ಸ್ವಂತ ಉದ್ಯಮ ಆರಂಭಿಸಲು ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂ.! ಅರ್ಜಿ ಸಲ್ಲಿಸಿ
Loan Scheme : ಹೆಚ್ಚು ಬಡ್ಡಿಯನ್ನು ಪಾವತಿ ಮಾಡದೆ ಸುಲಭವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು.
Loan Scheme : ಸರ್ಕಾರ (State government) ಮಹಿಳೆಯರಿಗಾಗಿ ಮತ್ತೊಂದು ಬಂಪರ್ ಗಿಫ್ಟ್ ನೀಡಲಿದೆ. ಈ ಹೊಸ ಯೋಜನೆಯ ಅಡಿಯಲ್ಲಿ ಯಾವುದೇ ಗ್ಯಾರಂಟಿ ಕೊಡದೆ ಹೆಚ್ಚು ಬಡ್ಡಿಯನ್ನು ಪಾವತಿ ಮಾಡದೆ ಸುಲಭವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು.
ನೀವು ಸಾಲ ತೆಗೆದುಕೊಂಡು ಉದ್ಯಮ (own business) ಆರಂಭಿಸಿ ಉತ್ತಮ ಆದಾಯ ಗಳಿಸಬಹುದು ಹಾಗೂ ಈ ಸಾಲದ ಅರ್ಧದಷ್ಟು ಹೊಣೆಗಾರಿಕೆಯನ್ನು ಸರ್ಕಾರವೇ ಹೊತ್ತುಕೊಳ್ಳುತ್ತದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್! ಇಂತಹವರಿಗೆ ಹಣ ಜಮಾ ಆಗೋಲ್ಲ
ಉದ್ಯೋಗಿನಿ ಯೋಜನೆ! (Udyogini scheme)
ಸ್ವಂತ ಉದ್ಯಮ ಮಾಡುವ ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು 3 ಲಕ್ಷ ರೂಪಾಯಿಗಳನ್ನು ಬಡ್ಡಿ ರಹಿತ ಸಾಲವನ್ನಾಗಿ ಪಡೆಯಬಹುದು ಜೊತೆಗೆ ಯಾವುದೇ ಹೆಚ್ಚಿನ ದಾಖಲೆಗಳನ್ನು ಕೂಡ ನೀಡಬೇಕಾಗಿಲ್ಲ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಉದ್ಯೋಗಿನಿ ಯೋಜನೆ ಸಹಾಯಕವಾಗಲಿದೆ.
ಯಾರು ಯೋಜನೆಗೆ ಅರ್ಜಿ ಸಲ್ಲಿಸಬಹುದು? (Who can apply for this scheme)
ಆರ್ಥಿಕವಾಗಿ ಹಿಂದುಳಿದ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರು ವಿಧವಾ ಮಹಿಳೆಯರು, ಅಂಗವೈಕಲ್ಯತೆ ಹೊಂದಿರುವ ಮಹಿಳೆಯರು ಹಾಗೂ ಸಾಮಾನ್ಯ ಮಹಿಳೆಯರು ಕೂಡ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ (loan facility) ಪಡೆಯಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ! 26,000 ಮಹಿಳೆಯರಿಗೆ ಸಿಗೋದಿಲ್ಲ ಹಣ
ಪರಿಶಿಷ್ಟರ ಜಾತಿ (scheduled cast) ಮತ್ತು ಪರಿಶಿಷ್ಟ ಪಂಗಡದ (scheduled tribes) ಮಹಿಳೆಯರು 3,00,000 ರೂ. ಸಾಲಕ್ಕೆ 1,50,000 ರೂ. ಗಳ ರಿಯಾಯಿತಿ ಅಥವಾ ಶೇಕಡ 50% ನಷ್ಟು ಸಬ್ಸಿಡಿ (subsidy) ಪಡೆದುಕೊಳ್ಳಬಹುದು. ಸಾಮಾನ್ಯ ಮಹಿಳೆಯರು 3 ಲಕ್ಷ ರೂಪಾಯಿಗಳ ಸಾಲಕ್ಕೆ ಗರಿಷ್ಠ 90 ಸಾವಿರ ರೂಪಾಯಿ ಅಥವಾ 30% ನಷ್ಟು ಸಬ್ಸಿಡಿ ಪಡೆಯಬಹುದು.
ಉದ್ಯೋಗಿನಿ ಯೋಜನೆಗೆ 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಮಹಿಳೆಯರ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಳು ಮೀರಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ವಾರ್ಷಿಕ ಆದಾಯ (income) 2 ಲಕ್ಷ ಮೀರಬಾರದು.
ರೇಷನ್ ಕಾರ್ಡ್ ಇರೋರಿಗೆ ಇನ್ನಷ್ಟು ಬೆನಿಫಿಟ್! ನಾಳೆಯಿಂದ ಹೊಸ ಸೇವೆ ಆರಂಭ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (needed documents to apply)
ಆಧಾರ್ ಕಾರ್ಡ್
ಆದಾಯ ಪ್ರಮಾಣ
ಜಾತಿ ಪ್ರಮಾಣ ಪತ್ರ
ಅಂಗವಿಕಲತೆ ಇದ್ದರೆ ದೃಢೀಕರಣ ಪ್ರಮಾಣ ಪತ್ರ
ಮಾಡುವ ಉದ್ಯಮದ ಬಗ್ಗೆ ಮಾಹಿತಿ
ಪಾಸ್ ಪೋರ್ಟ್ ಅಳತೆಯ ಫೋಟೋ
ವಿಳಾಸದ ಪುರಾವೆಯಾಗಿ ಮನೆಯ ಅಗ್ರಿಮೆಂಟ್, ವಿದ್ಯುತ್ ಬಿಲ್, ರೇಷನ್ ಕಾರ್ಡ್ ಅಥವಾ ಇತರ ದಾಖಲೆಗಳು
ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪೆಂಡಿಂಗ್ ಹಣ ಪಡೆಯಲು ಈ ರೀತಿ ಮಾಡಿ!
ಎಲ್ಲಿ ಅರ್ಜಿ ಸಲ್ಲಿಸಬೇಕು? (Where to apply)
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಹೋಗಿ ಸರಿಯಾದ ಮಾಹಿತಿ ಮತ್ತು ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಉದ್ಯೋಗಿನಿ ಯೋಜನೆಯ ಸಾಲವನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ, ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದು.
ಟೈಲರಿಂಗ್, ಬ್ಯೂಟಿ ಪಾರ್ಲರ್, ಕಿರಾಣಿ ಅಂಗಡಿ, ಹಣ್ಣು ಹೂವುಗಳ ಮಾರಾಟ, ಮೀನು ಮಾರಾಟ, ಚಾ ಕಾಫಿ ಮಾರಾಟ, ಬೇಕರಿ 88ಕ್ಕೂ ಹೆಚ್ಚಿನ ಸ್ವಂತ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಮಹಿಳೆಯರು ಸ್ವಂತ ಉದ್ಯಮ (Own Business) ಮಾಡಿ ಹಣ ಸಂಪಾದಿಸಿ ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ ಉದ್ಯೋಗಿನಿ ಯೋಜನೆ ಬಹಳ ಸಹಾಯಕಾರಿಯಾಗಿದೆ.
Women will get Rs 3 lakh to start their own business from This Scheme