Karnataka NewsBangalore News

ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಭರ್ಜರಿ ಸುದ್ದಿ! ಹಕ್ಕು ಪತ್ರ ವಿತರಣೆ

ಅಕ್ರಮ ಸಕ್ರಮ ಯೋಜನೆ ಹಾಗೂ ಬಗೆರ್ ಹುಕುಂ ಯೋಜನೆಯ ಅಡಿಯಲ್ಲಿ ನಮೂನೆ 50, ನಮೂನೆ 53 ಮತ್ತು ನಮೂನೆ 57ರ ಪ್ರಕಾರ ಸರ್ಕಾರಿ ಜಮೀನು (government land) ಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಹಕ್ಕು ಪತ್ರ (Hakku Patra) ನೀಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ರಾಜ್ಯದಲ್ಲಿ ಸಾವಿರಾರು ರೈತರು (farmers) ಸ್ವಂತ ಜಮೀನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಕೆಲವರ ಬಳಿ ಅಪಾರವಾದ ಜಮೀನು ಇದ್ದರೆ ಇನ್ನು ಕೆಲವರು ತುಂಡು ಜಮೀನು ಇಲ್ಲದೆ ಖಾಲಿ ಕೈಲಿ ನಿಲ್ಲುವಂತೆ ಆಗಿದೆ, ಈ ನಡುವೆ ಅದೆಷ್ಟೋ ಜನ ಸರಕಾರಿ ಜಮೀನುಗಳಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ.

Wrong name on your land Documents, Change easily like this

ನಾಟಿಕೋಳಿ ಸಾಕಾಣಿಕೆ ತರಬೇತಿ ಜೊತೆಗೆ ಪ್ರತಿ ದಿನ ₹1,000 ರೂಪಾಯಿ ಗಳಿಸಿ

ಇಂಥವರ ಬಳಿ ಸಾಗುವಳಿ ಮಾಡಲು ಜಮೀನು ಇದೆ, ಆದರೆ ಆ ಜಮೀನು ತಮ್ಮ ಹೆಸರಿಗೆ ಇಲ್ಲ ಎನ್ನುವ ಕೊರತೆ ಇದ್ದೇ ಇದೆ. ಇದೇ ಕಾರಣಕ್ಕೆ ತಾವು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಹೆಸರಿಗೆ ಮಾಡಿಕೊಡುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದು ಆಗಿದೆ. ಇದೀಗ ಅಕ್ರಮ ಸಕ್ರಮಕ್ಕೆ ಸಲ್ಲಿಕೆ ಆಗಿರುವ ಅರ್ಜಿ ಪರಿಶೀಲನೆ (application verification) ನಡೆಸಿ ಅರ್ಹ ರೈತರಿಗೆ ಹಕ್ಕು ಪತ್ರ ನೀಡಲು ಸರ್ಕಾರ ಮುಂದಾಗಿದೆ.

ವಂಚನೆಯನ್ನು ತಪ್ಪಿಸಲು ಕ್ರಮ!

ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿರುವಂತೆ ಹಕ್ಕುಪತ್ರ ವಿತರಣೆಯ ಸಂದರ್ಭದಲ್ಲಿ ನಿಜವಾದ ಫಲಾನುಭವಿ ರೈತರಿಗೆ ಮಾತ್ರ ಹಕ್ಕು ಪತ್ರ ದೊರೆಯಬೇಕು ಎಂದು ಹೇಳಿದ್ದಾರೆ. ಈ ಹಿಂದೆಯೂ ಸಾಕಷ್ಟು ಜನ ಸಾಗುವಳಿ ಮಾಡದೆ ಇದ್ದರೂ ಕೂಡ ತಮ್ಮ ಹೆಸರಿಗೆ ಜಮೀನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಬಿಗ್ ಅಪ್ಡೇಟ್! ಮತ್ತೊಂದು ಹೊಸ ಸೇವೆ

ಅಷ್ಟೇ ಅಲ್ಲದೆ ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳ ಬೇರೆ ಬೇರೆ ಗ್ರಾಮಗಳಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವ ನಕಲಿ ರೈತರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಿಜವಾದ ಫಲಾನುಭವಿ ರೈತರಿಗೆ ವಂಚನೆ ಆಗಿ, ಅನರ್ಹರಿಗೆ ಹೆಚ್ಚು ಜಮೀನು ಹಕ್ಕು ಪತ್ರ ಸಿಗುವ ಸಾಧ್ಯತೆ ಇರುತ್ತದೆ. ಇಂತಹ ಮೋಸ ತಡೆಗಟ್ಟುವ ಸಲುವಾಗಿ ಸರ್ಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ.

Agriculture Landಸಂಪೂರ್ಣ ಡಿಜಿಟಲೀಕರಣ! (Digitisation)

ಈ ಬಾರಿ ಹಕ್ಕು ಪತ್ರ ವಿತರಣೆಗೂ ಮುನ್ನ ಸಂಪೂರ್ಣ ಡಿಜಿಟಲ್ ಮಾಡಲು ಸರ್ಕಾರ ನಿರ್ಧರಿಸಿದೆ. ಅಂದರೆ ಅರ್ಹ ಫಲಾನುಭವಿ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡುವುದನ್ನು ಡಿಜಿಟಲೈಸ್ ಮಾಡುವುದರ ಮೂಲಕ ಅರ್ಹರಿಗೆ ಮಾತ್ರ ಜಮೀನು ಸಿಗುವಂತೆ ಮಾಡಲಾಗುವುದು.

ಇದಕ್ಕೆ ಸಂಬಂಧಪಟ್ಟ ಹಾಗೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿರುವ ಸಚಿವರು, ಯಾವುದೇ ಪ್ರಭಾವಿ ವ್ಯಕ್ತಿಗಳ ಬೆದರಿಕೆಗೆ ಹೆದರಿ ಅಥವಾ ಇನ್ಯಾವುದೋ ಕಾರಣಕ್ಕೆ ರೈತರಿಗೆ ಮೋಸ ಆಗದೆ ಇರಲು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.

ಗೃಹಲಕ್ಷ್ಮಿ 6ನೇ ಕಂತಿನ ಹಣ ಇನ್ನೂ ಬಂದಿಲ್ವಾ? ಯಾಕಿಷ್ಟು ತಡ, ಕಾರಣ ಇಲ್ಲಿದೆ

ಕೇವಲ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕೆ ಅಂತಹ ಅರ್ಜಿಗಳನ್ನು ಅನುಮೋದನೆ ಮಾಡಬಾರದು, ಅದರ ಬದಲು ಸ್ಥಳಕ್ಕೆ ಭೇಟಿ ನೀಡಿ ನಿಜಕ್ಕೂ ಆ ರೈತ ಹಕ್ಕು ಪತ್ರ ಪಡೆದುಕೊಳ್ಳಲು ಅರ್ಹನೆ ಎಂಬುದನ್ನು ಪರಿಶೀಲಿಸಬೇಕು. ಬಳಿಕ, ಆನ್ಲೈನ್ ಮೂಲಕ ಮತ್ತು ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಬೇಕು. ಬಳಿಕವಷ್ಟೇ ಅರ್ಹ ಅನುಭವಿ ರೈತರಿಗೆ, ಭೂರಹಿತ ರೈತರಿಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ವಿತರಣೆ ಮಾಡಬೇಕು.

ಅಕ್ರಮ ಸಕ್ರಮಕ್ಕಾಗಿ ಕಾಯುತ್ತಿರುವ ಸಾಗುವಳಿ ಮಾಡುತ್ತಿರುವ ರೈತರು ಬಹಳ ಮುಖ್ಯವಾಗಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಕೊಟ್ಟು ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಸಿದ ನಂತರ ಎಲ್ಲವು ಸರಿಯಾಗಿದೆ ಎನ್ನುವುದು ಸರ್ಕಾರಕ್ಕೆ ಖಚಿತವಾದರೆ ಅಂತಹ ಜಮೀನಿಗೆ ಹಕ್ಕು ಪತ್ರ ನೀಡಲಾಗುತ್ತದೆ.

ಒಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಈಗ ಹಕ್ಕು ಪತ್ರ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ನಿಜಕ್ಕೂ ಸಂತಸದ ವಿಚಾರ!

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕ್ಯಾನ್ಸಲ್! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಡೆಡ್ ಲೈನ್

Great news for farmers who are farming on government land

Our Whatsapp Channel is Live Now 👇

Whatsapp Channel

Related Stories