ರೈತರಿಗೆ ಹಸು, ಕುರಿ ಕೋಳಿ ಸಾಕಾಣಿಕೆಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ

ಕೃಷಿಯೇತರ ಚಟುವಟಿಕೆಗೆ ಸರ್ಕಾರದಿಂದ ಸಿಗಲಿದೆ ಸಾಲ ಸೌಲಭ್ಯ; ಕಡಿಮೆ ಬಡ್ಡಿ ದರದ ಸಾಲ ಪಡೆಯಲು ಇಂದೇ ಅರ್ಜಿ ಸಲ್ಲಿಸಿ!

ದೇಶದಲ್ಲಿ ಕೋಟ್ಯಾಂತರ ರೈತರು (farmers), ಇಂದು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (Kisan credit card scheme) ಯ ಪ್ರಯೋಜನವನ್ನು ವಿಫುಲವಾಗಿ ಪಡೆದುಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದು ವಾರ್ಷಿಕ ಆದಾಯಕ್ಕಾಗಿ ಕಾಯಬೇಕು. ಅದರ ಬದಲು ಈ ಬೆಳೆಯ ಜೊತೆಗೆ ಒಂದಿಷ್ಟು ಇತರ ಉಪಕಸುಬು ಕೂಡ ಆರಂಭಿಸಿದರೆ ಹೆಚ್ಚು ಆದಾಯ ಗಳಿಸಬಹುದು.

ಆಧಾರ್ ಕಾರ್ಡ್ ಕುರಿತು ರಾತ್ರೋ-ರಾತ್ರಿ ಮಹತ್ವದ ಬದಲಾವಣೆ! ತಕ್ಷಣ ಈ ಕೆಲಸ ಮಾಡಿ

ರೈತರಿಗೆ ಹಸು, ಕುರಿ ಕೋಳಿ ಸಾಕಾಣಿಕೆಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ - Kannada News

ಹೈನುಗಾರಿಕೆ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ, ಜೇನು ಸಾಕಾಣಿಕೆ ಮೊದಲಾದವುಗಳನ್ನು ಉಪಕಸುಬು ಎಂದು ಪರಿಗಣಿಸಲಾಗಿದ್ದು, ಸಾಕಷ್ಟು ರೈತರು ಈ ಉಪಕಸುವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.

ಆದರೆ ಈ ದುಬಾರಿ ದುನಿಯಾದಲ್ಲಿ ಹೈನುಗಾರಿಕೆ (diary farming) ಅಥವಾ ಇತರ ಪಶು ಸಂಗೋಪನೆ ಮಾಡಲು ಮುಖ್ಯವಾಗಿ ಬೇಕಾಗಿರುವ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸರ್ಕಾರದಿಂದ ರೈತರು ಸಹಾಯಧನ ಪಡೆದುಕೊಳ್ಳಬಹುದು.

ಕಿಸಾನ್ ಕ್ರೆಡಿಟ್ ಯೋಜನೆಯ ಮೂಲಕ ಸಬ್ಸಿಡಿ ಸಾಲ! (KCC subsidy loan)

ರಾಷ್ಟ್ರೀಕೃತ ಬ್ಯಾಂಕ್ (nationalised bank) ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಹಾಗೂ ಕೋ ಆಪರೇಟಿವ್ ಸೊಸೈಟಿಗಳ ಮೂಲಕ ರೈತರು ಹೈನುಗಾರಿಕೆ ಮೊದಲಾದ ಉಪಕಸುಬುಗಳಿಗೆ ಬೇಕಾಗಿರುವ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಸಬ್ಸಿಡಿ ಸಾಲವನ್ನು (Subsidy Loan) ಪಡೆಯಬಹುದು. ಕಿಸಾನ್ ಕ್ರೆಡಿಟ್ ಯೋಜನೆಯ ಅಡಿಯಲ್ಲಿ ಪ್ರತಿ ರೈತರು ಹತ್ತು ಲಕ್ಷ ರೂಪಾಯಿಗಳ ವರೆಗೆ ಯಾವುದೇ ಅಡಮಾನವಿಲ್ಲದ ಸಾಲ (Loan) ಸೌಲಭ್ಯ ಪಡೆಯಬಹುದು. ಹಾಗೂ ಇದಕ್ಕೆ ಮೂರು ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ.

ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ

Loan Schemeಬಡ್ಡಿಯಲ್ಲಿ ಸಬ್ಸಿಡಿ!

ಕಿಸಾನ್ ಕ್ರೆಡಿಟ್ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಂಡರೆ ಶೇಕಡ 2% ನಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಒಟ್ಟಾರೆ 5% ಬಡ್ಡಿ ಎಲ್ಲಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ, 3% ಬಡ್ಡಿ ರಿಯಾಯಿತಿ ಸಿಗುತ್ತದೆ ಅಂದರೆ ಕೇವಲ 2% ನಷ್ಟು ಮಾತ್ರ ರೈತರು ಪಾವತಿ ಮಾಡಬೇಕು.

ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಯಾವ ಉದ್ಯಮಕ್ಕೆ ಎಷ್ಟು ಸಾಲ ಸಿಗುತ್ತದೆ!

ಹೈನುಗಾರಿಕೆ:

ಮಿಶ್ರತಳಿಯ ಧನ ಸಾಕಾಣಿಕೆಗೆ ಪ್ರತಿ ಆಕಳಿಗೆ 18 ಸಾವಿರ ರೂಪಾಯಿಗಳಂತೆ ಎರಡು ಆಕಳಿಗೆ 36,000 ಸಾಲ ಪಡೆಯಬಹುದು. ಅದೇ ರೀತಿ ಎಮ್ಮೆ ಖರೀದಿಗೆ ಒಂದು ಎಮ್ಮೆಗೆ 21,000 ಗಳಂತೆ ಎರಡು ಎಮ್ಮೆ ಸಾಕಾಣಿಕೆಗೆ 42,000 ರೂ.ಪಡೆಯಬಹುದು.

ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ

ಕುರಿ ಸಾಕಾಣಿಕೆ:

10 +1 ಕುರಿಗಳನ್ನು ಕಟ್ಟಿ ಮೇಯಿಸಿದರೆ ಎಂಟು ತಿಂಗಳ ಅವಧಿಗೆ ನಿರ್ವಹಣಾ ವೆಚ್ಚವಾಗಿ 29,950ಗಳನ್ನು ಪಡೆಯಬಹುದು. ಅದೇ ರೀತಿ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 14,700 ಸಾಲ ಸಿಗುತ್ತದೆ.

20+1 ಕುರಿ ಮರಿಗಳನ್ನು ಕಟ್ಟಿ ಮೇಯಿಸಿದರೆ 57,200ಗಳನ್ನು ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 28,200ಗಳನ್ನು ಪಡೆಯಬಹುದು.

ಕೊಬ್ಬಿಸುವ ಹತ್ತು ಕುರಿ ಮರಿಗಳಿಗೆ 13,120 ರೂ. ಹಾಗೂ 20 ಕುರಿ ಮರಿಗಳ ಕೊಬ್ಬಿಸುವಿಕೆಗೆ 26200ಗಳನ್ನು ನೀಡಲಾಗುವುದು.

ಹಂದಿ ಸಾಕಾಣಿಕೆ!

ಎಂಟು ತಿಂಗಳ ಅವಧಿಗೆ 10 ಹಂದಿ ಮರಿಗಳ ಕೊಬ್ಬಿಸುವಿಕೆಗೆ ರೂಪಾಯಿ 60 ಸಾವಿರಗಳನ್ನು ಸಾಲವಾಗಿ ಪಡೆಯಬಹುದು.

ಸರ್ಕಾರದಿಂದಲೇ ಪಡೆಯಿರಿ 50,000 ಸಾಲ; ಯಾವ ಅಡಮಾನವು ಕೊಡಬೇಕಿಲ್ಲ!

ಕೋಳಿ ಸಾಕಾಣಿಕೆಗೆ!

ತಲಾ ಒಂದು ಕೋಳಿ ಸಾಕಾಣಿಕೆಗೆ 80 ರೂಪಾಯಿಗಳಂತೆ ಸಾವಿರ ಕೋಳಿ ಸಾಕಾಣಿಕೆಗೆ 80,000 ಸಾಲ ಸೌಲಭ್ಯ ಸಿಗುತ್ತದೆ. ಅದೇ ಮೊಟ್ಟೆ ಕೋಳಿಗಾದರೆ ಒಂದು ಕೋಳಿಗೆ 180ಗಳಂತೆ, 1,000 ಕೋಳಿಗೆ 1,80,000ಗಳನ್ನು ಪಡೆಯಬಹುದು.

ಮೊಲ ಸಾಕಾಣಿಕೆ!

50+10 ಮೊಲ ಸಾಕಾಣಿಕೆಗೆ 50,000ಗಳನ್ನು ಕೆಸಿಸಿ ಯೋಜನೆಯ ಅಡಿಯಲ್ಲಿ ಸಾಲವಾಗಿ ಪಡೆಯಬಹುದು.

ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಯೋಜನೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದ್ದು, ಮಾರ್ಚ್ 31, 2024ರ ವರೆಗೆ ಅವಕಾಶ ನೀಡಲಾಗಿದೆ.

60 ವರ್ಷ ಮೇಲ್ಪಟ್ಟವರಿಗೆ ಬಿಗ್ ಅಪ್ಡೇಟ್! ಸಿಗಲಿದೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚು ಬಡ್ಡಿ

Farmers will get low interest loan facility for raising cows, sheep and poultry farming

Follow us On

FaceBook Google News

Farmers will get low interest loan facility for raising cows, sheep and poultry farming