Kannada News Karnataka News

ಡಿಜಿಟಲ್ ಮಾಧ್ಯಮ ಪ್ರಾರಂಭಕ್ಕೆ ಸರ್ಕಾರದಿಂದಲೇ ಸಿಗುತ್ತೆ 5 ಲಕ್ಷ; ಅರ್ಜಿ ಸಲ್ಲಿಸಿ

You will get a loan of up to 2 lakhs to start your own business

Story Highlights

ನೀವು ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರಾರಂಭಿಸುವುದಕ್ಕೆ ಸರ್ಕಾರದಿಂದಲೇ ಸಿಗುತ್ತೆ 5 ಲಕ್ಷ ರೂ

ಕೋವಿಡ್ ನಂತರದ ದಿನದಲ್ಲಿ ಯುವಕರ ಆಲೋಚನಾ ಕ್ರಮವೇ ಬದಲಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗಾಗಿ ಪ್ರತಿಯೊಬ್ಬರು 9 to 5 job ಬಿಟ್ಟು ಸ್ವಂತ ಉದ್ಯೋಗ (own business) ಮಾಡಬೇಕು, ತಮ್ಮದೇ ಊರಿನಲ್ಲಿ ತಂದೆ ತಾಯಿಗಳ ಜೊತೆ ಇರಬೇಕು ಎಂದು ಬಯಸುತ್ತಾರೆ.

ಆದರೆ ಕೆಲವೊಬ್ಬರಿಗೆ ಆರ್ಥಿಕ ಸಮಸ್ಯೆಯಿಂದ ಇದು ಸಾಧ್ಯವಾಗುವುದಿಲ್ಲ. ಬ್ಯಾಂಕ್ಗಳು ಸಹ ಸಾಲ (Bank Loan) ನೀಡಲು ಹಿಂಜರಿಯುತ್ತವೆ. ಇದರಿಂದ ಪ್ರತಿಭೆ ಇದ್ದರೂ ನಿರುದ್ಯೋಗಿ (unemployment) ಗಳಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಇದು ಸರ್ಕಾರಗಳ ಗಮನಕ್ಕೂ ಬಂದಿದೆ. ಹಾಗಾಗಿಯೇ ಸ್ವಂತ ಉದ್ಯೋಗ ಮಾಡುವವರಿಗೆ ಆರ್ಥಿಕ ಸಹಾಯದ ರೂಪದಲ್ಲಿ ಸಾಲ (loan) ಹಾಗೂ ಸಹಾಯಧನ ನೀಡುತ್ತಿದೆ. ಸ್ವ-ಉದ್ಯೋಗವನ್ನು ಪ್ರೋತ್ಸಾಹಿಸುತ್ತಿದೆ.

ಗೃಹಲಕ್ಷ್ಮಿ 6ನೇ ಕಂತಿನ ಹಣ ಇನ್ನೂ ಬಂದಿಲ್ವಾ? ಯಾಕಿಷ್ಟು ತಡ, ಕಾರಣ ಇಲ್ಲಿದೆ

ಇದೀಗ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಡಿಜಿಟಲ್ ಮಾಧ್ಯಮ (digital media) ಸಂಸ್ಥೆ ಸ್ಥಾಪಿಸುವವರಿಗೆ 5 ಲಕ್ಷ ರೂ.ಗಳ ವರೆಗೆ ಸಹಾಯಧನ ನೀಡಲಾಗುತ್ತದೆ. ಹಾಗಾದರೆ ಯಾರು ಯಾರು ಅರ್ಜಿ ಸಲ್ಲಿಸಬಹುದು, ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ವಿವರ ಈಗ ತಿಳಿಯೋಣ.

ಎಲೆಕ್ಟ್ರಾನಿಕ್ಸ್ ಹಾಗೂ ಡಿಜಿಟಲ್ ಮಾಧ್ಯಮ ಸಂಸ್ಥೆ ಸ್ಥಾಪನೆ (electronics and digital media) ಮಾಡಲು ಶೇ.7೦ ರಷ್ಟು ಅಥವಾ 5 ಲಕ್ಷ ರೂ.ಗಳ ವರೆಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ.

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕ್ಯಾನ್ಸಲ್! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಡೆಡ್ ಲೈನ್

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು: (eligibility)

*ಅರ್ಜಿದಾರರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು

*ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1೦ ಲಕ್ಷ ರೂ. ಮೀರಿರಬಾರದು.

*ಅರ್ಜಿದಾರರ ವಯಸ್ಸು 3೦ ರಿಂದ 5೦ ವರ್ಷದ ಒಳಗೆ ಇರಬೇಕು.

*ಅರ್ಜಿದಾರರು ಯಾವುದಾದರೂ ಪದವಿಯ ಜೊತೆ 1೦ ವರ್ಷಗಳ ಸೇವಾನುಭವ ಹೊಂದಿರಬೇಕು ( ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ ಮಾಧ್ಯಮ ಇಲ್ಲವೇ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿರಬೇಕು).

*ಅರ್ಜಿದಾರರು ಈ ಹಿಂದೆ ಯಾವುದೇ ನಿಗಮ ಮಂಡಳಿಗಳಿಂದ ಸೌಲಭ್ಯ ಪಡೆದುಕೊಂಡಿರಬಾರದು.

*ಅರ್ಜಿದಾರರು ಕಡ್ಡಾಯವಾಗಿ ಯುಎಎಂನಲ್ಲಿ ನೋಂದಣಿ ಆಗಿರಬೇಕು.

*ಅರ್ಜಿದಾರರ ಕುಟುಂಬದ ಸದಸ್ಯರು ಸರ್ಕಾರಿ/ ಅರೆ ಸರ್ಕಾರಿ/ ನಿಗಮ ಮಂಡಳಿ ಸೇರಿದಂತೆ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಯಲ್ಲಿ ಇರಬಾರದು.

*ಅರ್ಜಿದಾರರು ತಮ್ಮ ಪ್ರಾಜೆಕ್ಟ್ ರಿಪೋರ್ಟ್ (project report) ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಇವರಿಗೆ ಸಲ್ಲಿಸಬೇಕು

*ಘಟಕ ಸ್ಥಾಪಿಸಿದ ನಂತರ ಸಂಸ್ಥೆಯಲ್ಲಿ ಕಡ್ಡಾಯವಾಗಿ ಒಬ್ಬರಾದರೂ ಪರಿಶಿಷ್ಟ ವರ್ಗ ಹಾಗೂ ಪಂಗಡದ ಯುವಕರಿಗೆ ಉದ್ಯೋಗ ನೀಡಬೇಕು.

ಡಿಜಿಟಲ್ ಉದ್ಯಮ ಸ್ಥಾಪನೆ ಮಾಡಬಯಸುವವರು ಪರಿಶಿಷ್ಟ ಜಾತಿಯ ಒಬ್ಬ ನಿರುದ್ಯೋಗಿಗೆ ಕನಿಷ್ಟ 7 ತಿಂಗಳ ಕಾಲ ತರಬೇತಿ (training) ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳಿಗೆ ನಿರಂತರ ಪ್ರಚಾರ ನೀಡಬೇಕು.

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ

Loanಅರ್ಜಿ ಸಲ್ಲಿಸುವ ಪ್ರಕ್ರಿಯೆ (applying process)

ಅರ್ಜಿದಾರರು ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು. (https://swdservices.karnataka.gov.in/)

ಆರಂಭ ಮತ್ತು ಕೊನೆಯ ದಿನಾಂಕ!

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 9 ಫೆ.2024, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಫೆಬ್ರವರಿ 2024 (last date to apply February 26/2024).

ನಿಮ್ಮ ಊರಲ್ಲೇ ಕರ್ನಾಟಕ ಒನ್ ಫ್ರಾಂಚೈಸಿ ಪ್ರಾರಂಭಿಸಲು ಅವಕಾಶ! ಅರ್ಜಿ ಸಲ್ಲಿಸಿ

ಎಲ್ಲೆಲ್ಲಿ ಸಂಸ್ಥೆ ಸ್ಥಾಪನೆ ಮಾಡಬಹುದು:

ಬೆಂಗಳೂರು ನಗರ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು, ಕಲಬುರಗಿ, ಬಳ್ಳಾರಿ, ದಾವಣಗೆರೆ, ತುಮಕೂರು, ವಿಜಯಪುರ, ಶಿವಮೊಗ್ಗ ಜಿಲ್ಲೆಯಗಳಲ್ಲಿ ಸ್ಥಾಪನೆ ಮಾಡಬಹುದಾಗಿದೆ.

Get 5 lakhs from government to start digital media