26 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಕ್ಯಾನ್ಸಲ್! ಇಲ್ಲಿದೆ ಕಾರಣ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆ (Gruha lakshmi scheme) ಯೂ ಒಂದಾಗಿದೆ. ಇದರ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2೦೦೦ ರೂ. ನೀಡಲಾಗುತ್ತದೆ.
ಈ ಯೋಜನೆ ಜಾರಿಯಾದ ದಿನದಿಂದ ಒಂದಲ್ಲಾ ಒಂದು ವಿಘ್ನ ಎದುರಾಗುತ್ತಲೇ ಇದೆ. ಈಗಲೂ ಹಾಗೆಯೇ ಆಗಿದೆ. ಕಳೆದ ತಿಂಗಳು 6 ನೇ ಕಂತಿನ ಹಣ ಬರೋಬ್ಬರಿ 26 ಸಾವಿರ ಮಹಿಳೆಯರ ಖಾತೆಗೆ (Bank Account) ಬರುವ ಸಾಧ್ಯತೆ ಇಲ್ಲ. ಇದಕ್ಕೆ ಕಾರಣವೂ ಇದೆ. ಹಾಗಾದರೆ ಏನು ಕಾರಣ? ನೋಡೋಣ.
ರಾಜ್ಯ ಸರ್ಕಾರ (State government) ವು ನೀಡಿದ ಅಂಕಿ ಅಂಶಗಳು ಪ್ರಕಾರ ಪ್ರತಿ ತಿಂಗಳು 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಅರ್ಹರಾಗಿದ್ದರು.
ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್! ಇಲ್ಲಿದೆ ಮಾಹಿತಿ
ಆದರೆ ಇದುವರೆಗೆ ಸಂಪೂರ್ಣವಾಗಿ ಯೋಜನೆ ಯಶಸ್ವಿ ಮಾಡಲು ಸಾಧ್ಯವಾಗಿಲ್ಲ. ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒ ನೇತೃತ್ವದಲ್ಲಿ ಗೃಹ ಲಕ್ಷ್ಮಿ ಕ್ಯಾಂಪ್ (gruha lakshmi camp) ನಡೆಸಲು ತಿಳಿಸಲಾಗಿತ್ತು.
ಪಿಡಿಒಗಳು ಗ್ರಾಮದಲ್ಲಿರುವ ಪ್ರತಿ ಮನೆಗೆ ತೆರಳಿ ಸರ್ವೇ ನಡೆಸಬೇಕು. ಒಂದು ವೇಳೆ ಯಾರಿಗಾದರೂ ಗೃಹ ಲಕ್ಷ್ಮಿ ಯೋಜನೆ ಅಡಿ ಹಣ ಜಮಾ ಆಗದಿದ್ದರೆ ಯಾವ ರೀತಿಯ ತೊಂದರೆ ಎದುರಾಗಿದೆ ಎಂದು ತಿಳಿದು ಸರಿಪಡಿಸಲು ಸೂಚನೆ ನೀಡಲಾಗಿತ್ತು. ಒಟ್ಟಿನಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಯೋಜನೆ ತಲುಪಿಸುವುದು ಸರ್ಕಾರದ ಗುರಿಯಾಗಿದೆ.
ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್ ಮಾಡಿ
ಈ ಬಾರಿ ಗೃಹ ಲಕ್ಷ್ಮಿ ಯೋಜನೆಯಲ್ಲಿ ಒಂದು ಮಹತ್ವವಾದ ವಿಚಾರವಿದೆ. ಕಳೆದ ತಿಂಗಳು 26 ಸಾವಿರ ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದರು. ಇವರು ಅರ್ಹ ಮಹಿಳೆಯರಾಗಿದ್ದರೂ ಅವರ ಖಾತೆಗೆ ಹಣ ಜಮಾ (Money Deposit) ಆಗಿರಲಿಲ್ಲ.
ಇವರಿಗೆ 5 ಕಂತುಗಳ ಹಣ ಜಮಾ ಆಗಿತ್ತು. ಆದರೆ 6 ನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇಲ್ಲ. ಇದಕ್ಕೆ ಕಾರಣ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ವೇಳೆ ಆದಾಯ ತೆರಿಗೆ ಪಾವತಿದಾರರು (Income Tax payers) , ಸರ್ಕಾರಿ ನೌಕರರಿಗೆ (Government employees) ನೀಡಲಾಗುವುದಿಲ್ಲ ಎಂದು ತಿಳಿಸಲಾಗಿತ್ತು.
ಗೃಹಜ್ಯೋತಿ ಉಚಿತ ಕರೆಂಟ್ ಬಳಕೆದಾರರಿಗೆ ಇನ್ನೊಂದು ಸಿಹಿಸುದ್ದಿ! ಈಗ ಇನ್ನಷ್ಟು ಫ್ರೀ
ಹೀಗಿದ್ದರೂ 8೦ ಸಾವಿರ ಜನ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇವರನ್ನು ಗೃಹ ಲಕ್ಷ್ಮಿ ಯೋಜನೆಯಿಂದ ತೆಗೆಯಲಾಯಿತು. ಈ ವೇಳೆ ಉಂಟಾದ ತಾಂತ್ರಿಕ ತೊಂದರೆ (technical issue) ಯಿಂದ ಅರ್ಹ 26 ಸಾವಿರ ಮಹಿಳೆಯರ ಖಾತೆಗೂ (Bank Account) ಹಣ ಜಮಾ ಆಗಿರಲಿಲ್ಲ.
ಈ ವಿಚಾರದ ಕುರಿತು ಸರ್ಕಾರದ ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳು ಮಾಹಿತಿ ನೀಡಿದ್ದು, ತಾಂತ್ರಿಕ ತೊಂದರೆಯಿಂದ ಹೀಗಾಗಿದೆ. ಈ 26 ಸಾವಿರ ಜನ ಮಹಿಳೆಯರಿಗೆ 6 ಹಾಗೂ 7ನೇ ಕಂತಿನ ಹಣ ಒಟ್ಟಿಗೆ ಜಮಾ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದುವರೆಗೂ ಅರ್ಜಿ ಸಲ್ಲಿಸದವರು, ಅಥವಾ ಏನಾದರೂ ತೊಂದರೆ ಇದ್ದವರು ಹತ್ತಿರದ ಗ್ರಾಮ ಒನ್, ಅಟಲ್ಜಿ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ನೀವು ಸಹ ಗೃಹ ಲಕ್ಷ್ಮಿ ಯೋಜನೆ ಲಾಭ ಗಳಿಸಬಹುದಾಗಿದೆ.
ರೇಷನ್ ಕಾರ್ಡ್ ಇರೋರಿಗೆ ಇನ್ನೊಂದು ಹೊಸ ಸೌಲಭ್ಯ! ಮಹತ್ವದ ನಿರ್ಧಾರ
Gruha Lakshmi Yojana money for 26 thousand women is cancelled
Our Whatsapp Channel is Live Now 👇