ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಘೋಷಣೆ
ಸರ್ಕಾರದ ಯಾವುದೇ ಯೋಜನೆ ಪ್ರಯೋಜನ (government schemes) ನಮಗೆ ಸಿಗಬೇಕು ಅಂದರೆ ಸರ್ಕಾರದ ಕೆಲವು ನಿಯಮಗಳನ್ನು ಪಾಲನೆ ಮಾಡಲೇಬೇಕು. ಆದರೆ ಇಂತಹ ನಿಯಮಗಳ ಪಾಲನೆ ಮಾಡದೆ ಇದ್ದಾಗ, ನಮಗೆ ಯಾವ ಸೌಲಭ್ಯವು ಸಿಗುವುದಿಲ್ಲ.
ಬಳಿಕ ಸರ್ಕಾರವನ್ನು ದೂರಿ ಯಾವ ಪ್ರಯೋಜನವು ಇಲ್ಲ, ಸಿಗುತ್ತಿಲ್ಲ! ಎನ್ನುವ ಪೀಠಿಕೆಗೆ ಮುಖ್ಯ ಕಾರಣ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಎನ್ನುವ ಕಡ್ಡಾಯ ನಿಯಮವನ್ನು ಸಾರ್ವಜನಿಕರು ಪಾಲನೆ ಮಾಡದೆ ಇರುವುದು!
ಇಂದು ಆಧಾರ್ ಕಾರ್ಡ್ (Aadhaar Card) ಎಷ್ಟು ಪ್ರಮುಖ ದಾಖಲೆ ಆಗಿದೆಯೋ ರೇಷನ್ ಕಾರ್ಡ್ (Ration Card) ಕೂಡ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳ ಅಥವಾ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ.
ಗೃಹಜ್ಯೋತಿ ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ (BPL card) ಹಾಗೂ ಸಾಮಾನ್ಯರಿಗೆ ಎಪಿಎಲ್ ಕಾರ್ಡ್ (APL card) ವಿತರಣೆ ಮಾಡಲಾಗಿದೆ. ಆದರೆ ಈಗಾಗಲೇ ಚರ್ಚೆ ಆಗುತ್ತಿರುವಂತೆ ನಿಜವಾದ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. ಹಾಗೂ ಅರ್ಹತೆ ಇಲ್ಲದೆ ಇರುವವರ ಬಳಿ ಬಿಪಿಎಲ್ ಕಾರ್ಡ್ ಇದೆ.
ಈ ಲೋಪ ದೋಷಗಳನ್ನು ಸರಿಪಡಿಸುವ ಸಲುವಾಗಿ ಹಾಗೂ ರೇಷನ್ ಕಾರ್ಡ್ ವಿಚಾರದಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಗೃಹಲಕ್ಷ್ಮಿ ಮುಂದಿನ ಕಂತಿನ ಹಣ ಬರೋದಿಲ್ವಾ? ಇಲ್ಲಿದೆ ಯೋಜನೆಯ ಬಿಗ್ ಅಪ್ಡೇಟ್
ನೀವ್ಯಾಕೆ ಇನ್ನು ಈ ಕೆಲಸ ಮಾಡಿಲ್ಲ?
ಸರ್ಕಾರ ಈಗಾಗಲೇ ಸಾಕಷ್ಟು ಬಾರಿ ಈ ವಿಚಾರವನ್ನು ತಿಳಿಸಿದೆ. ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ (ration card + Aadhaar card link) ಆಗದೆ ಇದ್ದರೆ ಅಂತ ರೇಷನ್ ಕಾರ್ಡ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಆದರೆ ಇದರ ಬಗ್ಗೆ ಜನ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಲಾಗಿದ್ದರು ಕೂಡ, ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಂಡಿಲ್ಲ. ಆದರೆ ಸರ್ಕಾರದ ಆದೇಶದಂತೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಕೆ ವೈ ಸಿ (E-KYC) ಪ್ರಕ್ರಿಯೆ ಮಾಡಿಸಿಕೊಳ್ಳದೆ ಇದ್ದರೆ ಅಂತಹ ರೇಷನ್ ಕಾರ್ಡ್ ತಕ್ಷಣ ರದ್ದುಪಡಿ ಆಗಲಿದೆ.
ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್!
ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಇದೇ ಕೊನೆಯ ದಿನಾಂಕ!
ಇದೇ ಬರುವ ಫೆಬ್ರವರಿ 28, 2024 ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಕೊನೆಯ ದಿನಾಂಕ (last date) ವಾಗಿದ್ದು ಈ ದಿನಾಂಕದ ಒಳಗೆ ಲಿಂಕ್ ಮಾಡಿಕೊಳ್ಳದೆ ಇದ್ದರೆ ಅಂತವರಿಗೆ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಅಥವಾ ಪಡಿತರ ಚೀಟಿಯನ್ನು ಆಧರಿಸಿ ಕೊಡಲಾಗುವ ಯಾವುದೇ ಯೋಜನೆಯ ಪ್ರಯೋಜನವೂ ಕೂಡ ಸಿಗುವುದಿಲ್ಲ ಎಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಲಿಂಕ್ ಮಾಡಿಕೊಳ್ಳಬಹುದು!
ಆಹಾರ ಇಲಾಖೆಯ ಅಧಿಕಾರಿಗಳು (food department officers) ಈಗಾಗಲೇ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ನಾಗರಿಕ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಿಕೊಡಲು ಕೇಳಿಕೊಂಡರೆ ಯಾವುದೇ ವಿಳಂಬ ಮಾಡದೆ ಅಥವಾ ನಿರ್ಲಕ್ಷ ತೋರಿಸದೆ ತಕ್ಷಣ ಲಿಂಕ್ ಮಾಡಿ ಕೊಡಬೇಕು. ಇದರ ಜೊತೆಗೆ ಆನ್ಲೈನ್ ಮೂಲಕವೂ ಕೂಡ ನೀವು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳುವುದು ಇದಕ್ಕಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ.
ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ
Announcement of last date for linking Aadhaar Card to Ration Card
Our Whatsapp Channel is Live Now 👇