ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕ್ಯಾನ್ಸಲ್! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಡೆಡ್ ಲೈನ್
ಸರ್ಕಾರ ಈಗಾಗಲೇ ತಿಳಿಸಿರುವ ಈ ನಿಯಮವನ್ನು ನೀವು ಪಾಲಿಸಲೇಬೇಕು. ಒಂದುವೇಳೆ ಈ ಕೆಲಸ ಮಾಡಿಲ್ಲ ಅಂದ್ರೆ ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆ (AnnaBhagya scheme) ಯ ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣವಾಗಲಿ ನಿಮ್ಮ ಖಾತೆಗೆ (Bank Account) ಜಮಾ ಆಗಲು ಸಾಧ್ಯವೇ ಇಲ್ಲ.
ಹಾಗಾದ್ರೆ ಸರ್ಕಾರದ ಹೊಸ ನಿಯಮ ಏನು? ಹಣ ಇನ್ನು ಮುಂದೆಯೂ ಬರಬೇಕು ಅಂದ್ರೆ ಯಾವ ಕೆಲಸ ಮಾಡಿಕೊಳ್ಳಬೇಕು ಎನ್ನುವುದನ್ನು ವಿವರವಾಗಿ ನೋಡೋಣ.

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ
ಕೆ ವೈ ಸಿ ಕಡ್ಡಾಯ! (KYC mandatory)
ನಿಮಗೆಲ್ಲ ತಿಳಿದಿರುವ ಹಾಗೆ ರೇಷನ್ ಕಾರ್ಡ್ ಹೊಂದಿದ್ದು, ಉಚಿತ ಪಡಿತರ ಪಡೆದುಕೊಳ್ಳುತ್ತಿದ್ದರೆ ಹಾಗೂ ಗೃಹಲಕ್ಷ್ಮಿ ಹಣವನ್ನು ಪಡೆಯುತ್ತಿದ್ದರೆ, ಈ ಕೆಲಸ ಕಡ್ಡಾಯ. ಮನೆಯ ಯಜಮಾನ ತನ್ನ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಈ ಹಿಂದೆ ತಿಳಿಸಿತ್ತು.
ಈಗ ಬಂದಿರುವ ಹೊಸ ನಿಯಮದ ಪ್ರಕಾರ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ ಈಕೆ ವೈ ಸಿ ಆಗಿರಬೇಕು. ಅಂದ್ರೆ ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಿರಬೇಕು
ಈಕೆ ವೈ ಸಿ ಎಲ್ಲಿ ಮಾಡಿಸಬಹುದು?
ನಿಮ್ಮ ಮನೆಯ ಎಲ್ಲಾ ಸದಸ್ಯರ ಕೆವೈಸಿ ಪ್ರಕ್ರಿಯೆ ಆಗದೆ ಇದ್ರೆ ಮುಂದಿನ ತಿಂಗಳಿನಿಂದ ಯಾವುದೇ ಹಣ ಡಿ ಬಿ ಟಿ ಆಗುವುದಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದಕ್ಕಾಗಿ ನೀವು ಹತ್ತಿರದ, ನ್ಯಾಯಬೆಲೆ ಅಂಗಡಿಗೆ ಹೋಗಿ ಅಥವಾ ನೀವು ಎಲ್ಲಿ ಪಡಿತರ ತೆಗೆದುಕೊಳ್ಳುತ್ತಿರುವ ಅದೇ ನ್ಯಾಯಬೆಲೆ ಅಂಗಡಿಗೆ ಹೋಗಿ ಈಕೆ ವೈ ಸಿ ಆಗಿದಿಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಸಿ ಒಂದು ವೇಳೆ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸದಸ್ಯರ ಕೆವೈಸಿ ಆಗದೆ ಇದ್ದರೆ ತಕ್ಷಣ ನ್ಯಾಯಬೆಲೆ ಅಂಗಡಿಯಲ್ಲಿಯೇ ಈ ಕೆಲಸ ಮಾಡಿಸಿಕೊಳ್ಳಿ.
ನಿಮ್ಮ ಊರಲ್ಲೇ ಕರ್ನಾಟಕ ಒನ್ ಫ್ರಾಂಚೈಸಿ ಪ್ರಾರಂಭಿಸಲು ಅವಕಾಶ! ಅರ್ಜಿ ಸಲ್ಲಿಸಿ
ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನೀವು ಸುಲಭವಾಗಿ ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರದಿಂದ ಬಿಡುಗಡೆ ಆಗುವ ಸೌಲಭ್ಯವನ್ನು ಪಡೆಯಬಹುದು. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಖಾತೆಗೆ ಜಮಾ ಆಗುವಂತೆ ನೋಡಿಕೊಳ್ಳಬಹುದು.
ಕೊನೆಯ ದಿನಾಂಕ ಘೋಷಿಸಿದ ಸರ್ಕಾರ!
ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ (Ration Card) ಲಿಂಕ್ ಮಾಡಿಕೊಳ್ಳುವ ಪ್ರಕ್ರಿಯೆಗೆ ಇದೆ ಫೆಬ್ರುವರಿ 29 ಕೊನೆಯ ದಿನಾಂಕವಾಗಿದೆ. ಕೇವಲ ಇನ್ನೂ ಎರಡು ವಾರಗಳ ಕಾಲಾವಕಾಶ ಇದ್ದು ಅಷ್ಟರಲ್ಲಿ ನೀವು ನಿಮ್ಮ ನ್ಯಾಯಬೆಲೆ ಅಂಗಡಿಯಲ್ಲಿ ಕೆವೈಸಿ ಮಾಡಿಸಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ ₹2000 ಪಡೆಯುವ ಮಹಿಳೆಯರಿಗೆ ಇಲ್ಲಿದೆ ಭರ್ಜರಿ ಸುದ್ದಿ!
ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯ!
ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಹೆಸರು ಯಾರದಿದೆಯೋ ಅವರು ಬ್ಯಾಂಕ ಖಾತೆಗೆ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಆದರೆ ಈ ಕೆಲಸವನ್ನು ಮನೆಯ ಯಜಮಾನಿ ಮಾಡಿಕೊಂಡರೆ ಮಾತ್ರ ಸಾಲದು. ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರು ಕೂಡ ಆಧಾರ್ ಕಾರ್ಡ್ ಲಿಂಕ್ ಅನ್ನು ಬ್ಯಾಂಕ್ ಖಾತೆಗೆ ಮಾಡಿಸಿಕೊಳ್ಳಬೇಕು.
ಈ ಕೆಲಸ ಮಾಡಲು ನೀವು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ತೆರಳಿ, ಬ್ಯಾಂಕ್ ಸಿಬ್ಬಂದಿಗಳಿಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ವಿವರಗಳನ್ನು ನೀಡಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.
ಈ ರೀತಿ ಸರ್ಕಾರದ ನಿಯಮಗಳನ್ನು ನೀವು ಪಾಲನೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಖಾತೆಗೆ ಪ್ರತಿ ತಿಂಗಳು ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ (Money Deposit) ಆಗುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ; ರಾಜ್ಯದ ಜನತೆಗೆ ಗುಡ್ ನ್ಯೂಸ್
Annabhagya, Gruha lakshmi Money Canceled, Government dead line about ration card