ನಾಟಿಕೋಳಿ ಸಾಕಾಣಿಕೆ ತರಬೇತಿ ಜೊತೆಗೆ ಪ್ರತಿ ದಿನ ₹1,000 ರೂಪಾಯಿ ಗಳಿಸಿ

ಈ ರೀತಿ ಕೋಳಿ ಸಾಕಾಣಿಕೆ ಮಾಡಿದರೆ ಪ್ರತಿ ತಿಂಗಳು ಗಳಿಸಬಹುದು ಲಕ್ಷಾಂತರ ಆದಾಯ!

Bengaluru, Karnataka, India
Edited By: Satish Raj Goravigere

ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರು (farmers) ತಮ್ಮ ಜಮೀನಿನಲ್ಲಿ ಬೆಳೆಯುವುದರ ಜೊತೆಗೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮೊದಲಾದ ಉಪಕಸುಬುಗಳನ್ನು ಕೂಡ ಮಾಡುತ್ತಾರೆ. ವಾರ್ಷಿಕವಾಗಿ ಬೆಳೆಯನ್ನ ಮೆಚ್ಚಿಕೊಂಡಿರುವ ರೈತರು ಈ ರೀತಿ ಇತರ ಉದ್ಯಮವನ್ನು ಕೂಡ ಮಾಡಿ ಪ್ರತಿ ದಿನ ಹಣ ಸಂಪಾದನೆ ಮಾಡುತ್ತಾರೆ.

ಆದರೆ ನೀವು ಈ ರೀತಿ ಕೋಳಿ ಸಾಕಾಣಿಕೆಯಂತಹ ಉದ್ಯಮ ಮಾಡಲು ಬಯಸಿದರೆ ಸಾಂಪ್ರದಾಯಿಕ ಪದ್ಧತಿಗಿಂತ ಸ್ವಲ್ಪ ವಿಭಿನ್ನವಾಗಿ ಕಮರ್ಷಿಯಲ್ ಆಗಿ ಸಾಕಾಣಿಕೆ ಮಾಡಲು ಪ್ರಯತ್ನಿಸಿದರೆ ಹೆಚ್ಚು ಲಾಭ ಪಡೆಯಬಹುದು. ಇದಕ್ಕಾಗಿ ಪ್ರತ್ಯೇಕ ತರಬೇತಿ ಪಡೆದುಕೊಳ್ಳುವುದು ಬಹಳ ಮುಖ್ಯ.

Poultry Farming

ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಬಿಗ್ ಅಪ್ಡೇಟ್! ಮತ್ತೊಂದು ಹೊಸ ಸೇವೆ

ಯಾವ ರೀತಿ ಕೋಳಿ ಸಾಕಾಣಿಕೆ ಒಳ್ಳೆಯದು? (Idea of poultry farming)

ಇಂದು ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಕೋಳಿ ಫಾರ್ಮ್ (poultry)ಗಳನ್ನು ಮಾಡಿ ತಿನ್ನು ಮಾಡುವವರು ಇದ್ದಾರೆ ಇದಕ್ಕಾಗಿ ಫಾರಂ ಕೋಳಿ, ಬಾಯ್ಲರ್ ಕೋಳಿಗಳನ್ನು ಬಳಕೆ ಮಾಡಲಾಗುತ್ತದೆ ನೀವು ಹೆಚ್ಚು ಲಾಭ ಪಡೆಯಬಹುದು ಎನ್ನುವ ವಿಚಾರ ನಿಮಗೆ ಗೊತ್ತಾ? ಇದಕ್ಕೆ ಸರ್ಕಾರದಿಂದ ಸಬ್ಸಿಡಿ ಸಿಗಲಿದೆ ಎನ್ನುವುದು ನಿಮಗೆ ಗೊತ್ತಾ? ಹಾಗಾದ್ರೆ ಬನ್ನಿ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.

ನಾಟಿ ಕೋಳಿ ಸಾಕಾಣಿಕೆ ಮಾಡಿ ಕೈ ತುಂಬಾ ಸಂಪಾದನೆ ಮಾಡುವ ಈ ಸಾಧಕ ಎಲ್ಲರಿಗೂ ಮಾದರಿ!

ಅವಿನಾಶ್ (Avinash) ಎನ್ನುವ ರೈತ ಶಿವಮೊಗ್ಗ ಜಿಲ್ಲೆಯ ಭಾಗದಲ್ಲಿ ಮಲ್ನಾಡ್ ನಾಟಿ ಕೋಳಿ ತಳಿ ಸಾಕಾಣಿಕೆ ಮಾಡಿ, ಲಕ್ಷಾಂತರ ರೂಪಾಯಿ ಆದಾಯ ಗಳಿಸುವುದು ಮಾತ್ರವಲ್ಲದೆ ಸಾಕಾಣಿಕಾ ತರಬೇತಿ (training for poultry farming) ಯನ್ನು ನೀಡಿ ಕೋಳಿ ಸಾಕಾಣಿಕೆಯಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.

ಡಿಜಿಟಲ್ ಮಾಧ್ಯಮ ಪ್ರಾರಂಭಕ್ಕೆ ಸರ್ಕಾರದಿಂದಲೇ ಸಿಗುತ್ತೆ 5 ಲಕ್ಷ; ಅರ್ಜಿ ಸಲ್ಲಿಸಿ

Nati Koli Sakanikeಕೋಳಿ ಸಾಕಾಣಿಕೆಗೆ ಬಗ್ಗೆ ಅವಿನಾಶ್ ಹೇಳುವುದೇನು?

ಅವಿನಾಶ್ ಅವರು ಫಾರಂ ಕೋಳಿ ಸಾಕಾಣಿಕೆ ಮಾಡುವುದಕ್ಕಿಂತಲೂ ನಾಟಿ ಕೋಳಿ ಸಾಕಾಣಿಕೆ ಮಾಡಿದರೆ ಖರ್ಚು ಕಡಿಮೆ, ರಿಸ್ಕ್ ಕಡಿಮೆ, ಸುಲಭವಾಗಿ ಸಾಕಬಹುದು ಎಂದು ಹೇಳುತ್ತಾರೆ. ಅವರ ಪ್ರಕಾರ ಕೇವಲ ಐವತ್ತು ಸಾವಿರ ರೂಪಾಯಿಗಳ ಬಂಡವಾಳ (investment) ದಲ್ಲಿ ನಾಟಿ ಕೋಳಿ ಫಾರ್ಮಿಂಗ್ ಆರಂಭಿಸಬಹುದು. ರೈತರು ಐದರಿಂದ ಆರು ತಿಂಗಳು ಈ ಕೋಳಿಗಳನ್ನು ಸರಿಯಾಗಿ ನೋಡಿಕೊಂಡರೆ ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಇನ್ನಷ್ಟು ಕೋಳಿಗಳನ್ನು ಫಾರ್ಮ್ ಗಳಲ್ಲಿ ಬೆಳೆಸಬಹುದು.

ಗೃಹಲಕ್ಷ್ಮಿ 6ನೇ ಕಂತಿನ ಹಣ ಇನ್ನೂ ಬಂದಿಲ್ವಾ? ಯಾಕಿಷ್ಟು ತಡ, ಕಾರಣ ಇಲ್ಲಿದೆ

ಅವರು ಹೇಳುವ ಪ್ರಕಾರ, ನಾಟಿ ಕೋಳಿ ಸಾಕಾಣಿಕೆಗೆ ಹೆಚ್ಚಿನ ಖರ್ಚು ಇಲ್ಲ. ಯಾಕೆಂದರೆ ಫಾರ್ಮ್ ಕೋಳಿಯಂತೆ ನಾಟಿ ಕೋಳಿಗಳಿಗೆ ಪ್ರತ್ಯೇಕ ಫೀಡ್ (Feed) ನೀಡಬೇಕಾಗಿಲ್ಲ. ಅವು ಮನೆಯ ಸುತ್ತ ಇರುವ ತಿಪ್ಪೆ ಕಸ, ಹಾಗೂ ಇತರ ವೇಸ್ಟ್ ಗಳನ್ನು ತಿಂದು ಜೀವಿಸಬಲ್ಲವು.

6 ರಿಂದ 8 ತಿಂಗಳುಗಳ ಕಾಲ ನಾಟಿ ಕೋಳಿ ಸಾಕಾಣಿಕೆ ಮಾಡಿ ಅವು ಮೊಟ್ಟೆ ಇಟ್ಟ ನಂತರ ಮೊಟ್ಟೆಯನ್ನು ಮಾರಾಟ ಮಾಡಿ ದಿನಕ್ಕೆ 500 ರಿಂದ 1000 ರೂಪಾಯಿಗಳನ್ನು ಸಂಪಾದನೆ ಮಾಡಬಹುದು. ಹಾಗೂ ಕೋಳಿಗಳನ್ನು 8 ತಿಂಗಳ ನಂತರ ಮಾರಾಟ ಮಾಡಿದರೆ ಅವು ಇಡುವ ಮೊಟ್ಟೆಯಿಂದಲೇ ಫಾರಂ ಆರಂಭಿಸುವುದಕ್ಕೆ ಹಾಕಿರುವ ಬಂಡವಾಳವನ್ನು ಹಿಂಪಡೆಯಬಹುದು. ನಂತರ ಕೋಳಿ ಮಾರಾಟ ಮಾಡಿ ಇನ್ನಷ್ಟು ಹಣ ಸಂಪಾದನೆ ಮಾಡಬಹುದು.

ನಾಟಿ ಕೋಳಿ ಸಾಕಾಣಿಕೆಗೆ ಪ್ರತ್ಯೇಕ ಜನರ ಅಗತ್ಯವಿಲ್ಲ, ಮನೆಯಲ್ಲಿ ಇರುವವರೆ ನೋಡಿಕೊಳ್ಳಬಹುದು. ಆರಂಭದಲ್ಲಿ ಒಂದು ಕೋಳಿ ಫಾರಂ ಆರಂಭಿಸಿದ್ದ ಅವಿನಾಶ್ ರವರು ಇಂದು ನಾಲ್ಕರಿಂದ ಐದು ಕೋಳಿ ಫಾರಂ ತೆರೆದಿದ್ದಾರೆ. ಹಾಗೂ ಪ್ರತಿ ತಿಂಗಳ ಲಕ್ಷಾಂತರ ಆದಾಯ ಗಳಿಸುತ್ತಾರೆ. ನಿಮಗೂ ಅನಾಶ ಅವರಂತೆ ನಾಟಿ ಕೋಳಿ ಸಾಕಾಣಿಕೆ ಮಾಡಿ ಉತ್ತಮ ಆದಾಯ ಗಳಿಸಬೇಕು ಎಂದರೆ ಅವರ ಬಳಿಗೆ ಉಚಿತವಾಗಿ ತರಬೇತಿಯನ್ನು ಪಡೆಯಬಹುದು.

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕ್ಯಾನ್ಸಲ್! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಡೆಡ್ ಲೈನ್

ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ; (contact for more details)

ಅವಿನಾಶ್ (ಮಲ್ನಾಡ್ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರ)
ಕೊನಂದೂರು, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ.
ಫೋನ್ ನಂಬರ್; 9036796744

Earn 1,000 per day with Nati Koli poultry farming training