ನಿಮ್ಮ ಊರಲ್ಲೇ ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಿ
ಹೊಸದಾಗಿ ಗ್ರಾಮವನ್ನು ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ ಫ್ರಾಂಚೈಸಿ (grama one franchise) ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರ (Central government) ಅಥವಾ ರಾಜ್ಯ ಸರ್ಕಾರ ಜನರ ಹಿತ ದೃಷ್ಟಿಯಿಂದ ಘೋಷಣೆ ಮಾಡುವ ಯೋಜನೆಗಳು ಗ್ರಾಹಕರಿಗೆ ತಲುಪಬೇಕು ಅಂದರೆ ಅದಕ್ಕೆ ಮುಖ್ಯವಾಗಿ ಸೇವಾ ಕೇಂದ್ರದ ಪಾತ್ರ ಬಹಳ ದೊಡ್ಡದು ಎಂದೇ ಹೇಳಬಹುದು. ಯಾಕಂದ್ರೆ ಇದೇ ಸೇವಾ ಕೇಂದ್ರಗಳ ಮೂಲಕ ಗ್ರಾಹಕರಿಗೆ ಅಗತ್ಯ ಇರುವ ಸೇವೆಗಳನ್ನು ಒದಗಿಸಿಕೊಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಆರಂಭವಾದ ಬಳಿಕ ಸೇವ ಕೇಂದ್ರಗಳಲ್ಲಿ ಸದಾ ಜನರು ತುಂಬಿ ತುಳುಕುತ್ತಿದ್ದಾರೆ. ಯಾವುದೇ ರೀತಿಯ ಅರ್ಜಿ ಸಲ್ಲಿಕೆ ಮಾಡುವುದಿದ್ದರೂ ಕೂಡ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮೊದಲಾದ ಸೇವಾ ಕೇಂದ್ರಗಳಿಗೆ ಹೋಗಬೇಕು.
ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿಗೆ ತಂದ ಸರ್ಕಾರ; ಸಿಗಲಿದೆ ಇನ್ನಷ್ಟು ಬೆನಿಫಿಟ್
ಇದೀಗ ರಾಜ್ಯದ ಕೆಲವು ಭಾಗಗಳಲ್ಲಿ ಹೊಸದಾಗಿ ಗ್ರಾಮವನ್ನು ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ ಫ್ರಾಂಚೈಸಿ (grama one franchise) ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ ಖಾತೆಯ ವಿವರ
ಫ್ರಾಂಚೈಸಿ ಆರಂಭಿಸಲು ಸ್ಥಳ ಅವಕಾಶ ಮತ್ತು ಅಗತ್ಯ ಇರುವ ಉಪಕರಣಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 15 2024 (last date to apply for Grama one franchise is February 15th 2024) . ಇನ್ನು ಕೇವಲ ನಾಲ್ಕು ದಿನಗಳ ಅವಕಾಶ ಇದ್ದು ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಿ.
ಇಂತಹ ಕಾರ್ಮಿಕರ ಮಕ್ಕಳಿಗೆ ಸಿಗಲಿದೆ ಸರ್ಕಾರದಿಂದ 60,000 ಸ್ಕಾಲರ್ಶಿಪ್; ಅಪ್ಲೈ ಮಾಡಿ
ಎಲ್ಲಿ ಅರ್ಜಿ ಸಲ್ಲಿಸಬೇಕು?
https://kal-mys.gramaone.karnataka.gov.in/ ಸರ್ಕಾರದ ಈ ಅಧಿಕಾರದ ವೆಬ್ಸೈಟ್ಗೆ ಭೇಟಿ ನೀಡಿ. ಫ್ರಾಂಚೈಸಿ ಆರಂಭಿಸಲು ಬೇಕಾಗಿರುವ ಎಲ್ಲಾ ದಾಖಲೆ ಮತ್ತು ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆ 6ನೇ ಮತ್ತು 7ನೇ ಕಂತಿನ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ!
ಗ್ರಾಮ ಒನ್ ಸೇವಾ ಕೇಂದ್ರ ಆರಂಭಿಸಲು ಎಲ್ಲಿ ಅವಕಾಶವಿದೆ?
ಮಡಿಕೇರಿಯ ಹೊಸ್ಕೇರಿ ಹಾಕತ್ತೂರು ಮತ್ತು ಕರಿಕೆ
ನಿಟ್ಟೂರು
ಬಲ್ಯಮಂಡೂರು
ಕೆ.ಬಡಗ
ಬಿ.ಶೆಟ್ಟಿಗೇರಿ
ಕಿರುಗೂರು
ಪೊನ್ನಂಪೇಟೆಯ ನಾಲ್ಕೇರಿ, ಬೆಟ್ಟದಳ್ಳಿ
ಸೋಮವಾರಪೇಟೆಯ ಗರ್ವಾಲೆ ಕಾಕೋಟು ಪರಂಬು
ಬೇಟೋಳಿ
ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಭರ್ಜರಿ ಸುದ್ದಿ! ಹಕ್ಕು ಪತ್ರ ವಿತರಣೆ
ವಿರಾಜಪೇಟೆಯ ಅಮ್ಮತ್ತಿ ತಾಲೂಕಿನ 14 ಗ್ರಾಮ ಪಂಚಾಯತ್ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಒನ್ ಫ್ರಾಂಚೈಸಿ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ದುಡಿಮೆಯನ್ನು ಕೂಡ ಭದ್ರಪಡಿಸಿಕೊಳ್ಳಿ.
Application invitation to open a Grama One Kendra franchise