ನಿಮ್ಮ ಖಾತೆಗೂ ಬರ ಪರಿಹಾರ ಹಣ ಬಂತಾ? ಈಗಲೇ ಈ ರೀತಿ ಚೆಕ್ ಮಾಡಿಕೊಳ್ಳಿ
ಮಳೆ ಸರಿಯಾಗಿ ಆಗದ ಕಾರಣ ಬೆಳೆಗಳೆಲ್ಲ ಹೊಲದಲ್ಲೇ ಒಣಗಿ ಹೋಯಿತು. ಇದರಿಂದ ಮಾಡಿದ ಸಾಲ (Loan) ತೀರಿಸಲಾಗದೆ ರೈತರು ಚಿಂತೆಯಲ್ಲಿದ್ದರು
ಕಳೆದ ಬಾರಿ ನಮ್ಮ ರಾಜ್ಯದಲ್ಲಿ ಮಳೆಯ ಪ್ರಮಾಣ ಬಹಳ ಕಡಿಮೆ ಆಗಿತ್ತು. ಇದರಿಂದ ಮಳೆಯನ್ನೇ ನಂಬಿ ಬೆಳೆ ಬೆಳೆಯುತ್ತಿದ್ದ ರೈತರು ಸಂಕಷ್ಟದ ಪರಿಸ್ಥಿತಿಗೆ ತಲುಪಿದ್ದಾರೆ. ಒಳ್ಳೆಯ ಬೆಳೆ ಬೆಳೆಯಬಹುದು ಎನ್ನುವ ಆಶೆಯಿಂದ ಸಾಲ ಸೋಲ (Loan) ಮಾಡಿ ಬೀಜ, ಗೊಬ್ಬರ ಎಲ್ಲವನ್ನು ತಂದು ಹೊಲವನ್ನು ಉತ್ತು ಬಿತ್ತನೆ ಮಾಡಿದ್ದರು.
ಆದರೆ ಮಳೆ ಸರಿಯಾಗಿ ಆಗದ ಕಾರಣ ಬೆಳೆಗಳೆಲ್ಲ ಹೊಲದಲ್ಲೇ ಒಣಗಿ ಹೋಯಿತು. ಇದರಿಂದ ಮಾಡಿದ ಸಾಲ (Loan) ತೀರಿಸಲಾಗದೆ ರೈತರು ಚಿಂತೆಯಲ್ಲಿದ್ದರು. ಇದೀಗ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಿದೆ.
ಉಚಿತ ವಸತಿ ಯೋಜನೆ! ಮನೆ ಇಲ್ಲದ 36 ಸಾವಿರ ಬಡ ಜನರಿಗೆ ಮನೆ ಹಂಚಿಕೆ
ಬರ ಪರಿಹಾರದ ಹಣದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರವು ಬರ ಪರಿಹಾರಕ್ಕಾಗಿ ಯಾವುದೇ ಅನುದಾನ ಬಿಡುಗಡೆ ಮಾಡದೆ ಇದ್ದರೂ ರಾಜ್ಯ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಬೇಕು ಎನ್ನುವ ಉದ್ದೇಶದಿಂದ ಬರ ಪರಿಹಾರ ಧನ ಬಿಡುಗಡೆ ಮಾಡಿದೆ. ೩೩ ಲಕ್ಷ ರೈತರ ಖಾತೆಗಳಿಗೆ ಹಣ ಜಮಾ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬರ ಪರಿಹಾರ ನೀಡುವ ಸಲುವಾಗಿ ೧೮,೧೭೮ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಆದರೆ ಈ ಅನುದಾನ ಇದುವರೆಗೂ ಬಂದಿಲ್ಲ. ಈ ಹಿಂದೆ ಬರ ಪರಿಹಾರಕ್ಕಾಗಿ ೨೦೦೦ ಕೋಟಿ ರೂ. ಬಿಡುಗಡೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.
ಇದರ ಭಾಗವಾಗಿ ಇದೀಗ ೬೨೮ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದನ್ನು ೩೩ ಲಕ್ಷ ರೈತರ ಖಾತೆಗೆಗಳಿಗೆ ಜಮಾ ಮಾಡಲಾಗಿದೆ. ಬರ ಪರಿಹಾರ ಧನ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿದ್ದ ೧.೬ ಲಕ್ಷ ರೈತರ ಖಾತೆ ಸಮಸ್ಯೆಯಿಂದಾಗಿ ಜಮಾ ಮಾಡಲು ಸಾಧ್ಯವಾಗಿಲ್ಲ. ಅವರ ಖಾತೆಗೂ (Bank Account) ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪಿಯುಸಿ ಪಾಸಾಗಿದ್ರೆ ಗ್ರಾಮ ಪಂಚಾಯತಿಯಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಿ
ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ನಿರ್ಧಾರ:
ಬರ ಪರಿಹಾರಕ್ಕಾಗಿ ನೀಡಿದ ಹಣವು ಕೃಷಿ ಚಟುವಟಿಕೆಗಳಿಗೆ ವಿನಿಯೋಗ ಆಗಬೇಕು ಎನ್ನುವ ಸಲುವಾಗಿ ರಾಜ್ಯದ ೨೨೩ ತಾಲೂಕುಗಳಲ್ಲಿ ಬರದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇಂತಹ ಮಹಿಳೆಯರಿಗೆ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬರೋಲ್ಲ! ಬಿಗ್ ಅಪ್ಡೇಟ್
ಈಗಲೇ ಚೆಕ್ ಮಾಡಿಕೊಳ್ಳಿ:
ಬರ ಪರಿಹಾರ ಹಣವನ್ನು ಎಲ್ಲ ರೈತರ ಖಾತೆಗಳಿಗೆ ಜಮಾ ಮಾಡುತ್ತಿಲ್ಲ. ಬದಲಿಗೆ ಆಯಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಹ ರೈತರಿಗೆ ತಲುಪಿಸುವ ಜವಾಬ್ದಾರಿ ನೀಡಲಾಗಿದೆ. ಪಂಚಾಯತ್ ಮಟ್ಟದಲ್ಲಿ ಯಾವ ರೈತರು ಅರ್ಹರು ಎನ್ನುವುದು ತೀರ್ಮಾನವಾದ ಬಳಿಕವೇ ಹಣ ಜಮಾ ಮಾಡಲಾಗುತ್ತದೆ.
ನೀವು ಬರ ಪರಿಹಾರ ಧನ ಪಡೆಯಲು ಅರ್ಹರಾಗಿದ್ದಲ್ಲಿ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಪರಿಶೀಲನೆ ಮಾಡಿಕೊಳ್ಳಬಹುದು. ಇಲ್ಲವೇ ಸ್ಥಳೀಯ ಕಂದಾಯ ಅಧಿಕಾರಿ ಭೇಟಿಯಾಗಿ ಬರ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸರ್ಕಾರ!
Did you get relief money in your Bank account, Check now