ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ

ಇದೀಗ ಗೃಹಜ್ಯೋತಿ (Gruha jyothi scheme) ಯೋಜನೆಗೆ ಸಂಬಂಧಪಟ್ಟ ಹಾಗೆ ಸಿದ್ದರಾಮಯ್ಯ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸರ್ಕಾರದ 5 ಪ್ರಮುಖ ಗ್ಯಾರಂಟಿ ಯೋಜನೆಗಳು (government guarantee schemes) ಇಂದು ಯಶಸ್ವಿ ಆಗಿದ್ದು ಜನರ ಮೆಚ್ಚುಗೆ ಪಡೆದುಕೊಂಡಿವೆ. ಯಾಕಂದ್ರೆ ಈ ಎಲ್ಲಾ ಯೋಜನೆಗಳು ಕೂಡ ಜನರಿಗೆ ಹೆಚ್ಚು ಲಾಭದಾಯಕ ಎನಿಸಿವೆ.

ಬಡವರಿಗೆ ಉಚಿತವಾಗಿ ನೀಡುವ ಅನ್ನ ಭಾಗ್ಯ ಯೋಜನೆ ಇರಬಹುದು, ಉಚಿತವಾಗಿ ಪ್ರಯಾಣ ಮಾಡಬಹುದಾದ ಶಕ್ತಿ ಯೋಜನೆ ಇರಬಹುದು, ಮಹಿಳೆಯರಿಗೆ ತಿಂಗಳ ಖರ್ಚು ನಿಭಾಯಿಸಲು ನೀಡಲಾಗುವ 2000 ರೂ. ಇರಬಹುದು ಅಥವಾ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆ ಆಗಿರಬಹುದು, ಹಾಗೂ ಬಡವರಿಗೆ ಭರವಸೆಯ ಬೆಳಕು ನೀಡುವ ಗೃಹ ಜ್ಯೋತಿ ಯೋಜನೆ ಆಗಿರಬಹುದು. ಎಲ್ಲವೂ ಇಂದು ಯಶಸ್ವಿಯಾಗಿವೆ.

ಇಂತಹ ರೈತರಿಗೆ ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ 20 ಲಕ್ಷ ಸಹಾಯಧನ!

ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ - Kannada News

ಇದೀಗ ಗೃಹಜ್ಯೋತಿ (Gruha jyothi scheme) ಯೋಜನೆಗೆ ಸಂಬಂಧಪಟ್ಟ ಹಾಗೆ ಸಿದ್ದರಾಮಯ್ಯ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಅದರಲ್ಲೂ ವಾರ್ಷಿಕ ಸರಾಸರಿ ಗೆ 10% ನಷ್ಟು ಹೆಚ್ಚುವರಿಯಾಗಿ ಸರ್ಕಾರ ಒದಗಿಸುತ್ತಿರುವುದರಿಂದ, ಬಡವರು ಮಾತ್ರವಲ್ಲದೆ ಮಧ್ಯಮ ವರ್ಗದವರು ಕೂಡ ಸುಲಭವಾಗಿ ಉಚಿತ ಕರೆಂಟ್ ಬಿಲ್ ಪಡೆದುಕೊಳ್ಳಲು ಸಾಧ್ಯವಾಗಿದೆ.

ಗೃಹ ಜ್ಯೋತಿ ಯೋಜನೆಯ ಪ್ರಮುಖ ವಿಷಯಗಳನ್ನು ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಹೇಳಿದ್ದೇನು ನೋಡೋಣ.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ 4 ಹೊಸ ನಿಯಮ ಜಾರಿ ತಂದ ಸರ್ಕಾರ

Free Electricity*ಗೃಹ ಜ್ಯೋತಿ ಯೋಜನೆಗೆ ನೊಂದಣಿ ಆಗಿರುವ ಒಂದು ಪಾಯಿಂಟ್ 65 ಕೋಟಿ ಗ್ರಾಹಕರ ಪೈಕಿ 1.59 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗಿದೆ.

*ಸರ್ಕಾರ ಇದ್ದಾಗ 3578 ಕೋಟಿ ಸಬ್ಸಿಡಿಯನ್ನು ಈ ಯೋಜನೆಗಾಗಿ ನೀಡಿದೆ.

*ಗೃಹಜ್ಯೋತಿ ಯೋಜನೆಯಲ್ಲಿ ಮತ್ತೊಂದು ಬದಲಾವಣೆ ತರಲಾಗಿದ್ದು ವಾರ್ಷಿಕವಾಗಿ ಕೇವಲ 48 ಯೂನಿಟ್ ವರೆಗೆ ವಿದ್ಯುತ್ ಬಳಕೆ ಮಾಡುವವರಿಗೆ ಸರಾಸರಿ ಹೆಚ್ಚುವರಿಗಾಗಿ 10% ನಷ್ಟು ಹೆಚ್ಚುವರಿ ಯೂನಿಟ್ ಬದಲಿಗೆ, 10 ಯೂನಿಟ್ ಅನ್ನು ಹೆಚ್ಚುವರಿ ನೀಡಲಾಗುವುದು. ಇದರಿಂದಾಗಿ 58 ಯೂನಿಟ್ ವಾರ್ಷಿಕ ಸರಾಸರಿ ಆಗುತ್ತದೆ ಹಾಗೂ ಸುಮಾರು 70 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ರೇಷನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ವಿಸ್ತರಣೆ! ಇಲ್ಲಿದೆ ಮಾಹಿತಿ

*ಯಾವುದೇ ರೀತಿಯ ವಿದ್ಯುತ್ ವೇಸ್ಟ್ ಆಗದಂತೆ ಹಾಗೂ ಬಡವರಿಗೆ ಕೂಡ ಹೆಚ್ಚಿನ ಪ್ರಯೋಜನ ಆಗುವಂತೆ ಈ ಹೊಸ ನಿಯಮ ಜಾರಿಗೆ ತರಲಾಗಿದೆ 398 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಗೃಹಜೋತಿ ಯೋಜನೆ ಸಾಕಷ್ಟು ಜನರಿಗೆ ಪ್ರಯೋಜನ ನೀಡಿದೆ. ಆದರೆ ಈಗ 10% ಬದಲು ಹತ್ತು ನಿಮಿಷ ಉಚಿತವಾಗಿ ನೀಡುವುದರಿಂದ ನೂರಕ್ಕೂ ಮೇಲೆ ಯೂನಿಟ್ ಬಳಕೆ ಮಾಡುವ ಕುಟುಂಬದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು. ಅದನ್ನು ಹೊರತುಪಡಿಸಿ ಬಡವರಿಗೆ ಇದರಿಂದ ಹೆಚ್ಚು ಲಾಭವಾಗಲಿದೆ.

Big update for Gruha Jyothi Yojana free Electricity users

Follow us On

FaceBook Google News

Big update for Gruha Jyothi Yojana free Electricity users