ಉಚಿತ ಕರೆಂಟ್ ಪಡೆಯುತ್ತಿರುವ ಬೆನ್ನಲ್ಲೇ ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ
ಈಗಾಗಲೇ ಲಕ್ಷಾಂತರ ಜನ ಗೃಹಜ್ಯೋತಿ ಯೋಜನೆಯ 200 ಯೂನಿಟ್ ಉಚಿತ ವಿದ್ಯುತ್ (free electricity) ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಇಂದು ಲಕ್ಷಾಂತರ ಜನ ಗೃಹಜ್ಯೋತಿ ಯೋಜನೆ (Gruha Jyothi scheme) ಅಡಿಯಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಕೂಡ ಒಂದಾಗಿದ್ದು, ಉತ್ತಮ ಯಶಸ್ಸನ್ನು (success) ಕಂಡಿದೆ ಎಂದು ಹೇಳಬಹುದು.
ಗೃಹಜ್ಯೋತಿ ಯೋಜನೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆಯನ್ನು ಇತ್ತೀಚಿಗೆ ತಂದಿದೆ ಇದಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ಕೇಳಿಕೊಂಡು ವಿದ್ಯುತ್ ಸರಬರಾಜು ಕಂಪನಿ (power supply companies) ಗಳನ್ನು ಸಂಪರ್ಕಿಸುವವರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.
ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ಪ್ಲಾನ್! ಮಹತ್ವದ ಬದಲಾವಣೆ
ವಿದ್ಯುತ್ ಸರಬರಾಜು ಕಂಪನಿಗಳಿಗೆ ಮಾಹಿತಿ ಕೋರಿ ಗ್ರಾಹಕರ ಕರೆ!
ಈಗಾಗಲೇ ಲಕ್ಷಾಂತರ ಜನ ಗೃಹಜ್ಯೋತಿ ಯೋಜನೆಯ 200 ಯೂನಿಟ್ ಉಚಿತ ವಿದ್ಯುತ್ (free electricity) ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿತ್ತು. ಮಾಸಿಕ 48 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುವವರಿಗೆ 10% ಬದಲು 10 ಯೂನಿಟ್ ಅನ್ನು ಉಚಿತವಾಗಿ ಹೆಚ್ಚುವರಿಯಾಗಿ ನೀಡಲು ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು.
ಹೆಚ್ಚು ಯೂನಿಟ್ ಬಳಕೆ ಮಾಡುವವರಿಗೆ ಇದು ಅಷ್ಟು ಪ್ರಯೋಜನಕಾರಿಯಲ್ಲ. ಆದರೆ ಕಡಿಮೆ ವಿದ್ಯುತ್ ಬಳಸುವವರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್! ಇಂತಹವರಿಗೆ ಹಣ ಜಮಾ ಆಗೋಲ್ಲ
ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (BESCOM) ಒಂದರಲ್ಲಿ ಸುಮಾರು 25 ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಉಳಿದವರು ಎಸ್ಕಾಂ (escom) ಗೆ ಸೇರಿದವರು.
ಜನವರಿ 15 ರವರೆಗೆ 1,65,48,007 ಜನರು ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇವುಗಳಲ್ಲಿ 68,41,494 ಜನರು ಬೆಸ್ಕಾಂ ವ್ಯಾಪ್ತಿಯಲ್ಲಿ ಬರುತ್ತಾರೆ.
ಇಂಧನ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ!
ಗೃಹಜ್ಯೋತಿ ಯೋಜನೆ ಬಹುತೇಕ ಸಕ್ಸಸ್ ಆಗಿದೆ ಎಂದೇ ಹೇಳಬಹುದು. ಈ ಯೋಜನೆಯಿಂದಾಗಿ ಉಚಿತ ವಿದ್ಯುತ್ ಪಡೆದುಕೊಳ್ಳುವುದಕ್ಕೆ ಗ್ರಾಹಕರು ಕಡಿಮೆ ವಿದ್ಯುತ್ ಬಳಕೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.
ಈ ರೀತಿ ಆದ್ರೆ ಮುಂದಿನ ದಿನಗಳಲ್ಲಿ ಉಚಿತ ವಿದ್ಯುತ್ ವಿತರಣೆ ಮಾಡಲು ಯಾವುದೇ ಸಮಸ್ಯೆ ಆಗುವುದಿಲ್ಲ ಹಾಗೂ ಹೆಚ್ಚಿನ ವಿದ್ಯುತ್ ಸಂಗ್ರಹವಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ರೇಷನ್ ಕಾರ್ಡ್ ಇರೋರಿಗೆ ಇನ್ನಷ್ಟು ಬೆನಿಫಿಟ್! ನಾಳೆಯಿಂದ ಹೊಸ ಸೇವೆ ಆರಂಭ
ಇನ್ನು ಸರ್ಕಾರ ಕಾಲಕ್ಕೆ ತಕ್ಕ ಹಾಗೆ ಯೋಜನೆಯಲ್ಲಿ ಅಗತ್ಯ ಇರುವ ಪರಿಷ್ಕರಣೆಯನ್ನು ಮಾಡುತ್ತೇವೆ. ರಾಜ್ಯದ ಬಳಿ ಹಣದ ಕೊರತೆ ಇಲ್ಲ. ಗ್ರಾಹಕರಿಗೆ ಕೊಡಲ್ಪಡುವ ಸಬ್ಸಿಡಿ ಹಾಗೂ ಉಚಿತ ವಿದ್ಯುತ್ ಬಿಲ್ ಅನ್ನು ನಿಯಮಿತವಾಗಿ ಸರ್ಕಾರ ಪಾವತಿ ಮಾಡುತ್ತಿದೆ.
ಬೆಸ್ಕಾಂ ಹಾಗೂ ಎಸ್ಕಾಂ ಮೊದಲಾದ ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ತಿಂಗಳ ಬಿಲ್ ಅನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ. ಹಾಗೂ ಸರ್ಕಾರದಿಂದ ಹಣ ರಿಲೀಸ್ ಆಗುತ್ತದೆ. ಜನವರಿ 15 ರವರೆಗೆ 1,65,48,007 ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 68,41,494 ಜನರು ಬೆಸ್ಕಾಂ ವ್ಯಾಪ್ತಿಯಲ್ಲಿದ್ದಾರೆ.
ಒಟ್ಟಿನಲ್ಲಿ ಗೃಹಜ್ಯೋತಿ ಯೋಜನೆಯಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ಆಗುತ್ತಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ಹೊಸ ಅರ್ಜಿ ಸಲ್ಲಿಕೆ ಗಿಂತಲೂ ನಿಯಮದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ವಿದ್ಯುತ್ ಸರಬರಾಜು ಕಂಪನಿ ಸಂಪರ್ಕಿಸುವವರ ಸಂಖ್ಯೆ ಜಾಸ್ತಿಯಾಗಿದೆ ಎನ್ನುವ ಮಾಹಿತಿ ಇದೆ.
ನಿಮ್ಮ ಜಮೀನು ಅಕ್ಕ-ಪಕ್ಕದವರು ಒತ್ತುವರಿ ಮಾಡಿದ್ರೆ, ಈ ರೀತಿ ಮಾಡಿ ಸಾಕು!
Changes in Gruha Jyothi Yojana after getting free electricity