Karnataka NewsBangalore News

ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್!

ಬಿಪಿಎಲ್ (BPL card) ಹಾಗೂ ಎಪಿಎಲ್ ರೇಷನ್ ಕಾರ್ಡ್ (Ration Card) ಪಡೆದುಕೊಳ್ಳಲು ಈಗಾಗಲೇ ಲಕ್ಷಾಂತರ ಅರ್ಜಿಗಳು ಸಂದಾಯ ಆಗಿವೆ. ಇದೀಗ ಈ ಅರ್ಜಿಗಳ ವಿಲೇವಾರಿ ಮಾಡುವುದರ ಬಗ್ಗೆ ಆಹಾರ ಇಲಾಖೆ ಹೊಸ ಅಪ್ಡೇಟ್ ನೀಡಿದೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಅರ್ಜಿಗಳನ್ನು ವಿತರಣೆ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡಿತ್ತು . ಅದು ಅಲ್ಲದೆ ಹೊಸ ಅರ್ಜಿಗಳನ್ನು ಕೂಡ ಸ್ವೀಕಾರ ಮಾಡಲಾಗುತ್ತಿರಲಿಲ್ಲ ಆದರೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಬೇಕು ಅಂದ್ರೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿರುವ ಹಿನ್ನೆಲೆಯಲ್ಲಿ ಎರಡುವರೆ ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದವರು ತಮಗೆ ಈಗ ರೇಷನ್ ಕಾರ್ಡ್ ವಿತರಣೆ ಮಾಡಬೇಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Date fixed for new ration card application, Update on Applying New Ration Card

ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅರ್ಹರಿಗೆ ರೇಷನ್ ಕಾರ್ಡ್ ವಿತರಣೆ ಮಾಡಲು ಮುಂದಾಗಿದೆ ಫೆಬ್ರವರಿ ತಿಂಗಳಿನಲ್ಲಿ ಯಾವುದೇ ವಿಳಂಬ ಇಲ್ಲದೆ ಸುಮಾರು 20 ಸಾವಿರದಷ್ಟು ರೇಷನ್ ಕಾರ್ಡ್ ವಿತರಣೆ ಮಾಡಲು ಅರ್ಜಿಗಳ ಪರಿಶೀಲನೆ ನಡೆದಿದೆ ಎಂದು ಆಹಾರ ಇಲಾಖೆಯ ಮಾನ್ಯ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

ಇದೊಂದು ಕೆಲಸ ಮಾಡಿಕೊಳ್ಳುವುದು ಕಡ್ಡಾಯ!

ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಎಲ್ಲಾ ರೀತಿಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಎನ್ನುವುದು ಬಹಳ ಮುಖ್ಯವಾಗಿದೆ. ಹಾಗಾಗಿ ನೀವಿನ್ನು ಹಳೆಯ ಅಂದರೆ 10 ವರ್ಷಕ್ಕಿಂತ ಹಿಂದೆ ಪಡೆದ ಆಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ಅದರಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಿ.

ಇಂತಹ ರೈತರಿಗೆ ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ 20 ಲಕ್ಷ ಸಹಾಯಧನ!

BPL Ration Cardರೇಷನ್ ಕಾರ್ಡ್ ಈಕೆ ವೈ ಸಿ! E-KYC

ರೇಷನ್ ಕಾರ್ಡ್ ಗೆ ಈ ಕೆವೈಸಿ ಅಪ್ಡೇಟ್ ಮಾಡಿಕೊಳ್ಳದೆ ಇದ್ರೆ ಫೆಬ್ರವರಿ 29ನೇ ತಾರೀಖಿನ ಒಳಗೆ ಮಾಡಿಕೊಳ್ಳಿ. ಒಂದು ವೇಳೆ ನೀವು ಈ ಕೆಲಸ ಮಾಡದೆ ಇದ್ದರೆ ನಿಮಗೆ ಮುಂದಿನ ಕಂತಿನ ಅನ್ನಭಾಗ್ಯ ಯೋಜನೆಯ ಹಣವು ಬರುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.

ರೇಷನ್ ಕಾರ್ಡ್ ಈಕೆ ವೈ ಸಿ ಯನ್ನು ನೀವು ಯಾವುದೇ ಸೇವಾ ಕೇಂದ್ರದಲ್ಲಿ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಆಧಾರ್ ಸೀಡಿಂಗ್ ಆಗಿರುವುದು ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಅಪ್ಡೇಟ್ ಮಾಡಿಸುವುದು ಕೂಡ ಬಹಳ ಮುಖ್ಯವಾಗಿರುವ ವಿಚಾರ.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ 4 ಹೊಸ ನಿಯಮ ಜಾರಿ ತಂದ ಸರ್ಕಾರ

ಇಂತಹ ರೇಷನ್ ಕಾರ್ಡ್ ರದ್ದು!

ಅನರ್ಹರ ರೇಷನ್ ಕಾರ್ಡ್ ಅನ್ನು ಮುಲಾಜಿಲ್ಲದೆ ಸರ್ಕಾರ ರದ್ದು ಪಡಿ ಮಾಡುತ್ತಿದೆ. ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ಯಾರ ರೇಷನ್ ಕಾರ್ಡ್ ರದ್ದಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಯಾಕೆಂದರೆ ಪ್ರತಿ ತಿಂಗಳು ಜಿಲ್ಲಾವಾರು ರೇಷನ್ ಕಾರ್ಡ್ ರದ್ದಾಗಿರುವ ಲಿಸ್ಟ್ ಆಹಾರ ಇಲಾಖೆ ಬಿಡುಗಡೆ ಮಾಡುತ್ತಿದೆ. ಇದರಿಂದ ನೀವು ನಿಮ್ಮ ಕಾರ್ಡ್ ಮಾತ್ರವಲ್ಲದೆ ನಿಮ್ಮ ಊರಿನಲ್ಲಿ ಬೇರೆಯವರ ಕಾರ್ಡ್ ರದ್ದು ಪಡಿ ಆಗಿದ್ಯೋ ಎಂಬುದನ್ನು ತಿಳಿಯಬಹುದು .

ಒಂದು ವೇಳೆ ತಾಂತ್ರಿಕ ದೋಷದಿಂದ ನೀವು ಅರ್ಹರಾಗಿದ್ದು ಕೂಡ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ತಕ್ಷಣ ಆಹಾರ ಇಲಾಖೆಗೆ ದೂರು ಸಲ್ಲಿಸಿ ಮತ್ತೆ ಮತ್ತೆ ಪುನಃ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗುವಂತೆ ಮಾಡಿಕೊಳ್ಳಬಹುದು.

ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ! ಸರ್ಕಾರ ಖಡಕ್ ವಾರ್ನಿಗ್

ಒಟ್ಟಿನಲ್ಲಿ ಒಂದು ಕಡೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವ ಖುಷಿಯಲ್ಲಿ ಕೆಲವರಿದ್ದರೆ, ಇನ್ನು ಹಲವರು ತಮ್ಮ ಬಳಿ ಇಷ್ಟು ದಿನ ಇದ್ದ ರೇಷನ್ ಕಾರ್ಡ್ ಈಗ ಕಳೆದುಕೊಳ್ಳುವಂತೆ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.

Important update of the government about the distribution of new BPL ration card

Our Whatsapp Channel is Live Now 👇

Whatsapp Channel

Related Stories