ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆ ಸೇರಲು ಈ ಕೆಲಸ ಕಡ್ಡಾಯ!
ಈಗ ನಾವು ಹೇಳುವ ಕೆಲಸವನ್ನು ನೀವು ಮಾಡಿಕೊಳ್ಳದಿದ್ದರೆ ೬ನೇ ಕಂತಿನ ಹಣ ನಿಮ್ಮ ಖಾತೆಗೆ (Bank Account) ಜಮಾ ಆಗುವುದಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಸ್ಥಿತ್ವಕ್ಕೆ ಬಂದು ಆಗಲೇ ಒಂದು ವರ್ಷ ತುಂಬುತ್ತ ಬಂತು. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದ ಒಳಗೆ ಜಾರಿಗೆ ತಂದಿದೆ.
ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ಶಕ್ತಿ ಯೋಜನೆ, ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ, ಪ್ರತಿ ತಿಂಗಳು ೧೦ ಕೆ.ಜಿ. ಪಡಿತರ ನೀಡುವ ಅನ್ನಭಾಗ್ಯ, ವಿದ್ಯಾಭ್ಯಾಸ ಪೂರೈಸಿ ಮನೆಯಲ್ಲಿಯೇ ಇರುವ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯುವನಿಧಿ, ಇದರ ಜೊತೆ ಮಹಿಳೆಯರಿಗೆ ಪ್ರತಿ ತಿಂಗಳು ೨೦೦೦ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಐದು ಗ್ಯಾರಂಟಿ ಯೋಜನೆಗಳಾಗಿವೆ.
ನಿಮ್ಮ ಖಾತೆಗೂ ಬರ ಪರಿಹಾರ ಹಣ ಬಂತಾ? ಈಗಲೇ ಈ ರೀತಿ ಚೆಕ್ ಮಾಡಿಕೊಳ್ಳಿ
ಈ ಗೃಹ ಲಕ್ಷ್ಮಿ ಯೋಜನೆ ಆರಂಭದಿಂದಲೂ ಒಂದಲ್ಲ ಒಂದು ತೊಂದರೆ ಎದುರಿಸುತ್ತಲೇ ಇದೆ. ಸರ್ಕಾರವು ಆ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತಲೇ ಇದೆ. ಆದರೂ ಇದುವರೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಗೃಹ ಲಕ್ಷ್ಮಿ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ.
ಈ ಮಧ್ಯೆ ಸರ್ಕಾರವು ಗೃಹ ಲಕ್ಷ್ಮಿ ಯೋಜನೆ ಮುಂದುವರಿಸಲು ನಿಯಮವನ್ನು ಜಾರಿ ಮಾಡಿದೆ. ಈಗ ನಾವು ಹೇಳುವ ಕೆಲಸವನ್ನು ನೀವು ಮಾಡಿಕೊಳ್ಳದಿದ್ದರೆ ೬ನೇ ಕಂತಿನ ಹಣ ನಿಮ್ಮ ಖಾತೆಗೆ (Bank Account) ಜಮಾ ಆಗುವುದಿಲ್ಲ. ಹಾಗಾದರೆ ಏನು ಕೆಲಸ ಎಂದು ಈಗ ತಿಳಿದುಕೊಳ್ಳೋಣ.
ಉಚಿತ ವಸತಿ ಯೋಜನೆ! ಮನೆ ಇಲ್ಲದ 36 ಸಾವಿರ ಬಡ ಜನರಿಗೆ ಮನೆ ಹಂಚಿಕೆ
ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ ಜಾರಿ:
ಗೃಹ ಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ನಿಮ್ಮ ಖಾತೆಗೆ ಜಮಾ (Money Deposit) ಆಗಬೇಕು ಎಂದಾದರೆ ನೀವು ಆಧಾರ್ ಇ-ಕೆವೈಸಿ ಮಾಡಿಸಬೇಕಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ ಗೃಹ ಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆ ಪ್ರತಿ ತಿಂಗಳು ಸರ್ಕಾರ ಬಿಡುಗಡೆ ಮಾಡಿದ ತಕ್ಷಣ ಜಮಾ ಆಗಲಿದೆ.
ನಿಷ್ಕ್ರಿಯವಾಗಿರುವ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಖಾತೆ ಸರಿಯಾಗಿ ಇದೆಯೋ ಇಲ್ಲವೋ ಎಂದು ಸ್ಟೇಟಸ್ ಚೆಕ್ ಮಾಡಬೇಕು. ನೀವು ಸರ್ಕಾರ ಹೇಳಿದ್ದ ಎಲ್ಲ ಕೆಲಸಗಳನ್ನು ಮಾಡಿ ಸ್ಟೇಟಸ್ ಚೆಕ್ ಮಾಡುವುದನ್ನು ಮರೆತರೆ ಹಣ ಜಮಾ ಆಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಬ್ಯಾಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಇಂತಹ ಮಹಿಳೆಯರಿಗೆ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬರೋಲ್ಲ! ಬಿಗ್ ಅಪ್ಡೇಟ್
ಗೃಹ ಲಕ್ಷ್ಮಿ ಹಣ ಬೇಕು ಎಂದರೆ ಎನ್ಪಿಸಿಐ ಮಾಡಿಸಿಕೊಳ್ಳಿ:
ಸದ್ಯ ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆ ಹಣ ಪಡೆದುಕೊಳ್ಳಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದೀಗ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳು ಎನ್ಪಿಸಿಐ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಸದ್ಯ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸುವ ಜೊತೆಗೆ ಎನ್ಪಿಸಿಐ ಕೂಡ ಮಾಡಿಸಬೇಕು. ನೀವು ಗೃಹ ಲಕ್ಷ್ಮಿ ಯೋಜನೆಗೆ ಯಾವ ಬ್ಯಾಂಕ್ ಖಾತೆಯ ವಿವರ ನೀಡಿದ್ದೀರೋ ಆ ಬ್ಯಾಂಕ್ಗೆ ತೆರಳಿ ನಿಮ್ಮ ಖಾತೆಯನ್ನು ಎನ್ಪಿಸಿಐ ಮಾಡಿಸಬೇಕು. ನೀವು ಈ ಕೆಲಸ ಮಾಡುವುದರಿಂದ ೬ನೇ ಕಂತಿನಿಂದ ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಜಮಾ ಆಗಲಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸರ್ಕಾರ!
This is mandatory for Gruha Lakshmi Yojana money to add to your bank account