ಕುರಿ ಮೇಕೆ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗಲಿದೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ
ಕುರಿ ಮತ್ತು ಮೇಕೆ ಸಾಕಾಣಿಕೆಗೆ (sheep and goat farming) ರೈತರಿಗೆ ಸಾಲ ಸೌಲಭ್ಯ (Loan facility) ಹಾಗೂ ಸಹಾಯಧನ ನೀಡಲಾಗುವುದು.
ರೈತರು ತಮ್ಮ ಕೃಷಿ ಚಟುವಟಿಕೆ (agriculture activities) ಗಳ ಜೊತೆಗೆ ಉಪಕಸುಬನ್ನು ಕೂಡ ಮಾಡಿ ಕೊಳ್ಳಲು ಸರ್ಕಾರದಿಂದ ಸಾಕಷ್ಟು ನೆರವು ಸಿಗುತ್ತಿದೆ. ಇದರಿಂದಾಗಿ ರೈತರು ವಾರ್ಷಿಕ ಬೆಳೆಯ ಜೊತೆಗೆ ಇನ್ನೊಂದಿಷ್ಟು ಆದಾಯವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಈಗ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ಸಂಯೋಜನೆಗೊಂಡಿದ್ದು ಇದರಿಂದ ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ ಜಾರಿಗೆ ತರಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಕೈಗೆ ಸಿಗಲಿದೆ ಹಕ್ಕು ಪತ್ರ!
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ !
ಯೋಜನೆಯ ಅಡಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ (sheep and goat farming) ರೈತರಿಗೆ ಸಾಲ ಸೌಲಭ್ಯ (Loan facility) ಹಾಗೂ ಸಹಾಯಧನ ನೀಡಲಾಗುವುದು. ಈ ಯೋಜನೆಯ ಅಡಿಯಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ವತಿಯಿಂದ ಅರ್ಹ 20,000 ಕುರಿಗಾಹಿಗಳಿಗೆ 20 +1 ಕುರಿ ಅಥವಾ ಮೇಕೆ ಸಾಕಾಣಿಕೆಗೆ 1,75,000ಗಳ ಘಟಕ ವೆಚ್ಚದ ಹಣವನ್ನು ಒದಗಿಸಲಾಗುವುದು.
ಈ ಮೂಲಕ ಗುರಿ ಮತ್ತು ಮೇಕೆ ಸಾಕಾಣಿಕೆದಾರರ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
10ನೇ ತರಗತಿ ಪಾಸಾಗಿದ್ರೆ ಬಿಎಂಟಿಸಿಯಲ್ಲಿ ಹುದ್ದೆ, 30,000 ಸಂಬಳ; ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ನಿಗದಿತ ಅರ್ಜಿ ನಮೂನೆ (ನಮೂನೆ ಭರ್ತಿ ಮಾಡಿ ಭಾವಚಿತ್ರ ಅಂಟಿಸಬೇಕು)
ಸಂಘದಿಂದ ಮೂರು ವರ್ಷಗಳ ಲೆಕ್ಕಾಚಾರ ನಡೆದಿದೆ ಎನ್ನುವುದಕ್ಕೆ ದೃಡೀಕರಣ ಪ್ರಮಾಣ ಪತ್ರ ಇರಬೇಕು
ಕುರಿ ಮತ್ತು ಮೇಕೆ ಉತ್ಪಾದಕರ ಸಂಘದ ಸದಸ್ಯರು ಎನ್ನುವುದಕ್ಕೆ ಅವರಿಂದ ದೃಢೀಕರಣ ಪ್ರಮಾಣ ಪತ್ರ ಪಡೆದಿರಬೇಕು
ಜಾತಿ ಪ್ರಮಾಣ
ಆದಾಯ ಪ್ರಮಾಣ
ವಿಕಲಚೇತನರಾಗಿದ್ದರೆ ಸರ್ಕಾರದಿಂದ ಸಿಕ್ಕಿರುವ ದೃಢೀಕರಣ ಪ್ರಮಾಣ ಪತ್ರ
ಇನ್ನಿತರ ಪ್ರಮುಖ ದಾಖಲೆಗಳನ್ನು ಒದಗಿಸಬೇಕು.
ರೈತನನ್ನು ಮದುವೆಯಾದ ಯುವತಿಗೆ 5 ಲಕ್ಷ ರೂಪಾಯಿ; ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ!
ಆರ್ಜಿ ಸಲ್ಲಿಸುವುದು ಹೇಗೆ?
ಕುರಿಗಾಹಿ ಸದಸ್ಯರು ಇದೇ ಫೆಬ್ರವರಿ 19 2024ರ ಒಳಗೆ, ಅಧ್ಯಕ್ಷರು ಮತ್ತು ಈ ವರ್ಷಗಳ ಮೂಲಕ ಪಡೆದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನಿಗಮಕ್ಕೆ ಸಲ್ಲಿಸಬೇಕು. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://kswdcl.karnataka.gov.in/
ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆ ಸೇರಲು ಈ ಕೆಲಸ ಕಡ್ಡಾಯ!
Get Subsidy Loan For Sheep and goat farming from the government