ಗೃಹಜ್ಯೋತಿ ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ

ಸಾಕಷ್ಟು ಜನ ಇನ್ನೂರು ಯೂನಿಟ್ (unit) ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುವವರು ಉಚಿತ ವಿದ್ಯುತ್ (free electricity) ಪಡೆದುಕೊಳ್ಳುತ್ತಿದ್ದಾರೆ

ಜುಲೈ 2023 ರಿಂದ ಇಲ್ಲಿಯವರೆಗೆ ಸಾಕಷ್ಟು ಕುಟುಂಬಗಳು ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಸುಮಾರು ಎರಡು ಕೋಟಿಗೂ ಅಧಿಕ ಕುಟುಂಬಗಳು ಇಂದು ಯಾವುದೇ ಹಣ ಪಾವತಿ ಮಾಡದೆ ವಿದ್ಯುತ್ (electricity) ಉಪಯೋಗ ಮಾಡಿಕೊಳ್ಳುವಂತೆ ಆಗಿದೆ.

ಹೌದು, ಕಳೆದ ಏಳು ತಿಂಗಳ ಹಿಂದೆ ಗೃಹ ಜ್ಯೋತಿ ಎನ್ನುವ ಗ್ಯಾರಂಟಿ ಯೋಜನೆ (guarantee schemes) ಯನ್ನು ರಾಜ್ಯ ಸರ್ಕಾರ ಪರಿಚಯಿಸಿದ ಬಳಿಕ ಸಾಕಷ್ಟು ಜನ ಇನ್ನೂರು ಯೂನಿಟ್ (unit) ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುವವರು ಉಚಿತ ವಿದ್ಯುತ್ (free electricity) ಪಡೆದುಕೊಳ್ಳುತ್ತಿದ್ದಾರೆ

ಗೃಹಲಕ್ಷ್ಮಿ ಮುಂದಿನ ಕಂತಿನ ಹಣ ಬರೋದಿಲ್ವಾ? ಇಲ್ಲಿದೆ ಯೋಜನೆಯ ಬಿಗ್ ಅಪ್ಡೇಟ್

ಗೃಹಜ್ಯೋತಿ ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ - Kannada News

ಇದೀಗ ಗೃಹ ಜ್ಯೋತಿ ಯೋಜನೆಗೆ ಸಂಬಂಧಪಟ್ಟ ಹಾಗೆ ರಾಜ್ಯ ಸರ್ಕಾರ ಸುತ್ತೋಲೆ ಒಂದನ್ನು ಹೊರಡಿಸಿದ್ದು, ಇದರಲ್ಲಿ ಈ ಯೋಜನೆಗೆ ಸಂಬಂಧಪಟ್ಟಂತೆ ಸಾಕಷ್ಟು ಬದಲಾವಣೆಗಳನ್ನು ಹಾಗೂ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇಂಧನ ಇಲಾಖೆ ಅಪರ ಕಾರ್ಯದರ್ಶಿ, ಅಪರ್ಣ ಪಾವಟೇ ಅವರು ಗೃಹ ಜ್ಯೋತಿ ಸಂಬಂಧಪಟ್ಟ ಬದಲಾವಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೆಬ್ರವರಿ ಐದು 2023 ರಂದು ಸುತ್ತೋಲೆ ಹೊರಡಿಸಲಾಗಿದ್ದು ಇದರಲ್ಲಿ ತಿಳಿಸಿರುವ ಪ್ರಕಾರ, ಹೊಸದಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರು ವ್ಯವಸ್ಥೆ ಆಗಿರುವ ಸೇವಾ ತಂತ್ರಾಂಶದಲ್ಲಿ ಡಿ ಲಿಂಕ್ (D – link) ಸೌಲಭ್ಯ ಕಲ್ಪಿಸಲಾಗಿದೆ.

ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಕೆ!

ಯಾವುದೇ ವ್ಯಕ್ತಿ ಬಾಡಿಗೆ ಮನೆಯಲ್ಲಿ ಇದ್ದು ಈ ಹಿಂದೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಹಾಗೂ ಈಗ ಆ ಮನೆಯನ್ನು ಬದಲಾಯಿಸಿದರೆ ಹಳೆಯ ಯೋಜನೆಯ ನೋಂದಣಿಯನ್ನು ರದ್ದುಪಡಿಸಿಕೊಂಡು ಮತ್ತೆ ಹೊಸ ಮನೆಯ ನಂಬರ್ ಜೊತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಇದಕ್ಕೆ ಡಿ ಲಿಂಕ್ ಪ್ರಕ್ರಿಯೆ ಮಾಡಬೇಕು.

ಡಿ ಲಿಂಕ್ ಮಾಡಲು ಆನ್ಲೈನ್ ನಲ್ಲಿಯೂ ಈಗ ಅವಕಾಶ ನೀಡಲಾಗಿದೆ. ಇಲ್ಲವಾದರೆ ಸೇವ ಕೇಂದ್ರಗಳಿಗೆ ಹೋಗಿ ತಮ್ಮ ಹೆಸರನ್ನು ರದ್ದುಪಡಿಸಿಕೊಂಡು ಮತ್ತೆ ಹೊಸ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕಿತ್ತು ಆದರೆ ಈಗ ಡಿ ಲಿಂಕ್ ಪ್ರಕ್ರಿಯೆ ಆನ್ಲೈನ್ ಮೂಲಕವೇ ನಡೆಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್!

Electricity Bill10 ಯೂನಿಟ್ ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿರುವ ಸರ್ಕಾರ!

200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುವವರಿಗೆ 10% ನಷ್ಟು ಹೆಚ್ಚುವರಿ ಯೂನಿಟ್ ನೀಡಲಾಗುತ್ತಿತ್ತು. ಈಗ ಇದರ ಜೊತೆಗೆ ಕಡಿಮೆ ವಿದ್ಯುತ್ ಖರ್ಚು ಮಾಡುವವರಿಗೆ 10 ಹೆಚ್ಚುವರಿ ಯೂನಿಟ್ ನೀಡಲು ಸರ್ಕಾರ ನಿರ್ಧರಿಸಿದೆ.

ಆರ್ಥಿಕ ವರ್ಷ 2022 23ರ ಅನ್ವಯ ಗ್ರಾಹಕರ ಸರಾಸರಿ ಮಾಸಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ 200 ಯೂನಿಟ್ ಗಳ ವರೆಗಿನ ಲೆಕ್ಕಾಚಾರ ಮಾಡಲಾಗುತ್ತದೆ. ಇದರ ಜೊತೆಗೆ 200 ಯೂನಿಟ್ ಮೀರಿದ ಕುಟುಂಬ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ಪಾವತಿ ಮಾಡಲು ಅನುಮೋದನೆ ನೀಡಲಾಗಿದೆ.

ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ

ಸೇವಾ ಸಿಂಧು ತಂತ್ರಾಂಶದ ಮೂಲಕ ನೋಂದಣಿ!

ಇದೀಗ ಸೇವಾ ಸಿಂಧೂ ತಂತ್ರಾಂಶದ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಈಗಾಗಲೇ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಂಡಿರುತ್ತಾರೆ ಹಾಗೂ ಮನೆ ಬದಲಾಯಿಸಿದಾಗ, ಅದನ್ನು ರದ್ದುಪಡಿಗೊಳಿಸಿ ಹೊಸ ಮನೆಯ ನಂಬರ್ ಅನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕು. ಹಾಗಾಗಿ ಡಿ ಲಿಂಕ್ ಅನ್ನು ಆನ್ಲೈನ್ ಮೂಲಕ ಮಾಡಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು.

ನೀವು ಹತ್ತಿರದ ಗ್ರಾಮ ಒನ್ ಅಥವಾ ಇತರ ಯಾವುದೇ ಸೇವಾ ಕೇಂದ್ರಗಳಲ್ಲಿ ಹೊಸದಾಗಿ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಈಗಾಗಲೇ ಎರಡು ಕೋಟಿಗೂ ಅಧಿಕ ಜನ ಗೃಹ ಜ್ಯೋತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಇಂತಹ ರೈತರಿಗೆ ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ 20 ಲಕ್ಷ ಸಹಾಯಧನ!

Gruha jyothi Free Electricity, Good news for those living in rented houses

Follow us On

FaceBook Google News

Gruha jyothi Free Electricity, Good news for those living in rented houses