ಸಿಹಿ ಸುದ್ದಿ! ಗೃಹಜ್ಯೋತಿ ಫ್ರೀ ಕರೆಂಟ್; ಬಾಡಿಗೆ ಮನೆಯಲ್ಲಿರುವವರಿಗೆ ಫುಲ್ ಖುಷ್!
ಕಳೆದ ಏಳು ತಿಂಗಳುಗಳಿಂದ ಲಕ್ಷಾಂತರ ಜನ ಮನೆಯಲ್ಲಿ ಒಂದೇ ಒಂದು ರೂಪಾಯಿ ಕರೆಂಟ್ ಬಿಲ್ ಪಾವತಿ ಮಾಡದೆ ಉಚಿತ ವಿದ್ಯುತ್ (free electricity) ಪಡೆದುಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಸರ್ಕಾರದ ಗೃಹಜ್ಯೋತಿ ಯೋಜನೆ ಕಾರಣ.
ಗೃಹಜ್ಯೋತಿ ಯೋಜನೆ ಕೇವಲ ಬಡವರಿಗೆ ಮಾತ್ರವಲ್ಲದೆ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗ (middle class family) ದವರಿಗೂ ಕೂಡ ಬಹಳ ದೊಡ್ಡ ಅನುಕೂಲ ಮಾಡಿಕೊಟ್ಟಿದೆ.
ಯಾಕಂದ್ರೆ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಕರೆಂಟ್ ಬಿಲ್ ಪಾವತಿ ಮಾಡಬೇಕಿತ್ತು. ಆದರೆ 200 ಯೂನಿಟ್ ಒಳಗೆ ವಿದ್ಯುತ್ ಖರ್ಚು ಮಾಡಿದರೆ ಅಂತವರು ಉಚಿತವಾಗಿ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗಿದೆ. 7 ತಿಂಗಳಿನಿಂದ ಸರ್ಕಾರ ಕೊಟ್ಟಿರುವ ಈ ಕೊಡುಗೆಯ ಬಗ್ಗೆ ಜನರು ಶ್ಲಾಘಿಸುತ್ತಿದ್ದಾರೆ.
ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಮತ್ತೆ ಅವಕಾಶ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!
ಬಾಡಿಗೆ ಮನೆಯಲ್ಲಿ ಇರುವವರಿಗೆ ಗುಡ್ ನ್ಯೂಸ್!
ಇಂಧನ ಇಲಾಖೆಯ ಕಾರ್ಯದರ್ಶಿ ಅಪರ್ಣ ಅವರು ತಿಳಿಸಿರುವಂತೆ ಬಾಡಿಗೆ ಮನೆಯಲ್ಲಿ (Rent House) ಇರುವ ಹಾಗೂ ಗೃಹ ಜ್ಯೋತಿ (gruha jyothi scheme) ಯ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿರುವವರು ಇನ್ನು ಮುಂದೆ D-Link ಮಾಡಿಕೊಳ್ಳಬಹುದು.
ಏನಿದು D-Link?
ಗೃಹ ಜ್ಯೋತಿ ಯೋಜನೆ ಬಾಡಿಗೆ ಮನೆಯಲ್ಲಿ ವಾಸವಾಗಿರುವವರಿಗೆ ಬಹಳ ದೊಡ್ಡ ಕೊಡುಗೆ ನೀಡಿದೆ ಎಂದೇ ಹೇಳಬಹುದು. ಬಾಡಿಗೆ ಪಾವತಿ ಮಾಡುವುದು ಮಾತ್ರವಲ್ಲದೆ ಸಾವಿರಾರು ರೂಪಾಯಿಗಳ ವಿದ್ಯುತ್ ಬಿಲ್ (Electricity Bill) ಕೂಡ ಪಾವತಿ ಮಾಡಬೇಕಿತ್ತು. ಆದರೆ ಈಗ ಇಂತಹ ಜನರು ಉಚಿತವಾಗಿ ವಿದ್ಯುತ್ ಪಡೆದುಕೊಳ್ಳುವಂತೆ ಆಗಿದೆ. ಇನ್ನು ಬಾಡಿಗೆ ಮನೆಯಲ್ಲಿ ಇರುವವರು ಮನೆಯನ್ನು ಬದಲಾಯಿಸಿದರೆ ಹಳೆಯ ನೋಂದಣಿಯನ್ನು ರದ್ದುಪಡಿಸಿಕೊಂಡು ಹೊಸದಾಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಡಿ ಲಿಂಕ್ ಪ್ರಕ್ರಿಯೆನ್ನಲಾಗುತ್ತದೆ.
ಫ್ರೀ ಬಸ್ ಸೌಲಭ್ಯದ ಜೊತೆ ಮಹಿಳೆಯರಿಗೆ ಮತ್ತೊಂದು ಬೆನಿಫಿಟ್ ನೀಡಿದ ಸರ್ಕಾರ!
ಮೊದಲು ಈ ಕೆಲಸಕ್ಕೆ ಸಂಬಂಧಪಟ್ಟ ಇಲಾಖೆಗೆ ಹೋಗಿ ಕಾದು ಕುಳಿತು ಮಾಡಿಸಿಕೊಳ್ಳಬೇಕಿತ್ತು. ಆದರೆ ಈಗ ಆನ್ಲೈನ್ (online) ಮೂಲಕ ಬಾಡಿಗೆ ಮನೆಯಲ್ಲಿ ಇರುವವರು ಮನೆ ಬದಲಾವಣೆ ಮಾಡಿದಾಗ ಹಳೆಯ ನೋಂದಣಿ ಸಂಖ್ಯೆಯನ್ನು ತೆಗೆದು ಹೊಸದಾಗಿ ಬದಲಾಯಿಸಿಕೊಳ್ಳಲು ಡಿ ಲಿಂಕ್ ಮಾಡಿಕೊಳ್ಳಬಹುದು..
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್; ಹಣ ಪಡೆಯೋಕೆ ಮತ್ತೊಂದು ರೂಲ್ಸ್
ಬಡವರಿಗೆ ಮತ್ತೊಂದು ಗುಡ್ ನ್ಯೂಸ್!
ಹಳ್ಳಿ ಪ್ರದೇಶಗಳಲ್ಲಿ ಸಾಕಷ್ಟು ಜನ ಅತಿ ಕಡಿಮೆ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ. ಅಂತವರಿಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, 48 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿರುವವರಿಗೆ ಹೆಚ್ಚು ಯೂನಿಟ್ ಅನ್ನು ನೀಡಲಾಗುತ್ತಿದೆ ಅಂದರೆ ಈ ಹಿಂದೆ 10% ಹೆಚ್ಚುರಿಯಾಗಿ ನೀಡಲಾಗುತ್ತಿತ್ತು. ಅತಿ ಕಡಿಮೆ ವಿದ್ಯುತ್ ಬಳಸುವವರಿಗೆ ಇದು ಬೆನಿಫಿಟ್ ನೀಡುವುದಿಲ್ಲ. ಈ ಕಾರಣಕ್ಕೆ 10 ಯೂನಿಟ್ ಗಳನ್ನೇ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಅಂದರೆ 48 ಯೂನಿಟ್ ಬಳಕೆ ಮಾಡುತ್ತಿರುವವರು 58 ಯೂನಿಟ್ ಗಳ ಲಿಮಿಟ್ ಪಡೆದುಕೊಳ್ಳುತ್ತಾರೆ.
Gruha jyothi Free Electricity update for those who live in a rented house
Our Whatsapp Channel is Live Now 👇