ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಬಿಗ್ ಅಪ್ಡೇಟ್! ಮತ್ತೊಂದು ಹೊಸ ಸೇವೆ

ಉಚಿತ ಬಸ್ ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಪ್ರತ್ಯೇಕ ಬಸ್ ನೀಡಿದ ಸರ್ಕಾರ; ಶಕ್ತಿ ಯೋಜನೆಗೆ ಮತ್ತೊಂದು ಸೇರ್ಪಡೆ

ಈಗಾಗಲೇ ರಾಜ್ಯಾದ್ಯಂತ ಶಕ್ತಿ ಗ್ಯಾರಂಟಿ ಯೋಜನೆ (guarantee schemes) ಹೆಚ್ಚು ಫೇಮಸ್ ಆಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ನಿರೀಕ್ಷೆಗೂ ಮೀರಿ ಧನಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಎಂದೆಂದೂ ಕೇಳರಿಯದ ರೀತಿಯಲ್ಲಿ, ಮಹಿಳಾ ಪ್ರಯಾಣಿಕರಿಂದ ರಸ್ತೆ ಸಾರಿಗೆ ಉಪಯೋಗ ಆಗಿದೆ ಎನ್ನಬಹುದು.

ಹೌದು, ನಿರೀಕ್ಷೆಗೂ ಮೀರಿ ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಬಸ್ (free bus) ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಬಡವರ್ಗದ ಜನರು ನಿತ್ಯ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವುದರ ಮೂಲಕ ತಿಂಗಳಿಗೆ ಒಂದಿಷ್ಟು ಹಣ ಉಳಿತಾಯ ಮಾಡಲು ಕೂಡ ಸಾಧ್ಯವಾಗಿದೆ.

ಗೃಹಲಕ್ಷ್ಮಿ 6ನೇ ಕಂತಿನ ಹಣ ಇನ್ನೂ ಬಂದಿಲ್ವಾ? ಯಾಕಿಷ್ಟು ತಡ, ಕಾರಣ ಇಲ್ಲಿದೆ

ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಬಿಗ್ ಅಪ್ಡೇಟ್! ಮತ್ತೊಂದು ಹೊಸ ಸೇವೆ - Kannada News

ಪ್ರತಿ ರಾಜ್ಯದಲ್ಲಿಯೂ ಕೂಡ ಶಕ್ತಿ ಯೋಜನೆ ಜಾರಿಗೆ ತರಬೇಕು, ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಲು ಸರ್ಕಾರ ಅವಕಾಶ ಕೊಡಬೇಕು ಎನ್ನುವಷ್ಟರ ಮಟ್ಟಿಗೆ ರಾಜ್ಯ ಸರ್ಕಾರದ ಈ ಯೋಜನೆ ಸಕಾರಾತ್ಮಕ ಪರಿಣಾಮ ಬೀರಿದೆ ಎನ್ನಬಹುದು.

ರಾಜ್ಯದಲ್ಲಿ ಉಚಿತ ಪಿಂಕ್ ಬಸ್ ವಿತರಣೆ! (Free pink bus)

ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸುಮಾರು 259 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ದಾಖಲೆ ಸಿಕ್ಕಿದೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ಶಕ್ತಿ ಯೋಜನೆ ಆರಂಭವಾದ ನಂತರ ಬಸ್ಗಳಲ್ಲಿ ಪ್ರಯಾಣಿಕರ ನಡುವೆ ನೂಕು ನುಗ್ಗಲು ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಈಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಬಹುದು.

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕ್ಯಾನ್ಸಲ್! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಡೆಡ್ ಲೈನ್

Pink Bus For Womenಮಹಿಳೆಯರಿಗಾಗಿಯೇ ಪ್ರತ್ಯೇಕ ಬಸ್!

ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಿದ ನಂತರ ಹಿಂದಿನ ಪ್ರಯಾಣಗಳಿಗೆ ಹೋಲಿಸಿದರೆ ಈ ಬಾರಿ ಮಹಿಳೆಯರು ಹಸುಗಳಲ್ಲಿ ಪ್ರಯಾಣ ಮಾಡುವ ಸಂಖ್ಯೆ ಜಾಸ್ತಿಯಾಗಿದೆ ಎಲ್ಲಾ ಬಸ್ಸುಗಳಲ್ಲಿಯೂ ಮಹಿಳೆಯರಿಗೆ ಇರುವ ಒಂದು ಎರಡು ಮೀಸಲಾಗಿರುವ ಸೀಟ್ನಲ್ಲಿ ಎಲ್ಲ ಮಹಿಳೆಯರು ಪ್ರಯಾಣಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಯಾಣದ ವೇಳೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ.

ಇದನ್ನು ಗಮನಿಸಿರುವ ಸರ್ಕಾರ ಹಳೆಯ ಮಾದರಿಯಲ್ಲಿ ಅಂದರೆ ಈ ಹಿಂದೆ ಬಿ ಎಂ ಟಿ ಸಿ ಬಸ್ (BMTC ) ಗಳನ್ನು ಪ್ರತ್ಯೇಕವಾಗಿ ಮಹಿಳೆಯರಿಗೆ ಮೀಸಲಿಡಲಾಗಿತ್ತು. ಅದೇ ಮಾದರಿಯಲ್ಲಿ ಪ್ರತಿದಿನ ಉಚಿತವಾಗಿ ಪ್ರಯಾಣಿಸುವ 60 ರಿಂದ 63 ಲಕ್ಷ ಮಹಿಳೆಯರಿಗಾಗಿ ಪ್ರತೀಕ ಪಿಂಕ್ ಬಸ್ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ

ಮುಂದಿನ ದಿನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಬಿಎಂಟಿಸಿ ಕೆಎಸ್ಆರ್ಟಿಸಿ (KSRTC) ಸೇರಿದಂತೆ ನಾಲ್ಕು ನಿಗಮಗಳ ಅಡಿಯಲ್ಲಿ ಪ್ರತ್ಯೇಕ ಬಸ್ ಸೇವೆ ಪಡೆದುಕೊಳ್ಳಲಿದ್ದಾರೆ. ಈ ಉಚಿತ ಬಸ್ ಗಳನ್ನು ಪ್ರತ್ಯೇಕವಾಗಿ ಮಹಿಳೆಯರಿಗೆ ಮೀಸಲಿಟ್ಟರೆ ಈಗ ರಸ್ತೆಯಲ್ಲಿ ಓಡಾಡುವ ರಾಜ್ಯ ಸಾರಿಗೆ ಬಸ್ಗಳಲ್ಲಿ ಟಿಕೆಟ್ ಕೊಟ್ಟು ಪ್ರಯಾಣ ಮಾಡುವವರಿಗೆ ಸ್ವಲ್ಪ ಅನುಕೂಲವಾಗಬಹುದು.

ರಾಜ್ಯ ಸರ್ಕಾರ ಈಗಾಗಲೇ ರಾಜ್ಯಕ್ಕೆ ಸಾವಿರ ಖರೀದಿ ಮಾಡಲು ನಿರ್ಧರಿಸಿದ್ದು ನೂರು ಬಸ್ಸುಗಳು ಆಗಲೇ ರೋಡಿಗೆ ಇಳಿದಿವೆ. ಹೀಗಾಗಿ ಪಿಂಕ್ ಪಾಸ್ ಮಹಿಳೆಯರಿಗಾಗಿ ಸರ್ಕಾರ ಮೀಸಲಿಟ್ಟಿದ್ದು, ಇದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲಿದೆ.

Big Update on Shakti Yojana, Pink Buses For Women’s

Follow us On

FaceBook Google News

Big Update on Shakti Yojana, Pink Buses For Women's