ಈ ಕಾರ್ಡ್ ನಿಮ್ಮ ಬಳಿ ಇದ್ರೆ ಸಿಗುತ್ತೆ ಸರ್ಕಾರದ ಎಲ್ಲಾ ಸೌಲಭ್ಯ; ತಕ್ಷಣ ಅಪ್ಲೈ ಮಾಡಿ!

ಕಾರ್ಮಿಕ ಕುಟುಂಬಗಳಿಗೆ (labour family) ಲೇಬರ್ ಕಾರ್ಡ್ (labour card) ಒದಗಿಸುವುದರ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರಕುವಂತೆ ಮಾಡಿದೆ.

ರಾಜ್ಯದಲ್ಲಿ ವಾಸಿಸುವ ಪ್ರತಿಯೊಂದು ವರ್ಗದ ಜನರ ಉದ್ಧಾರಕ್ಕಾಗಿ ರಾಜ್ಯ ಸರ್ಕಾರ (State government) ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಅದರಲ್ಲೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಉದ್ಧಾರಕ್ಕಾಗಿ, ಕಲ್ಯಾಣ ಕೆಲಸಗಳು ಕೂಡ ಆರಂಭವಾಗಿವೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers’ Welfare Board) ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕ ಕುಟುಂಬಗಳಿಗೆ (labour family) ಲೇಬರ್ ಕಾರ್ಡ್ (labour card) ಒದಗಿಸುವುದರ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರಕುವಂತೆ ಮಾಡಿದೆ.

ರೈತರಿಗೆ ಗುಡ್ ನ್ಯೂಸ್; ಸಿಗಲಿದೆ 3000 ಪಿಂಚಣಿ ಹಾಗೂ ಕೃಷಿಗಾಗಿ ಇನ್ನಷ್ಟು ಸೌಲಭ್ಯ!

ಈ ಕಾರ್ಡ್ ನಿಮ್ಮ ಬಳಿ ಇದ್ರೆ ಸಿಗುತ್ತೆ ಸರ್ಕಾರದ ಎಲ್ಲಾ ಸೌಲಭ್ಯ; ತಕ್ಷಣ ಅಪ್ಲೈ ಮಾಡಿ! - Kannada News

ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಲೇಬರ್ ಕಾರ್ಡ್ ಅಥವಾ ಇ – ಶ್ರಮ ಕಾರ್ಡ್ ಹೊಂದಿದ್ದರೆ, ಸಾಕಷ್ಟು ಉತ್ತಮ ಬೆನಿಫಿಟ್ಸ್ ಪಡೆದುಕೊಳ್ಳಬಹುದು.

ಲೇಬರ್ ಕಾರ್ಡ್ ಪ್ರಯೋಜನಗಳು ಇವು! (Benefits of labour card)

ಅಪಘಾತ ವಿಮೆ – ಅಕಸ್ಮಿಕವಾಗಿ ಅವಘಡ ಸಂಭವಿಸಿದರೆ ಸರ್ಕಾರದಿಂದ ಸಹಾಯಧನ ಪಡೆಯಬಹುದು.

ವೈದ್ಯಕೀಯ ವೆಚ್ಚ – ಅತಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬಹುದು

ತಾಯಿ ಮಗುವಿಗೆ ಸಹಾಯ – ಪೌಷ್ಟಿಕ ಆಹಾರ ಒದಗಿಸುವುದರಿಂದ ಹಿಡಿದು ಆರ್ಥಿಕ ಸಹಾಯವನ್ನು ಕೂಡ ಮಾಡಲಾಗುವುದು.

ಶಿಕ್ಷಣ ಮತ್ತು ಮದುವೆ – ಕಾರ್ಮಿಕ ಹೆಣ್ಣು ಮಕ್ಕಳ ವಿದ್ಯಾಭ್ಯಾಸದಿಂದ ಮದುವೆಯ ಖರ್ಚಿನವರೆಗೂ ಸರ್ಕಾರದ ಆರ್ಥಿಕ ನೆರವು ಪಡೆಯಬಹುದು. ಇವುಗಳ ಜೊತೆಗೆ ಉಚಿತ ಪಿಂಚಣಿ, ಉಚಿತ ಬಸ್ ಪಾಸ್, ವಿದ್ಯಾರ್ಥಿ ವೇತನ ಅಷ್ಟೇ ಯಾಕೆ ಅಂತ್ಯಸಂಸ್ಕಾರದ ವೆಚ್ಚವನ್ನು ಕೂಡ ಸರ್ಕಾರ ನೀಡುತ್ತದೆ.

ಫ್ರೀ ಬಸ್ ಸೌಲಭ್ಯದ ಜೊತೆ ಮಹಿಳೆಯರಿಗೆ ಮತ್ತೊಂದು ಬೆನಿಫಿಟ್ ನೀಡಿದ ಸರ್ಕಾರ!

Labour Cardನೋಂದಣಿ ಮಾಡಿಕೊಳ್ಳಲು ಬೇಕಾಗಿರುವ ಅರ್ಹತೆ! (Eligibilities for registration)

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಒಂದು ವರ್ಷಗಳ ಅವಧಿಯಲ್ಲಿ ಕನಿಷ್ಠ 90 ದಿನಗಳ ಕೆಲಸ ಮಾಡಿರಬೇಕು. 18 ರಿಂದ 60 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.

ಲೇಬರ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು (needed documents for labour card registration)

*90 ದಿನಗಳು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿರುವುದರ ಬಗ್ಗೆ ದೃಢೀಕರಣ ಪ್ರಮಾಣ ಪತ್ರ.
*ಆಧಾರ್ ಕಾರ್ಡ್
*ಬ್ಯಾಂಕ್ ಖಾತೆ ವಿವರ
*ಮೊಬೈಲ್ ಸಂಖ್ಯೆ (ಆಧಾರ್ ಕಾರ್ಡ್ ಇದೆ ಲಿಂಕ್ ಆಗಿರಬೇಕು)

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್; ಹಣ ಪಡೆಯೋಕೆ ಮತ್ತೊಂದು ರೂಲ್ಸ್

ಎಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು? (Where to register)

ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹೋಗಿ, ಮೇಲಿನ ದಾಖಲೆಗಳನ್ನು ನೀಡಿ ನೀವು ಲೇಬರ್ ಕಾರ್ಡ್ ಪಡೆದುಕೊಳ್ಳಬಹುದು.

ಲೇಬರ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ (last date to apply) ಮಾರ್ಚ್ 31 2024

If you have this card, you will get all the facilities of the government

Follow us On

FaceBook Google News

If you have this card, you will get all the facilities of the government