ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್; ಹಣ ಪಡೆಯೋಕೆ ಮತ್ತೊಂದು ರೂಲ್ಸ್
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಇಂದು ಬಹಳ ಮಹತ್ವವನ್ನು ಪಡೆದುಕೊಂಡಿದೆ.
ಎರಡು ಸಾವಿರ ರೂಪಾಯಿಗಳನ್ನು ಮಹಿಳೆಯರು ಉಚಿತವಾಗಿ ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಹೀಗೆ ಸರ್ಕಾರದಿಂದ ಸಿಗುವ 2,000ಗಳನ್ನು ಕಳೆದುಕೊಳ್ಳಲು ಯಾರಿಗೆ ತಾನೇ ಇಷ್ಟವಿರುತ್ತೆ ಹೇಳಿ! ಆದರೆ ಎಷ್ಟೋ ಮಹಿಳೆಯರಿಗೆ ಹಣ ಬಾರದೆ ಇರುವುದು ನಿಜಕ್ಕೂ ಬೇಸರ ಮೂಡಿಸಿದೆ.
ಈ ರೇಷನ್ ಕಾರ್ಡ್ ಇದ್ದೋರಿಗೆ ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್! ಇಲ್ಲಿದೆ ಮಾಹಿತಿ
ಹೌದು, ಗೃಹಲಕ್ಷ್ಮಿ ಯೋಜನೆಗೆ ಕೋಟ್ಯಾಂತರ ಮಹಿಳೆಯರು ಫಲಾನುಭವಿಗಳಾಗಿದ್ದರು ಕೂಡ ಇದುವರೆಗೆ ಒಂದು ಕಂತಿನ ಹಣವನ್ನು ಪಡೆದುಕೊಳ್ಳದೆ ಇರುವ ಅರ್ಹ ಫಲಾನುಭವಿಗಳು ಇದ್ದಾರೆ. ಅಂತವರಿಗೆ ಹಣ ಸಂದಾಯ ಮಾಡಲು ಸರ್ಕಾರ ದಿನಕ್ಕೊಂದು ನೀತಿ ಜಾರಿಗೆ ತರುತ್ತಿದೆ.
ಐಟಿ ಪಾವತಿಸುವ ಮಹಿಳೆಯರಿಗೆ ಹಣ ಬರುವುದಿಲ್ಲ!
ಆದಾಯ ತೆರಿಗೆ (income tax payer) ಅಥವಾ ಜಿಎಸ್‌ಟಿ (GST) ಪಾವತಿ ಮಾಡುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ಸರ್ಕಾರ ತನ್ನ ಮಾನದಂಡಗಳಲ್ಲಿ ತಿಳಿಸಿದೆ.
ಆದರೂ ಕೂಡ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದು ಸರ್ಕಾರದ ಗಮನಕ್ಕೆ ಬಂದಿದ್ದು, ಅಂತಹ ಅರ್ಜಿಗಳನ್ನು ವಜಾ ಮಾಡಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಅರ್ಹ ಮಹಿಳೆಯರಿಗೂ ಕೂಡ ತಾಂತ್ರಿಕ ದೋಷ (technical issues) ದಿಂದಾಗಿ ಹಣ ಸಂದಾಯ ಆಗುತ್ತಿಲ್ಲ.
ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಘೋಷಣೆ
ಇದೀಗ ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದ್ದು ಮಹಿಳೆಯರು ಐಟಿ ಜಿಎಸ್‌ಟಿ ಪಾವತಿ ಮಾಡುತ್ತಿಲ್ಲ ಎಂದಾದರೆ, ತಾವು ತೆರಿಗೆ ಪಾವತಿದಾರರಲ್ಲ ಎನ್ನುವ ದೃಢೀಕರಣ ಪತ್ರವನ್ನು ಸಲ್ಲಿಸಬೇಕು.
ಗೃಹಜ್ಯೋತಿ ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ
ದೃಢೀಕರಣ ಪತ್ರ ಎಲ್ಲಿಗೆ ಸಲ್ಲಿಸಬೇಕು?
ಐ ಟಿ ಪಾವತಿ ಮಾಡುತ್ತಿಲ್ಲ ಎನ್ನುವ ದೃಢೀಕರಣ ಪತ್ರವನ್ನು ಹತ್ತಿರದ ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಇಲ್ಲಿ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ರವಾನಿಸಲಾಗುತ್ತದೆ.
ಇಲ್ಲಿಂದ ಪ್ರಧಾನ ಕಚೇರಿಗೆ ಹಾಗೂ ಪ್ರಧಾನ ಕಚೇರಿಯಿಂದ ಈ ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶದ ವಿಭಾಗಕ್ಕೆ ಕಳುಹಿಸಲಾಗುತ್ತದೆ ಹಾಗೂ ಇಲ್ಲಿ ಅರ್ಜಿ ಪರಿಶೀಲನೆ ನಡೆಸಿ ಒಂದು ವೇಳೆ ಮಹಿಳೆಯರು ನಿಜಕ್ಕೂ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದಾರೆ ಅಂತವರಿಗೆ ಜಮಾ (Money Deposit) ಆಗುವಂತೆ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಮುಂದಿನ ಕಂತಿನ ಹಣ ಬರೋದಿಲ್ವಾ? ಇಲ್ಲಿದೆ ಯೋಜನೆಯ ಬಿಗ್ ಅಪ್ಡೇಟ್
ಒಮ್ಮೆ ಸರ್ಕಾರದ ಡಾಟಾ ಬೇಸ್ ನಲ್ಲಿ ನಿಮ್ಮ ಹೆಸರು ಸೇರಿಕೊಂಡರೆ ಮತ್ತೆ ಯಾವುದೇ ಸಮಸ್ಯೆ ಇಲ್ಲದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ (Bank Account) ಬರುತ್ತದೆ. ಮಾಹಿತಿ ಕಣಜ ವೆಬ್ಸೈಟ್ ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ನಿಮ್ಮ ಖಾತೆ ಆಕ್ಟಿಂಗ್ ಇದ್ಯೋ ಇಲ್ವೋ ಎನ್ನುವುದನ್ನು ಚೆಕ್ ಮಾಡಿ ಒಂದು ವೇಳೆ ಖಾತೆ ಆಕ್ಟಿವ್ ಇಲ್ಲದೆ ಇದ್ರೆ ತಕ್ಷಣ ಐಟಿ ಪಾವತಿ ಮಾಡುತ್ತಿಲ್ಲ ಎನ್ನುವ ದೃಢೀಕರಣ ಪತ್ರವನ್ನು ಸಲ್ಲಿಸಿ.
Another New Rules to Get Gruha Lakshmi Scheme Money