ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್! ಇಂತಹವರಿಗೆ ಹಣ ಜಮಾ ಆಗೋಲ್ಲ
ಇನ್ನು ಮುಂದೆ ಗೃಹಲಕ್ಷ್ಮಿ (Gruha lakshmi scheme) ಅಥವಾ ಅನ್ನಭಾಗ್ಯ ಯೋಜನೆ (AnnaBhagya scheme) ಯ ಹಣ ನಿಮ್ಮ ಖಾತೆಗೆ (Bank Account) ಬಾರದೆ ಇರಬಹುದು, ಸರ್ಕಾರ ತಂದಿರುವ ಈ ಹೊಸ ರೂಲ್ಸ್ ನಿಮಗೂ ಅಪ್ಲೈ ಆಗಬಹುದು. ನಿಮ್ಮ ಖಾತೆಗೆ ಬರಬೇಕು ಅಂದ್ರೆ ತಕ್ಷಣ ಈ ಕೆಲಸವನ್ನು ಮಾಡಿಕೊಳ್ಳಿ.
ಹೌದು, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಯಾರು ಹಣವನ್ನು ಪಡೆದುಕೊಂಡಿದ್ದಿರೋ ಅಂತವರಿಗೆ ಸರ್ಕಾರ ಈಗ ಮತ್ತೊಂದು ಆಘಾತಕಾರಿ ವಿಷಯವನ್ನು ಹೊರಹಾಕಿದೆ. ಇನ್ನು ಮುಂದಿನ ಕಂತಿನ ಹಣ ಸಾಕಷ್ಟು ಮಹಿಳೆಯರಿಗೆ ಸಿಗದೇ ಹೋಗಬಹುದು. ಮುಖ್ಯವಾಗಿರುವ ಕಾರಣ ರೇಷನ್ ಕಾರ್ಡ್ ರದ್ದುಪಡಿ.
ರಾಜ್ಯ ಸರ್ಕಾರದ ಮತ್ತೊಂದು ಯೋಜನೆ; 1 ಲಕ್ಷ ಸಹಾಯಧನ ಜೊತೆಗೆ ಸ್ಕಾಲರ್ಶಿಪ್
ರೇಷನ್ ಕಾರ್ಡ್ ರದ್ದು ಪುಡಿ ಮಾಡುತ್ತಿರುವ ಸರ್ಕಾರ! (Ration card cancellation)
ಸರ್ಕಾರ ಬಹಳ ಮುತ್ತು ವರ್ಷದಿಂದ ಈ ಕೆಲಸ ಮಾಡುತ್ತಿದೆ ಇಲ್ಲಿಯವರೆಗೆ ಯಾರು ಅನರ್ಹರಾಗಿದ್ದು ಹಾಗೂ ವಂಚನೆ ಮಾಡಿ ಬಿಪಿಎಲ್ (BPL card) ಮತ್ತು ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದಾರೋ ಅಂತವರ ಕಾರ್ಡ್ ಅನ್ನು ರದ್ದುಪಡಿ ಮಾಡಲಾಗುತ್ತಿದೆ.
ಕಳೆದ ಎರಡು ತಿಂಗಳುಗಳಿಂದ ನಕಲಿ ಮತ್ತು ಅನರ್ಹರ ಬಳಿ ಇರುವ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುತ್ತಿದೆ. ಸರ್ಕಾರ ಈ ಕಾರ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇಂದು ಲಕ್ಷಾಂತರ ನಕಲಿ ಮತ್ತು ಅನರ್ಹರ ರೇಷನ್ ಕಾರ್ಡ್ ರದ್ದುಪಡಿಗೊಂಡಿದೆ.
ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ
ಯಾರ ಕಾರ್ಡ್ ರದ್ದುಪಡಿಸಲಾಗುತ್ತಿದೆ ಗೊತ್ತಾ?
ಐಷಾರಾಮಿ ಕಾರು ಹೊಂದಿರುವವರು, ಸುಳ್ಳು ದಾಖಲೆಗಳನ್ನು ನೀಡಿ ಪಡಿತರ ಚೀಟಿ ಪಡೆದುಕೊಂಡಿರುವವರು, ಎಲ್ಲಾ ಅನುಕೂಲಗಳು ಇದ್ದರೂ, ಸರ್ಕಾರದ ಮಾರದಂಡದ ಒಳಕ್ಕೆ ಬಾರದೇ ಇದ್ದರೂ ರೇಷನ್ ಕಾರ್ಡ್ ಪಡೆದುಕೊಂಡಿರುವವರು, ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು, ಸರ್ಕಾರಿ ನೌಕರಿಯಲ್ಲಿ ಇರುವವರು ಹೀಗೆ ಮೊದಲಾದವರು ಕೂಡ ರೇಷನ್ ಕಾರ್ಡ್ ಪಡೆದುಕೊಂಡಿರುವುದಕ್ಕೆ ಸರ್ಕಾರ ಗರಂ ಆಗಿದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗಿರುವ ಬಿಪಿಎಲ್ ಕಾರ್ಡ್ ಅಂಥವರಿಗೆ ಲಭ್ಯವಾಗ ಬೇಕೇ ಹೊರತು ಎಲ್ಲವನ್ನು ಹೊಂದಿರುವವರಿಗೆ ಅಲ್ಲ. ಎಂದು ರೇಷನ್ ಕಾರ್ಡ್ ರದ್ದುಪಡಿಯ ಬಗ್ಗೆ ಕಟ್ಟುನಿಟ್ಟಿನ ನಿರ್ಣಯ ಕೈಗೊಂಡಿದೆ.
ಮನೆ ಬಾಗಿಲಿಗೆ ಸರ್ಕಾರಿ ಸೇವೆ! ಸರ್ಕಾರದಿಂದ ಇನ್ನೊಂದು ಮಹತ್ವದ ಯೋಜನೆ
ಅನರ್ಹರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
https://ahara.kar.nic.in/Home/EServices ಆಹಾರ ಇಲಾಖೆಯ ಈ ವೆಬ್ಸೈಟ್ಗೆ ಭೇಟಿ ನೀಡಿ.
ಎಡಭಾಗದಲ್ಲಿ ಕಾಣಿಸುವ ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ ಆಗ ಈ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ನಂತರ cancelled / suspended ration card ಎನ್ನುವುದನ್ನು ಕಾಣುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.
ಮೂರನೇ ಹಂತದಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮೊದಲಾದವುಗಳನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ಒಂದು ಲಿಸ್ಟ್ ಓಪನ್ ಆಗುತ್ತದೆ.
ಇದು ರೇಷನ್ ಕಾರ್ಡ್ ರದ್ದು ಪಡಿ ಆಗಿರುವ ಹೆಸರುಗಳ ಲಿಸ್ಟ್ ಆಗಿರುತ್ತೆ. ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ. ಒಂದು ವೇಳೆ ರದ್ದುಪಡಿಸಲಾಗಿದ್ದರೆ ಅದಕ್ಕೆ ಕಾರಣವನ್ನು ಕೂಡ ತಿಳಿಸಿರುತ್ತಾರೆ.
ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ! 26,000 ಮಹಿಳೆಯರಿಗೆ ಸಿಗೋದಿಲ್ಲ ಹಣ
ಒಂದು ವೇಳೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಅದೇ ರೀತಿ ಮನೆಯ ಯಜಮಾನಿಯ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣವು ಬರುವುದಿಲ್ಲ. ಒಂದು ವೇಳೆ ತಪ್ಪಿ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಕೊಂಡಿದ್ದರೆ, ನೀವು ಹತ್ತಿರದ ಆಹಾರ ಇಲಾಖೆಯ ಕಚೇರಿಗೆ ಹೋಗಿ ಸರಿಯಾದ ಮಾಹಿತಿ ನೀಡಿ ಮತ್ತೆ ರೇಷನ್ ಕಾರ್ಡ್ ಹಿಂಪಡೆಯಬಹುದು.
New Rules for Gruha Lakshmi, Annabhagya Yojana, Money not deposit for such people
Our Whatsapp Channel is Live Now 👇