ನಿಮ್ಮ ಊರಲ್ಲೇ ಕರ್ನಾಟಕ ಒನ್ ಫ್ರಾಂಚೈಸಿ ಪ್ರಾರಂಭಿಸಲು ಅವಕಾಶ! ಅರ್ಜಿ ಸಲ್ಲಿಸಿ

ಕೇವಲ 100 ರೂಪಾಯಿಗಳ ಡಿಪೋಸಿಟ್ ಇಟ್ಟು ಕರ್ನಾಟಕ ಒನ್ ಫ್ರಾಂಚೈಸಿ ಪಡೆದುಕೊಳ್ಳಿ; ಉತ್ತಮ ಆದಾಯ ಗಳಿಸಿ!

ರಾಜ್ಯದಲ್ಲಿ ಒಟ್ಟು 135ಕ್ಕೂ ಹೆಚ್ಚಿನ ಕರ್ನಾಟಕ ಒನ್ ಕೇಂದ್ರ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ನೀವು ಬಯಸಿದರೆ, ನಿಮ್ಮ ಸ್ವಂತ ದುಡಿಮೆಗಾಗಿ ಕರ್ನಾಟಕ ಒನ್ ಫ್ರಾಂಚೈಸಿ (Karnataka one franchise) ಪಡೆದುಕೊಳ್ಳಬಹುದು.

ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು, ಯಾವುದೇ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಸರ್ವಜನಿಕರು ಕರ್ನಾಟಕ ವನ್ ನಂತಹ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕು. ಸುಮಾರು 700ಕ್ಕೂ ಅಧಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸೇವೆಗಳನ್ನು ಕರ್ನಾಟಕ ಕೇಂದ್ರದಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

ಗೃಹಲಕ್ಷ್ಮಿ ಯೋಜನೆಯ ₹2000 ಪಡೆಯುವ ಮಹಿಳೆಯರಿಗೆ ಇಲ್ಲಿದೆ ಭರ್ಜರಿ ಸುದ್ದಿ!

ನಿಮ್ಮ ಊರಲ್ಲೇ ಕರ್ನಾಟಕ ಒನ್ ಫ್ರಾಂಚೈಸಿ ಪ್ರಾರಂಭಿಸಲು ಅವಕಾಶ! ಅರ್ಜಿ ಸಲ್ಲಿಸಿ - Kannada News

ಯಾವುದೇ ದೂರದ ತಾಲೂಕು ಅಥವಾ ಜಿಲ್ಲಾ ಆಡಳಿತ ಕಚೇರಿಗೆ ಹೋಗದೆ ಸ್ಥಳೀಯ ಸೇವಾ ಕೇಂದ್ರದಲ್ಲಿ ಸರ್ಕಾರಿ ಸೇವೆ ಪಡೆದುಕೊಳ್ಳಲು ಇಂದು ಅವಕಾಶ ಮಾಡಿಕೊಡಲಾಗಿದೆ. ಇದೀಗ 135 ಕರ್ನಾಟಕ ವನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಫ್ರಾಂಚೈಸಿ ಪಡೆದುಕೊಳ್ಳಬಹುದು.

ಫ್ರಾಂಚೈಸಿ ಯಾರು ಪಡೆದುಕೊಳ್ಳಬಹುದು? (Who can get franchise)

*ಭಾರತೀಯ ಪ್ರಜೆ ಆಗಿರುವ ಕರ್ನಾಟಕದ ನಿವಾಸಿ ಆಗಿರುವ ಯಾರಾದರೂ ಅರ್ಜಿ ಸಲ್ಲಿಸಬಹುದು.
ಯಾವುದೇ ಕಂಪನಿ ಅಥವಾ ಎನ್‌ಜಿಓ ಪಾಲುದಾರಿಕೆ ಮೂಲಕ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

*ಡಿಪ್ಲೋಮೋ, ಐಟಿಐ ಅಥವಾ ತತ್ಸಮಾನ ತಾಂತ್ರಿಕ ಕೋರ್ಸ್ ಗಳಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಪಡೆದುಕೊಂಡಿರುವವರಿಗೆ ಮೊದಲ ಆದ್ಯತೆ.

*ಅರ್ಜಿದಾರನಿಗೆ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯನ್ನು ಓದಲು ಬರೆಯಲು ಹಾಗೂ ಕಂಪ್ಯೂಟರ್ನಲ್ಲಿ ಟೈಪ್ ಮಾಡಲು ಗೊತ್ತಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

*ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿರಬಾರದು

*ಕರ್ನಾಟಕವನ್ನು ಕೇಂದ್ರ ಆರಂಭಿಸಲು ಬೇಕಾಗಿರುವ ಸ್ಥಳಾವಕಾಶ ಹಾಗೂ ಉಪಕರಣಗಳನ್ನು ಹೊಂದಿರಬೇಕು.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ; ರಾಜ್ಯದ ಜನತೆಗೆ ಗುಡ್ ನ್ಯೂಸ್

Karnataka One Seva Kendra franchise
ಫ್ರಾಂಚೈಸಿ ಗೆ ಬೇಕಾಗಿರುವ ಉಪಕರಣಗಳು! (Materials for Karnataka one centre)
ಸ್ಕ್ಯಾನ್ ಮತ್ತು ಪ್ರಿಂಟ್ ಮಾಡುವ ಪ್ರಿಂಟಿಂಗ್ ಮಷೀನ್ (printing machine)
ಕಂಪ್ಯೂಟರ್ (computer)
ಬಯೋಮೆಟ್ರಿಕ್ ಸ್ಕ್ಯಾನರ್ (biometric scanner)
ಇಂಟರ್ನೆಟ್ ಸೌಲಭ್ಯ
ವೈಫೈ ರಿಸಿವರ್
ವೆಬ್ ಕ್ಯಾಮೆರಾ
ಇಷ್ಟು ಬೇಸಿಕ್ ಉಪಕರಣಗಳು ಕರ್ನಾಟಕ ಒನ್ ಫ್ರಾಂಚೈಸಿ ಪಡೆದುಕೊಳ್ಳಲು ಬೇಕೇ ಬೇಕು.

ಸಿಹಿ ಸುದ್ದಿ! ಗೃಹಜ್ಯೋತಿ ಫ್ರೀ ಕರೆಂಟ್; ಬಾಡಿಗೆ ಮನೆಯಲ್ಲಿರುವವರಿಗೆ ಫುಲ್ ಖುಷ್!

ಫ್ರಾಂಚೈಸಿ ಪಡೆಯಲು ಬೇಕಾಗಿರುವ ದಾಖಲೆಗಳು! (Needed documents to get franchise)

ವಿದ್ಯಾರ್ಹತೆ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ
ಮೊಬೈಲ್ ಸಂಖ್ಯೆ
ಪಾಸ್ ಪೋರ್ಟ್ ಅಳತೆಯ ಫೋಟೋ
ಅರ್ಜಿ ಶುಲ್ಕ 100 ರೂ.ಗಳು

ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಮತ್ತೆ ಅವಕಾಶ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!

ಅರ್ಜಿ ಸಲ್ಲಿಸುವುದು ಹೇಗೆ (how to apply for franchise)

ಕರ್ನಾಟಕ ಒನ್ ಫ್ರಾಂಚೈಸಿ ಪಡೆದುಕೊಳ್ಳಲು https://karnatakaone.gov.in/ ಈ ವೆಬ್ ಸೈಟಿಗೆ ಭೇಟಿ ನೀಡಿ. ಅಗತ್ಯ ಇರುವ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಭರ್ತಿ ಮಾಡಿ. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಶುಲ್ಕ ಪಾವತಿ ಮಾಡಿದ ನಂತರ ನಿಮ್ಮ ಅರ್ಜಿ ಸ್ವೀಕಾರಗೊಳ್ಳುತ್ತದೆ. ಅರ್ಜಿಯ ಸ್ಥಿತಿ ತಿಳಿದುಕೊಳ್ಳಲು ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ (acknowledgement) ಪ್ರತಿಯನ್ನು ಪಡೆದುಕೊಳ್ಳಿ.

Opportunity to start a Karnataka One franchise in your hometown

Follow us On

FaceBook Google News

Opportunity to start a Karnataka One franchise in your hometown