣಕ್ಕೆ ಸಾಕಷ್ಟು ಜನ ನೋಟಿಸಿ ಕೊಡುವುದಿಲ್ಲ. ಆದರೆ ನೆನಪಿರಲಿ, ಅಕ್ಕ ಪಕ್ಕದ ಜಮೀನು ತನ್ನದ್ದು ಎನ್ನುವ ಗುಮಾನಿ ಇದ್ದು ಸರ್ವೇ ಮಾಡಿಸಿದರೆ ಅಕ್ಕಪಕ್ಕದವರ ಅನುಪಸ್ಥಿತಿಯಲ್ಲಿ ಅಥವಾ ಅವರಿಗೆ ನೋಟಿಸ್ ಕೊಡದೆ ಸರ್ವೇ ಮಾಡಿಸುವಂತಿಲ್ಲ.

ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್; ಇನ್ಮುಂದೆ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ

Property Documentsಸರ್ವೆ ಮಾಡುವ ಸಂದರ್ಭದಲ್ಲಿ ಪಕ್ಕದ ಜಮೀನಿಗೆ ಹೋಗಿ ಸರ್ವೆ ಮಾಡುವುದಿಲ್ಲ. ಅದು ಅಲ್ಲದೆ ಅಕ್ಕಪಕ್ಕದವರು ನೋಟಿಸ್ ಕೊಟ್ಟು ಸರ್ವೇ ಸಮಯದಲ್ಲಿ ಬಾರದೆ ಇದ್ದರೆ ಅದು ಅವರ ತಪ್ಪಾಗುತ್ತದೆ.

ಇನ್ನು ಸರ್ವೆ ಮಾಡಿಸುವ ಅರ್ಜಿದಾರನ ಹೆಸರಿನಲ್ಲಿ ಪಹಣಿ ಇರಬೇಕು ಆತನ ಜಮೀನನ್ನು ಮಾತ್ರ ಹದ್ದುಬಸ್ತು ಮಾಡಲಾಗುತ್ತದೆ. ತನ್ನ ಜಮೀನು ಒತ್ತುವರಿ ಆಗಿದೆ ಎನ್ನುವ ಕಾರಣಕ್ಕೆ ಹದ್ದುಬಸ್ತು ಮಾಡಿಸಿದರೆ ಸರ್ವೆ ಮಾಡಿದ ನಂತರ ಒತ್ತುವರಿ ಆಗಿರುವ ಜಮೀನನ್ನು ಆ ಸರ್ವೆಯರ್ ಗೆ ಬಿಡಿಸಿಕೊಡಲು ಅಧಿಕಾರ ಇರುವುದಿಲ್ಲ. ಇನ್ನು ಸರ್ವೆಯರ್ ಕೊಟ್ಟ ಮಾಹಿತಿ ಸರಿ ಇಲ್ಲ ಎನಿಸಿದರೆ ಅರ್ಜಿದಾರ ADLR ಗೆ ಅಪೀಲ್ ಹೋಗಬೇಕು.

ಗೃಹಲಕ್ಷ್ಮಿ 6ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇಂತಹವರಿಗೆ ಹಣ ವರ್ಗಾವಣೆ ಆಗೋಲ್ಲ

ಪಕ್ಕದ ಜಮೀನಿನವರು ಒತ್ತುವರಿ ಜಮೀನು ಬಿಟ್ಟು ಕೊಡದೆ ಇದ್ದಲ್ಲಿ ಸಿವಿಲ್ ಕೋರ್ಟ್ (civil court) ಗೆ ಇಂಜೆಕ್ಷನ್ ಅರ್ಜಿ ಸಲ್ಲಿಸಬಹುದು. ಬಳಿಕ ಕೋರ್ಟ್ ಮುಖಾಂತರ ಮತ್ತೊಮ್ಮೆ ಸರ್ವೆ ಮಾಡಿಸಲಾಗುತ್ತದೆ.

ಹಳ್ಳಿಯ ಗಣಕೀಕೃತ ನಕ್ಷೆ ಡೌನ್ಲೋಡ್ ಮಾಡಲು https://landrecords.karnataka.gov.in/service3/ಕ್ಲಿಕ್ ಮಾಡಿ. ನಿಮ್ಮ ಜಮೀನಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಮೊಬೈಲ್ ನಲ್ಲಿ ಪಡೆಯಬಹುದು ಮಾಹಿತಿ ಸಿಕ್ಕ ನಂತರ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

If your land is encroached upon by neighbors, just do this