ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ಪ್ಲಾನ್! ಮಹತ್ವದ ಬದಲಾವಣೆ

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ 5 ಕಂತಿನ ಹಣ ಬಿಡುಗಡೆ ಆಗಿ ಕೋಟ್ಯಂತರ ಮಹಿಳೆಯರ ಖಾತೆಯನ್ನು (Bank Account) ತಲುಪಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದರು ಕೂಡ, ಇದರ ಜೊತೆಗೆ ಸುಮಾರು ಐದರಿಂದ ಆರು ಲಕ್ಷ ಮಹಿಳೆಯರಿಗೆ ಇದುವರೆಗೆ ಗೃಹಲಕ್ಷ್ಮಿ ಬಾರದೆ ಇರುವುದು ಕೂಡ ಅಷ್ಟೇ ಸತ್ಯ.

ಉಳಿದವರಿಗೆ ಹಣ ಬರುತ್ತಿರುವಂತೆ ನಮಗೆ ಮಾತ್ರ ಯಾಕೆ ಬರುತ್ತಿಲ್ಲ ಎನ್ನುವುದು ಗೃಹಿಣಿಯರ ಪ್ರಶ್ನೆ. ಈಗಾಗಲೇ ಸಾಕಷ್ಟು ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಹ ಫಲಾನುಭವಿ ಮಹಿಳೆಯರ (beneficiary) ಖಾತೆಗೂ ಕೂಡ ಹಣ ಯಾಕೆ ಬರುತ್ತಿಲ್ಲ ಎಂದು ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ.

ಸ್ವಂತ ಉದ್ಯಮ ಆರಂಭಿಸಲು ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂ.! ಅರ್ಜಿ ಸಲ್ಲಿಸಿ

ಮಹಿಳೆಯರ ಖಾತೆಗೆ (Bank Account) ಹಣ ಜಮಾ ಮಾಡಲು ಸರ್ಕಾರ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈಗಾಗಲೇ ಕ್ಯಾಂಪ್ (camp) ನಡೆಸಿ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರ ಸಮಸ್ಯೆಯನ್ನು ಕೇಳಲಾಗಿತ್ತು. ಗ್ರಾಮೀಣ ಮಟ್ಟದಲ್ಲಿ ನಡೆದ ಕ್ಯಾಂಪ್ ನಲ್ಲಿ ಸುಮಾರು ನಾಲ್ಕು ಲಕ್ಷ ಮಹಿಳೆಯರು ಭಾಗವಹಿಸಿದ್ದರು.

ಮತ್ತೆ ಗೃಹಲಕ್ಷ್ಮಿ ಅದಾಲತ್ ಆರಂಭ!

ಈ ಹಿಂದೆಯು ಗ್ರಾಮಗಳಲ್ಲಿ ಗೃಹಲಕ್ಷ್ಮಿ ಅದಾಲತ್ (Gruha lakshmi Adalat) ನಡೆಸಲಾಗಿತ್ತು ಅಂದ್ರೆ ಯಾವುದೇ ಮಹಿಳೆ ತನ್ನ ಖಾತೆಗೆ ಹಣ ಜಮಾ ಆಗದೆ ಇದ್ದರೆ ಗ್ರಾಮ ಪಂಚಾಯತ್ (Gram Panchayat) ಗೆ ಹೋಗಿ ದೂರು ಸಲ್ಲಿಸಬಹುದು. ಅಥವಾ ಹತ್ತಿರದ ಸಿಡಿಪಿಒ (cdpo office) ಕಚೇರಿಗೆ ಹೋಗಿ ಮಾಹಿತಿ ನೀಡಬಹುದು.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್! ಇಂತಹವರಿಗೆ ಹಣ ಜಮಾ ಆಗೋಲ್ಲ

ಇದೀಗ ಮತ್ತೆ ಗೃಹಲಕ್ಷ್ಮಿ ಅದಾಲತ್ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಹೋಗಿ ಮಹಿಳೆಯರ ಖಾತೆಗೆ ಹಣ ಜಮಾ ಆಗದೆ (Money Deposit) ಇದ್ದರೆ ಅದಕ್ಕೆ ಸೂಕ್ತ ಕಾರಣಗಳನ್ನು ತಿಳಿದುಕೊಂಡು ಲಿಸ್ಟ್ ಮಾಡಿಕೊಂಡು ಬರಲಿದ್ದಾರೆ. ಅರ್ಹ ಮಹಿಳೆಯರ ಖಾತೆಗೆ ಹಣ ಬಾರದೇ ಇದ್ದರೆ ಆ ಲಿಸ್ಟ್ ತಯಾರಿಸಿ ಸರ್ಕಾರಕ್ಕೆ ಸಬ್ಮಿಟ್ ಮಾಡಬೇಕು.

Gruha Lakshmi Yojanaಮಹಿಳೆಯರು ಮುಂದಿನ ಕಂತಿನ ಹಣ ಪಡೆದುಕೊಳ್ಳಲು ಸಹಾಯಕವಾಗುವ ಎಲ್ಲಾ ಕೆಲಸಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ಮಹಿಳೆಯರು ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು.

ಇದಕ್ಕಾಗಿ ಕಚೇರಿಗೆ ಭೇಟಿ ನೀಡುವಾಗ ತಪ್ಪದೇ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಅರ್ಜಿ ಸಲ್ಲಿಸಿದಾಗ ಕೊಟ್ಟಿರುವ ಸ್ವೀಕೃತಿ ಪ್ರತಿ ಕೂಡ ತೆಗೆದುಕೊಂಡು ಹೋಗಿ. ಇಲ್ಲಿನ ಅಧಿಕಾರಿಗಳು ನಿಮ್ಮ ಗೃಹಲಕ್ಷ್ಮಿ ಖಾತೆಯನ್ನು ಪರಿಶೀಲಿಸಿ ಯಾಕೆ ಹಣ ಜಮಾ ಆಗುತ್ತಿಲ್ಲ ಎನ್ನುವ ಸ್ಪಷ್ಟ ಕಾರಣವನ್ನು ತಿಳಿಸುತ್ತಾರೆ ಹಾಗೂ ಪರಿಹಾರವನ್ನು ಸೂಚಿಸುತ್ತಾರೆ.

ರೇಷನ್ ಕಾರ್ಡ್ ಇರೋರಿಗೆ ಇನ್ನಷ್ಟು ಬೆನಿಫಿಟ್! ನಾಳೆಯಿಂದ ಹೊಸ ಸೇವೆ ಆರಂಭ

ಇದೇ ಫೆಬ್ರವರಿ ಮೊದಲ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಜನವರಿ ತಿಂಗಳ ಹಣವಾಗಿರುತ್ತೆ. ಹಣ ಬಿಡುಗಡೆ ಆದ 15ರಿಂದ 20 ದಿನಗಳ ಒಳಗೆ ಫಲಾನುಭವಿ ಮಹಿಳೆಯರ ಖಾತೆಗೆ ತಲುಪಲಿದೆ. ಕಡೆ ಪಕ್ಷ ಈ ತಿಂಗಳಿನಿಂದಾದರೂ ನಿಮ್ಮ ಖಾತೆಗೆ ಹಣ ಜಮಾ ಆಗಬೇಕು ಅಂದ್ರೆ ತಕ್ಷಣ ಈ ಮೇಲೆ ತಿಳಿಸಿದ ಕೆಲಸವನ್ನು ಮಾಡಿ.

ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪೆಂಡಿಂಗ್ ಹಣ ಪಡೆಯಲು ಈ ರೀತಿ ಮಾಡಿ!

Government Mega Plan to Transfer Gruha Lakshmi Yojana Money

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories