ಫ್ರೀ ಬಸ್ ಸೌಲಭ್ಯದ ಜೊತೆ ಮಹಿಳೆಯರಿಗೆ ಮತ್ತೊಂದು ಬೆನಿಫಿಟ್ ನೀಡಿದ ಸರ್ಕಾರ!

ಈ ಯೋಜನೆಯ ಮೂಲಕ ಇಂದು ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲು ಜಾರಿಗೆ ತಂದಿದ್ದೆ ಶಕ್ತಿ ಯೋಜನೆ (Shakti scheme). ಈ ಯೋಜನೆಯ ಮೂಲಕ ಇಂದು ರಾಜ್ಯಾದ್ಯಂತ ಮಹಿಳೆಯರು ಒಂದೇ ಒಂದು ರೂಪಾಯಿಗಳನ್ನು ಕೂಡ ಟಿಕೆಟ್ಗೆ ನೀಡದೆ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಯೋಜನೆಯಿಂದ ನಿಜಕ್ಕೂ ಸಾಕಷ್ಟು ಬಡ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು.

ಶಕ್ತಿ ಯೋಜನೆಯ ಆರಂಭವಾದ ನಂತರ ಕೆಲವು ಗೊಂದಲಗಳು, ಸಮಸ್ಯೆಗಳು ಉಂಟಾಗಿದ್ದು ಸುಳ್ಳಲ್ಲ ಯಾಕೆಂದರೆ, ಕೆ ಎಸ್ ಆರ್ ಟಿ ಸಿ (KSRTC) ಮೂಲಕ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದ ಹಾಗೆ ಬಸುಗಳಲ್ಲಿ ಕೂಡ ಜಾಸ್ತಿ ಆಗಿದೆ.

New rules for free bus Facility for women, Ticket purchase is mandatory

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್; ಹಣ ಪಡೆಯೋಕೆ ಮತ್ತೊಂದು ರೂಲ್ಸ್

ನಿಜವಾಗಿ ದುಡ್ಡು ಕೊಟ್ಟು ಪ್ರಯಾಣಿಸುವ ಪುರುಷರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಇದನ್ನು ಪರಿಹರಿಸುವುದಕ್ಕಾಗಿ ಸರ್ಕಾರ ಮತ್ತೊಂದು ಉಪ ಕ್ರಮ ಕೈಗೊಂಡಿದ್ದು, ರಾಜ್ಯಕ್ಕೆ ಹೊಸ ಬಸ್ಗಳ ಆಗಮನವಾಗಲಿದೆ.

ರಾಜ್ಯಕ್ಕೆ ಬಂತು ಅಶ್ವಮೇಧ ಬಸ್! (Ashwamedha bus)

ರಾಜ್ಯದಲ್ಲಿ ಮಹಿಳಾ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೆ ಎಸ್ ಆರ್ ಟಿ ಸಿ ಬಸ್ಗಳ ಬೇಡಿಕೆಯು ಹೆಚ್ಚಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಸಾವಿರ ಹೊಸ ಬಸ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ 100 ಬಸ್ ಅವುಗಳನ್ನು ಖರೀದಿ ಮಾಡಿದ್ದು ರಾಜ್ಯ ಸರ್ಕಾರ ಈ ಬಸ್ಗಳಲ್ಲಿ ಒಂದು ಬಸ್ಸಿಗೆ ಅಶ್ವಮೇಧ ಎಂದು ನಾಮಕರಣ ಮಾಡಿದೆ.

ರಾಜ್ಯ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ವಿಧಾನಸೌಧದ ಎದುರು ಅಶ್ವಮೇಧ ಬಸ್ ಗೆ ಚಾಲನೆ ನೀಡುವುದರ ಮೂಲಕ ಕೆ ಎಸ್ ಆರ್ ಟಿ ಸಿ ಗಳ ಖರೀದಿಗೆ ಅನುಮೋದನೆ ನೀಡಿದ್ದಾರೆ. ಈಗಾಗಲೇ ನೂರು ಬಸ್ ಗಳು ಹೊಸದಾಗಿ ರಾಜ್ಯ ಸರ್ಕಾರದ ಸಾರಿಗೆ ಸೇರಿದ್ದು, ಇನ್ನು 900 ಬಸ್ ಗಳು ಬರಲಿವೆ.

ಈ ರೇಷನ್ ಕಾರ್ಡ್ ಇದ್ದೋರಿಗೆ ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್! ಇಲ್ಲಿದೆ ಮಾಹಿತಿ

Free Bus - Shakti Yojanaeಅಶ್ವಮೇಧ ಬಸ್ ವಿಶೇಷ ಯಾಕೆ?

ಇದೊಂದು ಕ್ಲಾಸಿಕಲ್ ಬಸ್ (classical bus) ಆಗಿದ್ದು ಮಹಿಳಾ ಪ್ರಯಾಣಿಕರು ಈ ಬಸ್ ನಲ್ಲಿಯೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಈಗಾಗಲೇ ತಿಳಿಸಿರುವಂತೆ ಐಶಾರಾಮಿ ಮತ್ತು ಐರಾವತ ಬಸ್ ಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿಯೂ ಉಚಿತವಾಗಿ ಮಹಿಳೆಯರು ಪ್ರಯಾಣಿಸಬಹುದು. ಅದೇ ರೀತಿ ಈಗ ಅಶ್ವಮೇಧ ಬಸ್ ನಲ್ಲಿಯೂ ಉಚಿತವಾಗಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಇದರಲ್ಲಿ ಸಾಕಷ್ಟು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಘೋಷಣೆ

ಜಿಪಿಎಸ್ ವ್ಯವಸ್ಥೆ (GPS system) ಇದೆ. ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಬಸ್ಸಿನ ಹೊರಗೆ ಮತ್ತು ಒಳಗೆ ಎಲ್ಇಡಿ ನಾಮಫಲಕ ಇರುತ್ತದೆ. ಲಗೇಜ್ ಇಟ್ಟುಕೊಳ್ಳುವುದಕ್ಕೆ ಪ್ರತ್ಯೇಕ ಸ್ಥಳಾವಕಾಶವಿದೆ. 52 ಸುರಕ್ಷಿತ ಸೀಟ್ ಗಳನ್ನು ಕೊಡಲಾಗಿದೆ.

ಈ ಕ್ಲಾಸಿಕಲ್ ಬಸ್ ನಲ್ಲಿಯೂ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈಗ ಆರಂಭವಾಗಿರುವ ಒಂದು ಅಶ್ವಮೇಧ ಬಸ್ ಸೇವೆ, ಇನ್ನೂ ಮುಂದೆ ದುಪ್ಪಟ್ಟಾಗಲಿದೆ. ರಾಜ್ಯದ್ಯಂತ ಹೊಸ ಬಸ್ಸುಗಳನ್ನು ಓಡಿಸಲು ಸಾರಿಗೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಒಟ್ಟಿನಲ್ಲಿ ಇನ್ನು ಮುಂದೆ ರಾಜ್ಯದ್ಯಂತ ಕೆ ಎಸ್ ಆರ್ ಟಿ ಸಿ ಯ ಸುಲಲಿತ ಪ್ರಯಾಣಕ್ಕೆ ಹೊಸ ಬಸ್ ಗಳು ಕೂಡ ಸಹಕರಿಸಲಿವೆ.

The government has given another benefit to women with the free bus facility