ಇಂತಹ ರೈತರಿಗೆ ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ 20 ಲಕ್ಷ ಸಹಾಯಧನ!

Story Highlights

ಸರ್ಕಾರ ಇದೀಗ ಕೃಷಿ ನವೋದ್ಯಮ (krishi navodyama scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ಯುವಕರಿಗೆ ಅನುಕೂಲ ಆಗಲು ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಈಗಾಗಲೇ ಯುವ ನಿಧಿ ಯೋಜನೆ (Yuva Nidhi scheme) ಯ ಅಡಿಯಲ್ಲಿ, ಫಲಾನುಭವಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ.

ಇದೀಗ ಕೃಷಿ ನವೋದ್ಯಮ (krishi navodyama scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಅಡಿಯಲ್ಲಿ ಕೃಷಿ ಚಟುವಟಿಕೆ (agriculture activities) ಬಗ್ಗೆ ಆಸಕ್ತಿ ಇರುವ ಯುವಕರು ಹೊಸ ಆವಿಷ್ಕಾರ ತಂತ್ರಜ್ಞಾನ (technology) ಮೊದಲಾದವುಗಳನ್ನು ಅಳವಡಿಸಿಕೊಂಡು, ಕೃಷಿ ಸ್ಟಾರ್ಟ್ ಅಪ್ (agriculture startup) ಆರಂಭಿಸುವುದಕ್ಕೆ 20 ಲಕ್ಷ ರೂಪಾಯಿಗಳ ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಬಹುದು.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ 4 ಹೊಸ ನಿಯಮ ಜಾರಿ ತಂದ ಸರ್ಕಾರ

ಏನಿದು ನವೋದ್ಯಮ ಯೋಜನೆ!

ಯುವಕರು ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಈ ಯೋಜನೆ ಹೆಚ್ಚು ಉತ್ತೇಜನ ನೀಡುತ್ತದೆ. ಕೃಷಿ ಪದವಿದದರು ವಿದ್ಯಾವಂತ ಆಸಕ್ತ ಯುವಕರು, ಪ್ರಗತಿಪರ ರೈತರು, ತಂತ್ರಜ್ಞಾನಗಳನ್ನು ಆವಿಷ್ಕಾರಗಳನ್ನು ಒಳಗೊಂಡಿರುವ ಕೃಷಿ ಸ್ಟಾರ್ಟ್ ಅಪ್ ಮಾಡಲು ಶೇಕಡಾ 50% ನಷ್ಟು ಅಥವಾ 20 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದಾಗಿದೆ.

ಕೃಷಿ ನವೋದ್ಯಮ ಯೋಜನೆಯಿಂದ ಹೆಚ್ಚು ಲಾಭ!

ಈ ಯೋಜನೆಯ ಅಡಿಯಲ್ಲಿ ಯುವಕರು ಈಗಾಗಲೇ ಆರಂಭಿಸಿರುವ ಸ್ಟಾರ್ಟ್ ಅಪ್ ಉದ್ಯಮವನ್ನು ಮುಂದುವರಿಸಲು ಅಥವಾ ಹೊಸ ಉದ್ಯಮ ಆರಂಭಿಸಲು 50% ಅಥವಾ 20 ರಿಂದ 50 ಲಕ್ಷ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು ಬ್ಯಾಂಕ್ ನಿಂದ (Bank Loan) ಪಡೆಯಬಹುದಾಗಿದೆ.

ಜಿಲ್ಲಾಮಟ್ಟದಲ್ಲಿ ತಾಂತ್ರಿಕ ಸಮಿತಿ ಹಾಗೂ ಅನುಷ್ಠಾನ ಸಮಿತಿಯ ಒಪ್ಪಿಗೆ ಪಡೆದ ನಂತರ ರಾಜ್ಯ ಮಟ್ಟದಲ್ಲಿ ಸಹಾಯಧನ ನೀಡಲು ಅನುಮೋದನೆ ಪಡೆದುಕೊಳ್ಳಬಹುದು. ನವೋದ್ಯಮ ಯೋಜನೆಗಾಗಿ ರಾಜ್ಯ ಸರ್ಕಾರ 10 ಕೋಟಿಗಳನ್ನು ಇಂದಿನ ಬಜೆಟ್ ನಲ್ಲಿ ಮೀಸಲಿಟ್ಟಿತ್ತು. ಈ ಅನುದಾನದ ಹಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ! ಸರ್ಕಾರ ಖಡಕ್ ವಾರ್ನಿಗ್

Loan Schemeಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ?

ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿ ನಿಮ್ಮ ಸ್ಟಾರ್ಟ್ ಅಪ್ ಬಗ್ಗೆ ಮಾಹಿತಿ ನೀಡಿ, ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಯ ಅಡಿ ತರಬೇತಿ ನೀಡಲಾಗುವುದು!

ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ ಧನಸಹಾಯ ಪಡೆದುಕೊಂಡ ಬಳಿಕ ಆಸಕ್ತ ಯುವಕರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಅಥವಾ ಹೊಸ ಸ್ಟಾರ್ಟ್ ಅಪ್ ಗಳ ಬಗ್ಗೆ ತರಬೇತಿಯನ್ನು ಕೂಡ ನೀಡಲಾಗುತ್ತದೆ. ತರಬೇತಿ ಸಂಸ್ಥೆಗಳಾಗಿರುವ ವಿಜ್ಞಾನ, ತಂತ್ರಜ್ಞಾನ ವಿಶ್ವವಿದ್ಯಾಲಯಗಳು ICAR, CFTRI, CSIR, C-CAMP ವಿಶ್ವವಿದ್ಯಾಲಯಗಳು, ಜೈವಿಕ ತಂತ್ರಜ್ಞಾನ ಮೊದಲಾದ ಸಂಸ್ಥೆಗಳಲ್ಲಿ ತರಬೇತಿ ಪಡೆಯಬಹುದಾಗಿದೆ.

ರೈತರಿಗೆ ಗುಡ್ ನ್ಯೂಸ್; ಈ ಬ್ಯಾಂಕುಗಳಲ್ಲಿ ಮಾಡಿದ ಸಾಲದ ಮೇಲಿನ ಬಡ್ಡಿ ಮನ್ನಾ

ಕೃಷಿ ನವೋದ್ಯಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಜಂಟಿ ನಿರ್ದೇಶಕರು ನೀಡಿರುವ ಮಾಹಿತಿಯ ಪ್ರಕಾರ ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಯುವಕರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಆನೇಕಲ್ ಮತ್ತು ಬೆಂಗಳೂರು ಉತ್ತರ
ಉಪ ಕೃಷಿ ನಿರ್ದೇಶಕರ ಕಚೇರಿ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಎಸ್. ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು
ಸಂಪರ್ಕ ಸಂಖ್ಯೆ: 080-26711594
ಈ ಕಚೇರಿಗಳಿಗೆ ಭೇಟಿ ನೀಡಬಹುದು ಅಥವಾ ಈ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

ರೇಷನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ವಿಸ್ತರಣೆ! ಇಲ್ಲಿದೆ ಮಾಹಿತಿ

20 lakh subsidy under Krishi Navodyam Yojana for such farmers

Related Stories