ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ! ಸರ್ಕಾರ ಖಡಕ್ ವಾರ್ನಿಗ್

ಎಪಿಎಲ್ ಪಡಿತರ ಚೀಟಿ ಇರಲಿ, ಬಿಪಿಎಲ್ ಪಡಿತರ ಚೀಟಿ (BPL Ration Card) ಇರಲಿ ಫೆಬ್ರವರಿ ೨೯ರ ಒಳಗೆ ಎಲ್ಲ ಪಡಿತರ ಚೀಟಿಗಳ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು

Ration Card Update : ಪಡಿತರ ಚೀಟಿ ಎನ್ನುವುದು ಇಂದಿನ ದಿನದಲ್ಲಿ ಕೇವಲ ಪಡಿತರ ಪಡೆಯಲು ಮಾತ್ರವಲ್ಲದೆ ಒಂದು ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಪ್ರತಿಯೊಬ್ಬರೂ ರೇಷನ್ ಕಾರ್ಡ್ ಹೊಂದಿರುವುದು ಅಗತ್ಯ.

ಹಾಗಾಗಿ ಈ ತಿಂಗಳಲ್ಲಿ ಅಂದರೆ ಫೆಬ್ರವರಿ ತಿಂಗಳಲ್ಲಿ ನೀವು ಈಗ ನಾವು ಹೇಳುವ ಕೆಲಸ ಮಾಡದೆ ಇದ್ದಲ್ಲಿ ರೇಷನ್ ಕಾರ್ಡ್ ಮೊದಲಿಗೆ ತಾತ್ಕಾಲಿಕವಾಗಿಯೂ ನಂತರ ಖಾಯಂ ಆಗಿ ರದ್ದಾಗುವ ಸಾಧ್ಯತೆ ಇದೆ.

ರೈತರಿಗೆ ಗುಡ್ ನ್ಯೂಸ್; ಈ ಬ್ಯಾಂಕುಗಳಲ್ಲಿ ಮಾಡಿದ ಸಾಲದ ಮೇಲಿನ ಬಡ್ಡಿ ಮನ್ನಾ

ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ! ಸರ್ಕಾರ ಖಡಕ್ ವಾರ್ನಿಗ್ - Kannada News

ರೇಷನ್ ಕಾರ್ಡ್ ಇಂದಿನ ದಿನದಲ್ಲಿ ರಾಜ್ಯ ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ (Gruha Lakshmi Scheme), ಆಯುಷ್ಮಾನ್ ಕಾರ್ಡ್, ಅನ್ನಭಾಗ್ಯ ಸೇರಿದಂತೆ ಅನೇಕ ಯೋಜನೆಗಳ ಲಾಭ ಪಡೆಯಲು ಬೇಕಾಗುವ ಪ್ರಮುಖ ದಾಖಲೆಯಾಗಿದೆ. ಬಿಪಿಎಲ್ ಕಾರ್ಡ್ ಇರಲಿ, ಎಪಿಎಲ್ ಕಾರ್ಡ್ ಇರಲಿ ಯಾವುದೇ ಇದ್ದರೂ ನೀವು ಯೋಜನೆಗಳ ಫಲಾನುಭವಿ ಆಗಬಹುದು.

ಇನ್ನೊಂದು ವಿಶೇಷ ಏನೆಂದರೆ ಇನ್ನು ಮುಂದೆ ಎಪಿಎಲ್ ಪಡಿತರ ಚೀಟಿ (APL Ration Card) ಹೊಂದಿರುವವರಿಗೂ ಆಯುಷ್ಮಾನ್ ಕಾರ್ಡ್ ಅಂದರೆ ಆರೋಗ್ಯ ಸೇವೆಗಳಿಗೆ ರಿಯಾಯತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಇತ್ತಿಚಿನ ದಿನದಲ್ಲಿ ಹೆಚ್ಚಿನ ಜನರು ರೇಶನ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ.

ಆದರೆ ರಾಜ್ಯ ಸರ್ಕಾರವು ಪ್ರಸ್ತುತ ಪಡಿತರ ಚೀಟಿಗಾಗಿ ಅರ್ಜಿ ಪಡೆಯುವುದನ್ನು ನಿಲ್ಲಿಸಿದೆ. ಈಗ ಹೊಂದಿರುವ ಪಡಿತರ ಚೀಟಿಯಲ್ಲಿ ಏನಾದರೂ ತಿದ್ದುಪಡಿ ಇದ್ದಲ್ಲಿ ಅದನ್ನು ಮಾತ್ರ ಮಾಡಿಕೊಡಲಾಗುತ್ತಿದೆ.

ರೇಷನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ವಿಸ್ತರಣೆ! ಇಲ್ಲಿದೆ ಮಾಹಿತಿ

BPL Ration Cardಹೀಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೆಲವರು ನಕಲಿ ದಾಖಲೆಗಳನ್ನು ಸಲ್ಲಿಸಿ ರೇಶನ್ ಕಾರ್ಡ್ ಪಡೆದುಕೊಂಡವರು ಇದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಇಂತಹವರ ಪಡಿತರ ಚೀಟಿ ರದ್ದು ಪಡಿಸಲು ಮುಂದಾಗಿದೆ.

ಸರ್ಕಾರಿ ಮಾನದಂಡಗಳನ್ನು ಮೀರಿ ಅಥವಾ ಅದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಡೆದವರ ರೇಶನ್ ಕಾರ್ಡ್ಗಳು ಈಗಾಗಲೇ ರದ್ದಾಗಿವೆ. ಇನ್ನು ಹಲವರ ರೇಶನ್ ಕಾರ್ಡ್ಗಳು ರದ್ದಾಗಲಿವೆ.

ನಿಮ್ಮ ಜಮೀನಿನ ಪಹಣಿಯಲ್ಲಿ ಯಾವುದೇ ಲೋಪದೋಷ ಸರಿಮಾಡಿಕೊಳ್ಳಲು ಅವಕಾಶ

ಎಪಿಎಲ್ ಪಡಿತರ ಚೀಟಿ ಇರಲಿ, ಬಿಪಿಎಲ್ ಪಡಿತರ ಚೀಟಿ (BPL Ration Card) ಇರಲಿ ಫೆಬ್ರವರಿ ೨೯ರ ಒಳಗೆ ಎಲ್ಲ ಪಡಿತರ ಚೀಟಿಗಳ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು. ಈಗಾಗಲೇ ಒಂದು ಸಮಯಾವಕಾಶ ನೀಡಲಾಗಿತ್ತು. ಆದರೂ ಕೆಲವರು ಮಾಡಿಸಿಕೊಳ್ಳದ ಕಾರಣ ಇನ್ನೊಂದು ಅವಕಾಶ ನೀಡಲಾಗಿದೆ.

ತಮ್ಮ ಮೊಬೈಲ್ ಸಂಖ್ಯೆ ಬದಲಾಗಿದ್ದರೆ ಅದನ್ನು ನವೀಕರಣ ಮಾಡಿಕೊಳ್ಳಬೇಕು. ಬಿಪಿಎಲ್ ಪಡಿತರ ಚೀಟಿಗೆ ಇರಬೇಕಾದ ಅರ್ಹತೆ ಇಲ್ಲದವರು ಅದನ್ನು ಎಪಿಎಲ್ ಪಡಿತರ ಚೀಟಿಯಾಗಿ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ ೨೯ರ ಒಳಗೆ ಯಾರು ಇ-ಕೆವೈಸಿ ಮಾಡಿಸಿಕೊಳ್ಳುವುದಿಲ್ಲವೋ ಅಂತವರ ಪಡಿತರ ಚೀಟಿ ತಾತ್ಕಾಲಿಕವಾಗಿ ರದ್ದಾಗಲಿದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರ ರೇಶನ್ ಕಾರ್ಡ್ ಅರ್ಹತೆ ಸರಿಯಾಗಿ ಇದ್ದಲ್ಲಿ ಚಾಲ್ತಿಯಾಗಲಿದೆ. ಇಲ್ಲದೆ ಇದ್ದಲ್ಲಿ ಶಾಶ್ವತವಾಗಿ ರದ್ದಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್! ಇಲ್ಲಿದೆ ಮಾಹಿತಿ

BPL ration card of such people will be cancelled

Follow us On

FaceBook Google News

BPL ration card of such people will be cancelled