ನಿಮ್ಮ ಜಮೀನಿನ ಪಹಣಿಯಲ್ಲಿ ಯಾವುದೇ ಲೋಪದೋಷ ಸರಿಮಾಡಿಕೊಳ್ಳಲು ಅವಕಾಶ

ಕಂದಾಯ ಇಲಾಖೆ (revenue department) ರೈತರಿಗೆ ತಮ್ಮ ಪಹಣಿಯಲ್ಲಿ ಇರುವ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆ.

ರಾಜ್ಯದಲ್ಲಿ ಯಾವುದೇ ರೈತರು (farmers) ಜಮೀನು (agriculture land) ಹೊಂದಿದ್ದರೆ ಅದಕ್ಕೆ ಸಂಬಂಧಪಟ್ಟ ಹಾಗೆ ಪಹಣಿ ಹಾಗೂ ಮತ್ತಿತರ ಭೂ ದಾಖಲೆ (land documents) ಗಳನ್ನು ಹೊಂದಿರಬೇಕು. ಇವೆಲ್ಲವನ್ನೂ ಸರ್ಕಾರದಿಂದಲೇ ಪಡೆದುಕೊಳ್ಳಬಹುದು.

ಆದರೆ ಸರ್ಕಾರ ಪಹಣಿ ಹಾಗೂ ಇತರ ಭೂ ದಾಖಲೆಗಳನ್ನು ಒದಗಿಸುವ ಸಂದರ್ಭದಲ್ಲಿ ಸಾಕಷ್ಟು ತಪ್ಪುಗಳು ಆಗಬಹುದು. ಹಾಗೆ ರೈತರ ಪಹಣಿಯಲ್ಲಿ ಯಾವುದೇ ರೀತಿಯ ಲೋಪದೋಷ ಇದ್ದರೆ, ಸರ್ಕಾರದ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಅಥವಾ ಪಹಣಿಯ ಆಧಾರದ ಮೇಲೆ ಸಾಲ (Loan) ಮಾಡಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

26 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಕ್ಯಾನ್ಸಲ್! ಇಲ್ಲಿದೆ ಕಾರಣ

Wrong name on your land Documents, Change easily like this

ಹಾಗಾಗಿ ಕಂದಾಯ ಇಲಾಖೆ (revenue department) ರೈತರಿಗೆ ತಮ್ಮ ಪಹಣಿಯಲ್ಲಿ ಇರುವ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆ.

ಕಂದಾಯ ಅದಾಲತ್ ಕಾರ್ಯಕ್ರಮ!

ರೈತರ ಪಹಣಿ ಪತ್ರದಲ್ಲಿ ಇರುವ ತಪ್ಪುಗಳನ್ನು ಸರಿಪಡಿಸಲು ಕಂದಾಯ ಇಲಾಖೆ ಈ ಒಂದು ಹೊಸ ಉಪಕ್ರಮ (initiative) ಕೈಕೊಳ್ಳಲು ಮುಂದಾಗಿದೆ. ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ (revenue minister Krishna bairagowda) ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್! ಇಲ್ಲಿದೆ ಮಾಹಿತಿ

ಕಂದಾಯ ಅದಾಲತ್ ಯೋಜನೆಗಳು!

Agriculture Landಕಂದಾಯ ಅದಾಲತ್ ಕಾರ್ಯಕ್ರಮ ಮಾಡುವುದರಿಂದ ರೈತರು, ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ಪಹಣಿ ಪತ್ರದಲ್ಲಿ ಜಮೀನಿನ ಉದ್ದ, ಅಗಲ, ವಿಸ್ತೀರ್ಣ, ಗಡಿ, ದಾರಿ ಹೀಗೆ ಯಾವುದೇ ರೀತಿಯ ವಿಷಯದಲ್ಲಿ ತಪ್ಪು ಇದ್ದರೂ ಅದನ್ನು ಸರಿಪಡಿಸಿಕೊಳ್ಳಬಹುದು.

ಪಹಣಿ ಪತ್ರದಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಲು ಅಥವಾ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿದ ನಂತರ ತಶೀಲ್ದಾರರು ಅದನ್ನು ಪರಿಶೀಲಿಸಿ, ನಂತರ ಸೂಕ್ತ ಬದಲಾವಣೆಗಳನ್ನು ಮಾಡಿ ಕೊಡುತ್ತಾರೆ. ಇದೀಗ ಕಂದಾಯ ಅದಲ್ಲದ ಕಾರ್ಯಕ್ರಮವನ್ನು ಎಂದಿನಿಂದ ಆರಂಭಿಸಲಾಗುವುದು ಎನ್ನುವುದರ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡುತ್ತೇವೆ. ಅದಾದ ಬಳಿಕ ರೈತರು ಅರ್ಜಿ ಸಲ್ಲಿಸಬಹುದು ಇಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್ ಮಾಡಿ

ರೈತರು ತಮ್ಮ ಭೂ ದಾಖಲೆಯಲ್ಲಿ ಯಾವುದೇ ರೀತಿಯ ಲೋಪ ದೋಷಗಳು ಇದ್ದರೂ ಕೂಡ ಅದನ್ನು ಕಂದಾಯ ಅದಾಲತ್ ಮೂಲಕ ಸರಿಪಡಿಸಿಕೊಳ್ಳಬಹುದು. ಹಾಗೂ ರೈತರಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ಅಧಿಕಾರಿಗಳು ರೈತರಿಗೆ ಸ್ಪಂಧಿಸಬೇಕು, ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

An opportunity to correct Your Land Documents by Kandaaya Adalat

Related Stories