ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್ ಮಾಡಿ
ಈಗಾಗಲೇ ಸಾಕಷ್ಟು ರೇಷನ್ ಕಾರ್ಡ್ (Ration Card) ಅನ್ನು ಸರ್ಕಾರ ರದ್ದುಪಡಿಸಿದೆ. ಇದೀಗ ಆಹಾರ ಇಲಾಖೆ, ಜನವರಿ ತಿಂಗಳಿನಲ್ಲಿ ರದ್ದುಪಡಿಸಲಾಗಿರುವ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದ್ದು, ಈ ಲಿಸ್ಟ್ ನಲ್ಲಿ ಯಾರ ಹೆಸರು ಇದೆಯೋ ಅಂತವರು ಇನ್ನು ಮುಂದೆ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ (Annabhagya scheme) ಅಥವಾ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಈಗಾಗಲೇ ಲಕ್ಷಾಂತರ ಪಡಿತರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವ ಅಥವಾ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ರೇಷನ್ ಕಾರ್ಡ್ ಪಡೆದುಕೊಂಡಿರುವ ಕಾರ್ಡ್ ರದ್ದುಪಡಿ ಮಾಡಲಾಗುತ್ತಿದೆ.
ಗೃಹಜ್ಯೋತಿ ಉಚಿತ ಕರೆಂಟ್ ಬಳಕೆದಾರರಿಗೆ ಇನ್ನೊಂದು ಸಿಹಿಸುದ್ದಿ! ಈಗ ಇನ್ನಷ್ಟು ಫ್ರೀ
ಪ್ರತಿ ತಿಂಗಳು ಜಿಲ್ಲಾವಾರು ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗಿರುವ ಪಟ್ಟಿಯನ್ನು ಆಹಾರ ಇಲಾಖೆ (food department) ಬಿಡುಗಡೆ ಮಾಡುತ್ತಿದ್ದು, ಇದನ್ನ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಚೆಕ್ ಮಾಡಬಹುದು. ರೇಷನ್ ಕಾರ್ಡ್ ಒಂದು ಬಾರಿ ರದ್ದು ಪಡಿ ಆದರೆ ಮತ್ತೆ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ರೇಷನ್ ಕಾರ್ಡ್ ರದ್ದುಪಡಿ ಲಿಸ್ಟ್ ಚೆಕ್ ಮಾಡಿ! (Check ration card cancel list)
ಕೆಲವರು ರೇಷನ್ ಕಾರ್ಡ್ ರದ್ದುಪಡಿ ಮಾಡಿದ ನಂತರ ಪಟ್ಟಿಯನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ರೇಷನ್ ಕಾರ್ಡನ್ನು ಯಾವ ಕಾರಣಕ್ಕೆ ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಮಾಹಿತಿಗೂ ಕೂಡ ಇರುತ್ತದೆ. ಒಂದು ವೇಳೆ ಈ ಮಾನದಂಡಗಳ ಒಳಗೆ ನೀವು ಇದ್ದು, ತಪ್ಪಾಗಿ ನಿಮ್ಮ ಹೆಸರು ನಮೂದಿಸಲ್ಪಟ್ಟಿದ್ದರೆ, ನೀವು ಆಹಾರ ಇಲಾಖೆಗೆ ದೂರು ಸಲ್ಲಿಸಿ ನಿಮ್ಮ ರೇಷನ್ ಕಾರ್ಡ್ ಅನ್ನು ಹಿಂಪಡೆಯಲು ಸಾಧ್ಯವಿದೆ.
ರೇಷನ್ ಕಾರ್ಡ್ ಇರೋರಿಗೆ ಇನ್ನೊಂದು ಹೊಸ ಸೌಲಭ್ಯ! ಮಹತ್ವದ ನಿರ್ಧಾರ
ಪಡಿತರ ಚೀಟಿ ರದ್ದುಪಡಿ ಲಿಸ್ಟ್ ಅಲ್ಲಿ ನಿಮ್ಮ ಅಥವಾ ನಿಮ್ಮ ಆಪ್ತ ವಲಯದ ಯಾರದ್ದೇ ರೇಷನ್ ಕಾರ್ಡ್ ರದ್ದಾದರೂ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್, https://ahara.kar.nic.in/ ಭೇಟಿ ನೀಡಿ.
ಇ – ಸರ್ವಿಸ್ ವಿಭಾಗಕ್ಕೆ ಹೋಗಿ. ಎಡಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಇ – ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ರದ್ದುಪಡಿ ಮಾಡಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
ಮುಂದಿನ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಮತ್ತು ವರ್ಷ ಆಯ್ಕೆ ಮಾಡಿ ಗೋ ಎಂದು ಮಾಡಿ.
ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಮತ್ತೊಂದು ರೂಲ್ಸ್; ಹೊಸ ಅಪ್ಡೇಟ್
ಈಗ ನಿಮ್ಮ ಮುಂದೆ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿರುವ ಅಥವಾ ಕ್ಯಾನ್ಸಲ್ ಆಗಬಹುದಾದ ಪಟ್ಟಿ (cancelled / suspended list) ಕಾಣಿಸುತ್ತದೆ. ನಿಮ್ಮ ತಾಲೂಕಿನಲ್ಲಿ ಯಾರ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆಯೋ ಎಲ್ಲರ ಹೆಸರನ್ನು ಇಲ್ಲಿ ನೋಡಬಹುದು. ಒಂದು ವೇಳೆ ನಿಮ್ಮ ಹೆಸರು ಕೂಡ ಈ ಲಿಸ್ಟ್ ನಲ್ಲಿ ಇದ್ರೆ, ನಿಮಗೆ ಮುಂದಿನ ತಿಂಗಳಿನಿಂದ ಯಾವುದೇ ಗ್ಯಾರಂಟಿ ಯೋಜನೆಯ ಹಣ DBT ಆಗುವುದಿಲ್ಲ.
Canceled ration card list released, Check your name in the list