ರೈತರಿಗೆ ಗುಡ್ ನ್ಯೂಸ್; ಈ ಬ್ಯಾಂಕುಗಳಲ್ಲಿ ಮಾಡಿದ ಸಾಲದ ಮೇಲಿನ ಬಡ್ಡಿ ಮನ್ನಾ
ಈ ಬಾರಿ ಯಾರೂ ಕೂಡ ರೈತರಿಗೆ ಸಾಲ ಮರುಪಾವತಿ (Loan Re Payment) ಮಾಡಲು ನೋಟೀಸ್ ನೀಡದಂತೆ ಸೂಚನೆ ನೀಡಿದ್ದಾರೆ
ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಹಾಗಾಗಿ ರಾಜ್ಯದ ಯಾವುದೇ ಅಣೆಕಟ್ಟುಗಳು ಭರ್ತಿಯಾಗಿಲ್ಲ. ಈ ಬಾರಿ ಬೇಸಿಗೆಗೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ ಈ ಬಾರಿ ರೈತರು ಭಿತ್ತಿದ ಬೆಳೆಗಳೆಲ್ಲ ಒಣಗಿ ಹೋಗಿದೆ. ಇದರಿಂದ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ.
ಕೃಷಿಗಾಗಿ ತೆಗೆದುಕೊಂಡಿದ್ದ ಸಾಲ (Loan) ತೀರಿಸುವುದು ಹೇಗೆ ಎನ್ನುವ ಯೋಚನೆಯಲ್ಲಿದ್ದಾರೆ. ರೈತರ ಕಷ್ಟ ಅರಿತಿರುವ ಸರ್ಕಾರವು ರೈತರ ಕೃಷಿಗಾಗಿ ತೆಗೆದುಕೊಂಡಿದ್ದ ಸಾಲದ (Loan) ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧಾರ ಮಾಡಿದೆ. ಇದರ ಜೊತೆಗೆ ರೈತರಿಗೆ ಬೆಳೆಹಾನಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.
ರೇಷನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ವಿಸ್ತರಣೆ! ಇಲ್ಲಿದೆ ಮಾಹಿತಿ
ಈ ಬಾರಿ ರಾಜ್ಯದಲ್ಲಿ 21೦ ತಾಲೂಕುಗಳು ಬರಗಾಲ ಪೀಡಿತವಾಗಿದೆ ಎಂದು ಸರ್ಕಾರ ತಿಳಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಸಹ ಬಂದು ಪರಿಶೀಲನೆ ಮಾಡಿ ತೆರಳಿದ್ದಾರೆ.
ರೈತರು ಬಹಳ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಈ ಬಾರಿ ಯಾರೂ ಕೂಡ ರೈತರಿಗೆ ಸಾಲ ಮರುಪಾವತಿ (Loan Re Payment) ಮಾಡಲು ನೋಟೀಸ್ ನೀಡದಂತೆ ಸೂಚನೆ ನೀಡಿದ್ದಾರೆ.
ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿರುವಂತಹ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಕುರಿತು ಡಿ.೮ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ಕೈಗೊಳ್ಳಲಾಗಿದ್ದು, ಜನೆವರಿ ೨೧ರಂದು ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ಈ ಬಡ್ಡಿ ಮನ್ನಾ ಯೋಜನೆಯಿಂದ ಸರ್ಕಾರಕ್ಕೆ 44೦.28 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
ನಿಮ್ಮ ಜಮೀನಿನ ಪಹಣಿಯಲ್ಲಿ ಯಾವುದೇ ಲೋಪದೋಷ ಸರಿಮಾಡಿಕೊಳ್ಳಲು ಅವಕಾಶ
ಯಾವ ಯಾವ ರೈತರಿಗೆ ಸಿಗುತ್ತೆ ಲಾಭ:
ಕೃಷಿ ಸಹಕಾರಿ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ಗಳಲಿ ಸಾಲ ಮಾಡಿರುವ ರೈತರಿಗೆ ಈ ಬಡ್ಡಿ ಮನ್ನಾ ಯೋಜನೆಯ ಲಾಭ ಸಿಗಲಿದೆ. ಅಲ್ಪಾವಧಿ ಸಾಲದ ಅವಧಿಯು ಒಂದು ವರ್ಷದ್ದಾಗಿದ್ದು, ಈಗಾಗಲೇ ಇದಕ್ಕೆ ಬಡ್ಡಿ ರಹಿತವಾಗಿ ಸಾಲ (Loan) ನೀಡಲಾಗುತ್ತದೆ.
1೦ ವರ್ಷಗಳ ಅವಧಿಗೆ ಶೇ.3 ರ ಬಡ್ಡಿದರಲ್ಲಿ ಮಧ್ಯಮಾವಧಿ ಸಾಲ ನೀಡಲಾಗುತ್ತದೆ. ಹಾಗೂ 1೦ ವರ್ಷಕ್ಕೂ ಹೆಚ್ಚಿನ ಅವಧಿಗೆ ನೀಡುವ ಸಾಲವು ದೀರ್ಘಾವಧಿ ಸಾಲ ಆಗಿರುತ್ತದೆ. ಈ ಸಾಲಗಳಲ್ಲಿ ಚಾಲ್ತಿ ಸಾಲ ಇಲ್ಲವೇ ಸುಸ್ತಿ ಸಾಲಗಾರರಾಗಿರುವವರು ಈ ಬಡ್ಡಿ ಮನ್ನಾ ಯೋಜನೆ ಲಾಭ ಪಡೆಯಬಹುದಾಗಿದೆ. ಇದಕ್ಕೆ ಕೆಲವೊಂದು ನಿಬಂಧನೆಗಳನ್ನು ಹೇರಲಾಗಿದೆ.
26 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಕ್ಯಾನ್ಸಲ್! ಇಲ್ಲಿದೆ ಕಾರಣ
ನಿಬಂಧನೆಗಳು:
2023ರ ಡಿಸೆಂಬರ್ 31 ಕ್ಕೆ ಸುಸ್ತಿಯಾಗುವ ಮಧ್ಯಮಾವಧಿ ಅಥವಾ ದೀರ್ಘಾವಧಿ ಸಾಲವನ್ನು ಕೃಷಿ ಚಟುವಟಿಕೆಗಳಿಗಾಗಿ ತೆಗೆದುಕೊಂಡಿದ್ದರೆ ಅಂತವರ ಸಾಲದ ಮೇಲಿನ ಬಡ್ಡಿಯು ಮನ್ನಾ ಆಗಲಿದೆ. ಈ ರೀತಿ ಬಡ್ಡಿ ಮನ್ನಾ ಆಗಬೇಕು ಎಂದಾದರೆ ರೈತರು ಫೆ.28 ರೊಳಗೆ ಪಡೆದ ಸಾಲದ ಅಸಲನ್ನು ಪಾವತಿ ಮಾಡಿರಬೇಕು.
ಕೃಷಿ ಸಬಂಧಿತ ಚಟುವಟಿಗಳು ಹಾಗೂ ತೋಟಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ತೆಗೆದುಕೊಂಡ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯು ಮನ್ನಾ ಆಗಲಿದೆ. ಇದು ಕೃಷಿಯೇತರ ಸಾಲಗಳಿಗೆ ಅನ್ವಯಿಸುವುದಿಲ್ಲ. ಗರಿಷ್ಟ 1೦ ಲಕ್ಷ ರೂ.ಗಳ ವರಿಗೆ ಸಾಲ ಪಡೆದವರಿಗೆ ಇದು ಅನ್ವಯಿಸುತ್ತದೆ.
ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್! ಇಲ್ಲಿದೆ ಮಾಹಿತಿ
Good news for farmers, Waiver of interest on loans made in these banks