ಗೃಹಜ್ಯೋತಿ ಉಚಿತ ಕರೆಂಟ್ ಬಳಕೆದಾರರಿಗೆ ಇನ್ನೊಂದು ಸಿಹಿಸುದ್ದಿ! ಈಗ ಇನ್ನಷ್ಟು ಫ್ರೀ

ಸರ್ಕಾರದಿಂದ ಗೃಹ ಜ್ಯೋತಿ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನೂ ಹೆಚ್ಚು ಫ್ರಿ ಸಿಗುತ್ತೆ ವಿದ್ಯುತ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Congress government) ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ ಮಾತಿನಂತೆ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ.

ಮಹಿಳೆಯರು ಬಸ್ನಲ್ಲಿ ರಾಜ್ಯದೊಳಗೆ ಉಚಿತವಾಗಿ ಓಡಾಡುವ ಶಕ್ತಿ ಯೋಜನೆ (Shakti scheme) , ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿಯೊಬ್ಬರಿಗೆ 5 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಭತ್ಯೆ ನೀಡುವ ಯುವ ನಿಧಿ ಇದರ ಜೊತೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ (unit) ಉಚಿತ ವಿದ್ಯುತ್ (free electricity) ನೀಡುವ ಗೃಹ ಜ್ಯೋತಿ ಯೋಜನೆ (Gruha jyothi scheme) ಜಾರಿಗೆ ತರಲಾಗಿದೆ.

ರೇಷನ್ ಕಾರ್ಡ್ ಇರೋರಿಗೆ ಇನ್ನೊಂದು ಹೊಸ ಸೌಲಭ್ಯ! ಮಹತ್ವದ ನಿರ್ಧಾರ

ಗೃಹಜ್ಯೋತಿ ಉಚಿತ ಕರೆಂಟ್ ಬಳಕೆದಾರರಿಗೆ ಇನ್ನೊಂದು ಸಿಹಿಸುದ್ದಿ! ಈಗ ಇನ್ನಷ್ಟು ಫ್ರೀ - Kannada News

ಈ ಗೃಹ ಜ್ಯೋತಿ ಯೋಜನೆಯನ್ನು ಕಲ್ಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉದ್ಘಾಟಿಸಿದರು. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರ ಮನೆಗೂ 200 ಯೂನಿಟ್ ವರೆಗೆ ಬಳಸುವ ವಿದ್ಯುತ್ ಬಿಲ್ (Electricity Bill), ಸರ್ಕಾರವೇ ಪಾವತಿಸಲಿದೆ. ಈ ಯೋಜನೆಯ ಲಾಭವನ್ನು ರಾಜ್ಯದ ಕೊಟ್ಯಂತರ ಜನರು ಪಡೆದುಕೊಂಡಿದ್ದಾರೆ.

ಉಚಿತ ವಿದ್ಯುತ್ ಬಳಕೆದಾರರಿಗೆ ಮತ್ತೊಂದು ಕೊಡುಗೆ!

ಇದೀಗ ರಾಜ್ಯ ಸರ್ಕಾರವು ಈ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮತ್ತಷ್ಟು ವಿದ್ಯುತ್ ಉಚಿತವಾಗಿ ನೀಡಲು ಮುಂದಾಗಿದೆ.
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಜನರು ಬಳಸುವ ವಾರ್ಷಿಕ ಯೂನಿಟ್ ಲೆಕ್ಕ ಹಾಕಿ ಅದರ ಪ್ರಕಾರ ಎಷ್ಟು ವಿದ್ಯುತ್ ಬಳಕೆ ಮಾಡಬಹುದು ಎಂದು ತಿಳಿಸಲಾಗುತ್ತದೆ. ಈ ನಿಗದಿತ ಬಳಕೆಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ.

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಮತ್ತೊಂದು ರೂಲ್ಸ್; ಹೊಸ ಅಪ್ಡೇಟ್

electricity Bill48 ಯೂನಿಟ್ಗಿಂತ ಕಡಿಮೆ ಬಳಕೆ ಮಾಡುವವರಿಗೆ 1೦ ಯೂನಿಟ್ ಹೆಚ್ಚುವರಿ ಉಚಿತ:

ಗೃಹಜ್ಯೋತಿ ಯೋಜನೆ ಅಡಿಯಲ್ಲಿ 48 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ರಾಜ್ಯದ 70 ಲಕ್ಷ ವಿದ್ಯುತ್ ಬಳಕೆದಾರರಿಗೆ ಇನ್ಮುಂದೆ ಹೆಚ್ಚುವರಿ 10 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಅಂದರೆ ಇನ್ಮುಂದೆ 58 ಯೂನಿಟ್ ವರೆಗೆ ಬಳಕೆ ಮಾಡಿದರೂ ಅವರಿಗೆ ಯಾವುದೇ ರೀತಿಯ ಬಿಲ್ ಪಾವತಿ ಮಾಡುವ ಅಗತ್ಯ ಬೀಳುವುದಿಲ್ಲ. ಅವರ ವಿದ್ಯುತ್ ಬಿಲ್ನ್ನು ರಾಜ್ಯ ಸರ್ಕಾರವೇ ಬರಿಸಲಿದೆ. ಈ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ (CM siddaramaiah) ನವರೇ ಟ್ವೀಟ್ (x account) ಮಾಡುವ ಮೂಲಕ ತಿಳಿಸಿದ್ದಾರೆ.

ಉಚಿತ ಕರೆಂಟ್ ಪಡೆಯುತ್ತಿರುವ ಬೆನ್ನಲ್ಲೇ ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ

ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಡವರು ಖುಷಿಯಾಗಿದ್ದಾರೆ. ಎಲ್ಲಿ ಹೆಚ್ಚಿನ ವಿದ್ಯುತ್ ಬಳಕೆ ಆಗಿ ಬಿಡುತ್ತದೋ, ವಿದ್ಯುತ್ ಬಿಲ್ ಹೆಚ್ಚಿಗೆ ಬಂದರೆ ತಿಂಗಳ ವೆಚ್ಚವನ್ನು ಬರಿಸುವುದು ಹೇಗೆ ಎಂದು ಚಿಂತೆಯಲ್ಲಿದ್ದವರಿಗೆ ಇದು ಸಂತಸ ನೀಡಿದೆ. ಇನ್ಮುಂದೆ 58 ಯೂನಿಟ್ ವರೆಗೆ ಬಳಕೆ ಮಾಡಿದರೂ ಯಾವುದೇ ರೀತಿಯ ಬಿಲ್ ಪಾವತಿ ಮಾಡುವ ಅಗತ್ಯವಿಲ್ಲ. ಈ ಮೂಲಕ ಕಾಂಗ್ರೆಸ್ ಸರ್ಕಾರವು ತಾವು ಬಡವರ ಪರವಾಗಿದೆ ಎನ್ನುವುದನ್ನು ಸಾಬೀತು ಮಾಡಿದೆ.

Another good news for Gruha jyothi free Electricity Beneficiaries

Follow us On

FaceBook Google News

Another good news for Gruha jyothi free Electricity Beneficiaries