ರೇಷನ್ ಕಾರ್ಡ್ ಇರೋರಿಗೆ ಇನ್ನೊಂದು ಹೊಸ ಸೌಲಭ್ಯ! ಮಹತ್ವದ ನಿರ್ಧಾರ
ಇಂದಿನ ದಿನದಲ್ಲಿ ಪಡಿತರ ಕಾರ್ಡ್ (Ration Card) ಎನ್ನುವುದು ಒಂದು ಪ್ರಮುಖ ದಾಖಲೆಯಾಗಿದೆ. ಪಡಿತರ ಕಾರ್ಡ್ನಲ್ಲಿ ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಬಿಪಿಎಲ್ ಪಡಿತರ ಕಾರ್ಡ್ (BPL Ration Card) ಹಾಗೂ ಬಡತನ ರೇಖೆಗಿಂತ ಮೇಲಿರುವವರಿಗೆ ಎಎವೈ ಕಾರ್ಡ್ (AAY card) ಅಥವಾ ಅಂತ್ಯೋದಯ ಕಾರ್ಡ್ ನೀಡಲಾಗುತ್ತದೆ. ಯಾವುದೇ ಕಾರ್ಡ್ ಇರಲಿ. ಪ್ರತಿಯೊಂದು ಕುಟುಂಬವೂ ಸಹ ಪಡಿತರ ಕಾರ್ಡ್ ಹೊಂದಿರುವುದು ಇಂದಿನ ದಿನದಲ್ಲಿ ಅತ್ಯವಶ್ಯವಾಗಿದೆ.
ಪಡಿತರ ಕಾರ್ಡ್, ಪ್ರತಿ ತಿಂಗಳು ಪಡಿತರ ಪಡೆಯಲೂ ಮಾತ್ರವಲ್ಲದೆ ಸರ್ಕಾರದ ಅನೇಕ ಯೋಜನೆಗಳಿಗೆ ಪ್ರಮುಖ ದಾಖಲೆಯಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಷ್ಮಿ ಯೋಜನೆ (Gruha lakshmi scheme) , ಗೃಹ ಜ್ಯೋತಿ ಸೇರಿದಂತೆ ಅನೇಕ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಮಾನದಂಡವಾಗಿ ಬಳಸಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಮತ್ತೊಂದು ರೂಲ್ಸ್; ಹೊಸ ಅಪ್ಡೇಟ್
ಹಾಗಾಗಿ ಪಡಿತರ ಚೀಟಿ ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿದೆ. ಅಲ್ಲದೆ ಈಗ ಆಧಾರ್ ಕಾರ್ಡ್ಗೆ (Aadhaar card) ಪಡಿತರ ಕಾರ್ಡ್ ಲಿಂಕ್ ಮಾಡಿರುವುದರಿಂದ ಇನ್ಮುಂದೆ ಇನ್ನೂ ಅನೇಕ ಯೋಜನೆಗಳಿಗೂ ಪಡಿತರ ಕಾರ್ಡ್ ಬಳಕೆ ಆಗುವುದು ನಿಶ್ಚಿತ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಸರ್ಕಾರದ ಹಾಗೂ ವಿವಿಧ ಸಂಸ್ಥೆಗಳು ನೀಡುವ ವಿದ್ಯಾರ್ಥಿ ವೇತನ ಪಡೆಯಲು, ಆರೋಗ್ಯ ಸಂಬಂಧಿತ ಚಿಕಿತ್ಸೆಗಳನ್ನು ಉಚಿತವಾಗಿ ನೀಡುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಯೋಜನೆ (Ayushman scheme) ಪ್ರಯೋಜನ ಪಡೆಯಲು ಪಡಿತರ ಚೀಟಿ ಅವಶ್ಯವಾಗಿದೆ.
ರೈತರೇ ಇರಲಿ, ವಿದ್ಯಾರ್ಥಿಗಳೇ ಇರಲಿ, ಕೂಲಿ ಕಾರ್ಮಿಕರೇ ಇರಲಿ ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕು, ತಾವು ಸಹ ಸರ್ಕಾರಿ ಯೋಜನೆ ಫಲಾನುಭವಿ ಆಗಬೇಕು ಎಂದಾದರೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಅವಶ್ಯವಾಗಿದೆ.
ಸರ್ಕಾರಿ ಜಾಗ ಒತ್ತುವರಿ ಹಾಗೂ ಮನೆ ಕಟ್ಟಿಕೊಂಡವರಿಗೆ ರಾತ್ರೋ-ರಾತ್ರಿ ಹೊಸ ರೂಲ್ಸ್!
ಸದ್ಯ ನಮ್ಮ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ (AnnaBhagya scheme) ಅಡಿಯಲ್ಲಿ 10 ಕೆ.ಜಿ. ಅಕ್ಕಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಹೆಚ್ಚುವರಿ ಅಕ್ಕಿ ಸಿಗದ ಕಾರಣ 5 ಕೆ.ಜಿ. ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ.
ಪಡಿತರ ವಸ್ತುವಿನ ಜೊತೆಗೆ ಇದನ್ನು ನೀಡಲಾಗುತ್ತೆ!
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಸರ್ಕಾರ ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆ ಸಿರಿಧಾನ್ಯವನ್ನು ನೀಡಲು ಮುಂದಾಗಿದೆ. ಇದುವರೆಗೆ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ 21 ಕೆ.ಜಿ. ಅಕ್ಕಿ, 14 ಕೆ.ಜಿ. ಗೋಧಿ ನೀಡಲಾಗುತ್ತಿತ್ತು. ಇನ್ಮುಂದೆ ಅಕ್ಕಿಯ ಜೊತೆ 9 ಕೆ.ಜಿ ಗೋಧಿ, 5 ಕೆ.ಜಿ. ಸಿರಿಧಾನ್ಯ (siri dhaanya) ನೀಡಲಾಗುತ್ತದೆ.
ಉಚಿತ ಕರೆಂಟ್ ಪಡೆಯುತ್ತಿರುವ ಬೆನ್ನಲ್ಲೇ ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ
ಇತರ ಪಡಿತರ ವಸ್ತುಗಳ ಪ್ರಮಾಣ ಕಡಿಮೆ ಮಾಡಿ ಸಿರಿಧಾನ್ಯ ನೀಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಬಡತನ ರೇಖೆಗಿಂತ ಕೆಳಗಿರುವ ಜನರು ಸಹ ಪೌಷ್ಟಿಕ ಆಹಾರ (nutrient food) ಸೇವಿಸಬೇಕು. ಅವರು ಸಹ ಸದಾ ಕಾಲ ಆರೋಗ್ಯವಂತರಾಗಿರಬೇಕು ಎನ್ನುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಪಡಿತರದಲ್ಲಿ ಸಿರಿಧಾನ್ಯವನ್ನು ನೀಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಫೆಬ್ರವರಿ ತಿಂಗಳಿನಿಂದಲೇ ಈ ಯೋಜನೆ ಜಾರಿ ಆಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
Another new facility for Ration Card Holders, Govt important decision