ರೇಷನ್ ಕಾರ್ಡ್ (Ration Card) ಎನ್ನುವುದು ಈಗ ಆಧಾರ್ ಕಾರ್ಡ್ (Aadhaar Card) ಅಷ್ಟೇ ಪ್ರಮುಖ ದಾಖಲೆ ಆಗಿರುವುದರಿಂದ ರಾಜ್ಯದಲ್ಲಿ ಪ್ರತಿಯೊಬ್ಬರು ಕೂಡ ರೇಷನ್ ಕಾರ್ಡ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಅದರಲ್ಲೂ ಬಿಪಿಎಲ್ ಮತ್ತು ಎಎವೈ ಕಾರ್ಡಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಯಾವುದೇ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳಲು ಈ ಎರಡು ಕಾರ್ಡ್ ಗಳು ಬಹಳ ಮುಖ್ಯವಾಗಿರುತ್ತದೆ.

State government to cancel 20 lakh BPL card

ನಿಮಗೆಲ್ಲಾ ತಿಳಿದಿರುವಂತೆ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ DBT ಆಗಬೇಕು ಅಂದ್ರೆ ಬಹಳ ಮುಖ್ಯವಾಗಿರುವಂತಹ ರೇಷನ್ ಕಾರ್ಡ್ ದಾಖಲೆಯನ್ನು ನೀಡಲೇಬೇಕು.

ಆದರೆ ಇದೀಗ ಆಹಾರ ಇಲಾಖೆ ರೇಷನ್ ಕಾರ್ಡ್ ವಿತರಣೆ (ration card distribution) ಮತ್ತು ರೇಷನ್ ಕಾರ್ಡ್ ರದ್ದುಪಡಿಗೆ (ration card cancellation) ಸಂಬಂಧಪಟ್ಟಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ನಿಮ್ಮ ಊರಲ್ಲೇ ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಿ

ರೇಷನ್ ಕಾರ್ಡ್ ಕ್ಯಾನ್ಸಲೇಷನ್!

ಬಿಪಿಎಲ್ ಮತ್ತು ಎ ಎ ವೈ ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ನೀಡಲಾಗುತ್ತದೆ. ಇದರಿಂದ ಸರ್ಕಾರದ ಯೋಜನೆಯ ಪ್ರಯೋಜನಗಳು ಹಾಗೂ ಉಚಿತ ಪಡಿತರ ಪಡೆದುಕೊಳ್ಳಲು ಸಾಧ್ಯವಿದೆ.

ಆದರೆ ಇಂದು ಅದೇಷ್ಟೋ ಅರ್ಹ ಕುಟುಂಬಗಳು ಕೂಡ ಬಿಪಿಎಲ್ ಪಡಿತರ ಕಾರ್ಡ್ ಪಡೆದುಕೊಂಡಿರುವುದು ನಿಜಕ್ಕೂ ವಿಷಾದನೀಯ! ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಇರುವವರಿಗೆ ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡಲು ತೀರ್ಮಾನಿಸಿದ್ದು ಅನರ್ಹರ ರೇಷನ್ ಕಾರ್ಡ್ ರದ್ದುಪಡಿ ಮಾಡುತ್ತಿದೆ.

ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿಗೆ ತಂದ ಸರ್ಕಾರ; ಸಿಗಲಿದೆ ಇನ್ನಷ್ಟು ಬೆನಿಫಿಟ್

BPL Ration Cardಈಗಾಗಲೆ ಲಕ್ಷಾಂತರ ಜನರ ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗಿದೆ. ಪ್ರತಿ ತಿಂಗಳು ರದ್ದುಪಡಿಗೊಂಡಿರುವ ರೇಷನ್ ಕಾರ್ಡ್ ಲಿಸ್ಟ್ ಅನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. https://ahara.kar.nic.in/ ಈ ವೆಬ್ ಸೈಟ್ ನಲ್ಲಿ ನೀವು ಈ ಸರ್ವಿಸ್ ವಿಭಾಗದಲ್ಲಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆ 6ನೇ ಮತ್ತು 7ನೇ ಕಂತಿನ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ!

ಈ ಕೆಲಸ ಮಾಡದೆ ಇದ್ದರೂ ರದ್ದಾಗುತ್ತೇ ರೇಷನ್ ಕಾರ್ಡ್!

ನೀವು ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು, ನಿಮ್ಮ ಖಾತೆಗೆ ಸರ್ಕಾರದ ಹಣ ಡಿ ಬಿ ಟಿ (Money Deposit) ಆಗಲು ಪ್ರಮುಖವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ ಖಾತೆ ಎಲ್ಲವೂ ಲಿಂಕ್ ಆಗಿರಬೇಕು. ಯಾರು ಸರ್ಕಾರ ತಿಳಿಸಿರುವಂತೆ EKYC ಪ್ರಕ್ರಿಯೆ ಪೂರ್ಣಗೊಳಿಸಿಕೊಂಡಿರುವುದಿಲ್ವೋ ಅಂತವರ ಖಾತೆಗೆ ಯಾವುದೇ ಕಾರಣಕ್ಕೂ ಹಣ ಜಮಾ ಆಗುವುದಿಲ್ಲ. ಅಷ್ಟೇ ಅಲ್ಲದೆ ಅಂತಹ ರೇಷನ್ ಕಾರ್ಡ್ ಅನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ.

ಹೌದು, EKYC ಆಗದೆ ಇರುವ ರೇಷನ್ ಕಾರ್ಡ್ ತಾತ್ಕಾಲಿಕವಾಗಿ ಸ್ಥಿತಿಗೊಳ್ಳಲಿದೆ. ಯಾವಾಗ ಕೆವೈಸಿ ಮಾಡಿಸಿಕೊಳ್ಳುತ್ತೀರೋ ಆಗ ಮತ್ತೆ ತಡೆ ಹಿಡಿಯಲಾದ ರೇಷನ್ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ.

ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಭರ್ಜರಿ ಸುದ್ದಿ! ಹಕ್ಕು ಪತ್ರ ವಿತರಣೆ

ಅಂದರೆ ರೇಷನ್ ಕಾರ್ಡ್ ಬಳಸಿ ನೀವು ಉಚಿತ ಪಡಿತರ ಅಥವಾ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇನ್ನು ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಫೆಬ್ರವರಿ 29 2024ರ ವರೆಗೆ ಗಡುಗು ವಿಸ್ತರಣೆ ಮಾಡಲಾಗಿದ್ದು, ಈ ದಿನಾಂಕದೊಳಗೆ ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಪರ್ಮನೆಂಟ್ ಆಗಿ ರದ್ದಾಗಬಹುದು. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು (Bank Account) ಚೆಕ್ ಮಾಡಿ ಕೆವೈಸಿ ಆಗದೆ ಇದ್ರೆ ತಕ್ಷಣ ಬ್ಯಾಂಕಿಗೆ ಹೋಗಿ ಈ ಕೆಲಸ ಮಾಡಿಕೊಳ್ಳಿ.

New applications for ration card of such people are rejected