ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿಗೆ ತಂದ ಸರ್ಕಾರ; ಸಿಗಲಿದೆ ಇನ್ನಷ್ಟು ಬೆನಿಫಿಟ್
ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ (Shakti scheme) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಜಾರಿಗೆ ತಂದಿದೆ
ರಾಜ್ಯದಲ್ಲಿ ವಾಸಸುವ ಪ್ರತಿಯೊಂದು ಮಹಿಳೆಯು ಕೂಡ ಸ್ವಾವಲಂಬನೆಯಿಂದ (women’s independence life) ಜೀವನ ನಡೆಸಬೇಕು ಎನ್ನುವುದು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ (Shakti scheme) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಜಾರಿಗೆ ತಂದಿದೆ.
ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ರಾಜ್ಯಾದ್ಯಂತ ಮಹಿಳೆಯರು ಬಸ್ಸಲ್ಲಿ ಪ್ರಯಾಣ ಮಾಡಬಹುದಾಗಿದ್ದರೆ, ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ರೂ. ಪ್ರತಿ ತಿಂಗಳು ಉಚಿತವಾಗಿ ಪಡೆಯಬಹುದಾಗಿದೆ.
ಇಂತಹ ಕಾರ್ಮಿಕರ ಮಕ್ಕಳಿಗೆ ಸಿಗಲಿದೆ ಸರ್ಕಾರದಿಂದ 60,000 ಸ್ಕಾಲರ್ಶಿಪ್; ಅಪ್ಲೈ ಮಾಡಿ
ಸ್ವಾವಲಂಬಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರದ ಮತ್ತೊಂದು ಯೋಜನೆ!
ಇಂದು ಮಹಿಳೆ ಯಾವ ಕ್ಷೇತ್ರದಲ್ಲಿ ಹಿಂದೆ ಬಿದ್ದಿಲ್ಲ. ಪುರುಷರಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಎಷ್ಟೋ ಮಹಿಳೆಯರು ತಮ್ಮ ಸ್ವಾವಲಂಬನೆಯ ಜೀವನ ನಡೆಸಲು ತಮ್ಮ ಬದುಕನ್ನ ಕಟ್ಟಿಕೊಳ್ಳಲು ಡ್ರೈವರ್ ಕೆಲಸ (driving) ವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟ್ಯಾಕ್ಸಿ ಆಟೋ ಓಡಿಸುವುದು ಮಾತ್ರವಲ್ಲದೆ ಬಸ್ ಚಲಾವಣೆಯನ್ನು ಕೂಡ ಮಾಡುತ್ತಾರೆ. ಇದೀಗ ಮಹಿಳೆಯರಿಗಾಗಿ ವಾಹನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸುವ ಬಗ್ಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ.
ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಭರ್ಜರಿ ಸುದ್ದಿ! ಹಕ್ಕು ಪತ್ರ ವಿತರಣೆ
ಮಹಿಳೆಯರಿಗಾಗಿ ವಾಹನ ತರಬೇತಿ ಕೇಂದ್ರ! (Vehicle training center for women)
ರಾಮನಗರದ ಬಿಡದಿ ಬಳಿ ಮಹಿಳೆಯರಿಗಾಗಿ ವಾಹನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಗೃಹಲಕ್ಷ್ಮಿ ಯೋಜನೆ 6ನೇ ಮತ್ತು 7ನೇ ಕಂತಿನ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ!
ಸರ್ಕಾರದೊಂದಿಗೆ ಕೈಜೋಡಿಸಿದ ಇತರ ಕಂಪನಿಗಳು!
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (minister ramalinga Reddy) ಅವರು ಮಹಿಳೆಯರಿಗಾಗಿ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕ ನಂತರ ಬೆಂಗಳೂರಿನ ರಾಜಾಜಿನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ AWAKE ಕಂಪನಿ ಕೂಡ ಸಾರಿಗೆ ಇಲಾಖೆಯೊಂದಿಗೆ ಕೈಜೋಡಿಸಿದ್ದು, 10.50 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಬಿಡದಿಯಲ್ಲಿ ಮಹಿಳೆಯರಿಗಾಗಿ ಚಾಲನ ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ.
ಬಿಡದಿ (Bidadi) ಯಲ್ಲಿ ಆರಂಭವಾಗಲಿರುವ ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರದ ಸಹಾಯದಿಂದ ಸಾಕಷ್ಟು ಮಹಿಳೆಯರು ಚಾಲನಾ ತರಬೇತಿ ಪಡೆದುಕೊಂಡು ಸ್ವಂತ ವಾಹನ ಚಲಾಯಿಸುವುದಕ್ಕೆ ಅಥವಾ ಬಾಡಿಗೆ ವಾಹನ ಚಲಾಯಿಸಿ ತಮ್ಮ ಆರ್ಥಿಕ ಬದುಕನ್ನು ನಿರ್ಮಿಸಿಕೊಳ್ಳುವುದಕ್ಕೆ ಸಹಾಯಕವಾಗಲಿದೆ. ಸರ್ಕಾರ ಮಹಿಳೆಯರಿಗಾಗಿ ಮೀಸಲಿಟ್ಟಿರುವ ಮತ್ತೊಂದು ದೊಡ್ಡ ಬಜೆಟ್ ನ ಯೋಜನೆ ಇದಾಗಿದೆ.
Government implemented another scheme for women, get more benefits