ರಾಜ್ಯ ಸರ್ಕಾರದ ಮತ್ತೊಂದು ಯೋಜನೆ; 1 ಲಕ್ಷ ಸಹಾಯಧನ ಜೊತೆಗೆ ಸ್ಕಾಲರ್ಶಿಪ್

ಯಾವುದೇ ವ್ಯಾಪಾರ ಮಾಡಲು ರಾಷ್ಟ್ರೀಕೃತ ಬ್ಯಾಂಕ್ (nationalised bank Loan) ನಿಂದ ಸಾಲ ಸೌಲಭ್ಯ ಪಡೆದುಕೊಳ್ಳಬಹುದು

ರಾಜ್ಯ ಸರ್ಕಾರ ರಾಜ್ಯದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತ ಸಾಕಷ್ಟು ಯೋಜನೆ (schemes) ಗಳನ್ನು ಜಾರಿಗೆ ತಂದಿದೆ. ಕೇವಲ ಹಿಂದುಳಿದ ಅಥವಾ ಪರಿಶಿಷ್ಟ ಜಾತಿ ಪಂಗಡದವರಿಗೆ ಸಹಾಯ ಮಾಡುವುದು ಮಾತ್ರವಲ್ಲದೆ ರಾಜ್ಯದಲ್ಲಿ ವಾಸಿಸುವ ಎಲ್ಲಾ ಬಡ ಜನರಿಗೆ ಸಹಾಯ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಬ್ರಾಹ್ಮಣರ ಶ್ರೇಯೋಭಿವೃದ್ಧಿಗಾಗಿ ಶೇಷ ಯೋಜನೆ ಒಂದನ್ನು ಜಾರಿಗೆ ತಂದಿದೆ.

ಸ್ವಾವಲಂಬಿ ಯೋಜನೆ! (Swavalambhi scheme)

ರಾಜ್ಯದಲ್ಲಿ ವಾಸಿಸುವ ಬಡ ಬ್ರಾಹ್ಮಣ ಸಮುದಾಯದವರು ತಮ್ಮದೇ ಆಗಿರುವ ಸ್ವಂತ ಉದ್ಯಮ (own business) ಆರಂಭಿಸಲು ಸ್ವಾವಲಂಬಿ ಯೋಜನೆಯ ಅಡಿಯಲ್ಲಿ ಸಹಾಯಧನ ನೀಡಲಾಗುವುದು.

ಯಾವುದೇ ಸ್ವ ಉದ್ಯಮ ವ್ಯಾಪಾರ ಹೈನುಗಾರಿಕೆ, ಹೊಲಿಗೆ ಯಂತ್ರ ಇಟ್ಟುಕೊಂಡು ಹೊಲಿಗೆ ಕೆಲಸ ಮಾಡುವುದು, ಅಂಗಡಿ, ಕಿರಾಣಿ ಅಂಗಡಿ, ಹಣ್ಣು ತರಕಾರಿ ಮಾರಾಟ, ಆಟಿಕೆ ತಯಾರಿಕೆ ಗುಡಿ ಕೈಗಾರಿಕೆ ಹೀಗೆ ಮೊದಲಾದ ಉದ್ಯಮವನ್ನು ಮಾಡಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಬಯಸುವ ಬ್ರಾಹ್ಮಣ ಸಮುದಾಯದ ಜನರಿಗೆ ಸಹಾಯಧನವನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ (minister Krishna bairagowda) ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮತ್ತೊಂದು ಯೋಜನೆ; 1 ಲಕ್ಷ ಸಹಾಯಧನ ಜೊತೆಗೆ ಸ್ಕಾಲರ್ಶಿಪ್ - Kannada News

ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ! 26,000 ಮಹಿಳೆಯರಿಗೆ ಸಿಗೋದಿಲ್ಲ ಹಣ

ಸ್ವಾವಲಂಬಿ ಯೋಜನೆಯಲ್ಲಿ ಯಾವುದೇ ವ್ಯಾಪಾರ ಮಾಡಲು ರಾಷ್ಟ್ರೀಕೃತ ಬ್ಯಾಂಕ್ (nationalised bank Loan) ನಿಂದ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಹಾಗೂ ಈ ಸಾಲಕ್ಕೆ (Loan Scheme) ಗರಿಷ್ಠ ಒಂದು ಲಕ್ಷ ರೂಪಾಯಿಗಳ ವರೆಗೆ ಸರಕಾರದ ಸಹಾಯಧನ ಸಿಗಲಿದೆ.

ಸ್ವಾವಲಂಬಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (documents)

ಯಾವ ಉದ್ಯಮ ಮಾಡುತ್ತೀರಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕು
ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಯಾವ ಬ್ಯಾಂಕ್ನಿಂದ ಸಾಲ ಪಡೆದುಕೊಂಡಿದ್ದೀರಿ ಎನ್ನುವುದರ ಬಗ್ಗೆ ಮಾಹಿತಿ ಸಲ್ಲಿಸಬೇಕು.

ರೇಷನ್ ಕಾರ್ಡ್ ಇರೋರಿಗೆ ಇನ್ನಷ್ಟು ಬೆನಿಫಿಟ್! ನಾಳೆಯಿಂದ ಹೊಸ ಸೇವೆ ಆರಂಭ

Loan Schemeಅರ್ಜಿ ಸಲ್ಲಿಸುವುದು ಹೇಗೆ? (How to apply)

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧಿಕೃತ ವೆಬ್ಸೈಟ್ಗೆ ಹೋಗಿ ಸ್ವಾವಲಂಬಿ ಯೋಜನೆಯ ಅರ್ಜಿ ಫಾರ್ಮ್ ಸಿಗುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳೊಂದಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಪೋಸ್ಟ್ ಮಾಡಿ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಹಾಯವಾಣಿ ಸಂಖ್ಯೆ – 08029605888.

ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪೆಂಡಿಂಗ್ ಹಣ ಪಡೆಯಲು ಈ ರೀತಿ ಮಾಡಿ!

ಸಾಂದೀಪಿನಿ ಶಿಷ್ಯವೇತನ ( sandipini scholarship)

ಬಡ ಬ್ರಾಹ್ಮಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಷ್ಯವೇತನವನ್ನು ಕೂಡ ನೀಡಲಾಗುತ್ತದೆ 10ನೇ ತರಗತಿ ಪಿಯುಸಿ ಹಾಗೂ ಸಿಇಟಿ ಬರೆದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 15000 ರೂ. ವಿದ್ಯಾರ್ಥಿ ವೇತನ ನೀಡಲಾಗುವುದು.

ಆದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31 2024 ಅಂದರೆ ದಿನಾಂಕ ಮುಗಿದು ಹೋಗಿದೆ. ಆದರೂ ನೀವು ಹತ್ತಿರದ ಗ್ರಾಮ ಒನ್ ನಲ್ಲಿ ಅಥವಾ ಮೇಲೆ ತಿಳಿಸಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿ.

Another scheme of the state government, 1 lakh subsidy and scholarship

Follow us On

FaceBook Google News

Another scheme of the state government, 1 lakh subsidy and scholarship