ರೇಷನ್ ಕಾರ್ಡ್ ಪರಿಶೀಲನೆ, ಇಂಥವರ ರೇಷನ್ ಕಾರ್ಡ್ ಅರ್ಜಿ ತಿರಸ್ಕರಿಸಿದ ಸರ್ಕಾರ
ಹೊಸ ರೇಷನ್ ಕಾರ್ಡ್ (Ration Card) ಗೆ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಇದೇ ಕಾರಣಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರುವ ಸಾಕಷ್ಟು ಜನ ತಮಗೆ ಹೊಸ ರೇಷನ್ ಕಾರ್ಡ್ ಯಾವಾಗ ವಿತರಣೆ ಮಾಡುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಇಲಾಖೆ ಕೂಡ ಸಾಕಷ್ಟು ಅರ್ಜಿಗಳನ್ನು ರಿಜೆಕ್ಟ್ ಮಾಡಿದೆ, ಇದಕ್ಕೆ ಪ್ರಮುಖವಾಗಿರುವ ಕಾರಣ ಅನರ್ಹರು ಕೂಡ ಬಿಪಿಎಲ್ (BPL card) ಹಾಗೂ ಎ ಎ ವೈ ಕಾರ್ಡ್ (AAY card ) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವುದು.

RTE ಮೂಲಕ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ದಿನಾಂಕ ಘೋಷಣೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹಿಡಿದು ಕೇಂದ್ರ ಸರ್ಕಾರದ ಕೆಲವು ಪ್ರಮುಖ ಯೋಜನೆಗಳವರೆಗೆ ಒಂದಲ್ಲ ಒಂದು ರೀತಿಯಲ್ಲಿ ಸಾರ್ವಜನಿಕರಿಗೆ ಪ್ರಯೋಜನ ಆಗುವಂತಹ ಯೋಜನೆಗಳೇ ಆಗಿದ್ದು ಇವುಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ.
ಅದರಲ್ಲೂ ಬಿಪಿಎಲ್ ಮತ್ತು ಎ ಎ ವೈ ಕಾರ್ಡ್ ಹೊಂದಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರದ ಯೋಜನೆಯ ಫಲಾನುಭವಿಗಳಾಗಬಹುದು.
ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಬಿಗ್ ಅಪ್ಡೇಟ್! ಮಹಿಳೆಯರಿಗೆ ಶುಭ ಸುದ್ದಿ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ನಿರಾಸೆ ಮೂಡಿಸಿದ ಸರ್ಕಾರ!
ಎರಡುವರೆ ವರ್ಷಗಳಿಂದಲೂ ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಜನರು ಕಾಯುತ್ತಿದ್ದಾರೆ. ಆದರೆ ಸರ್ಕಾರದಿಂದ ಇದುವರೆಗೆ ಯಾವುದೇ ಪಡಿತರ ಚೀಟಿ ವಿತರಣೆ ಆಗಿರಲಿಲ್ಲ ಆರಂಭಿಸಿದೆ. ಈ ಸಮಯದಲ್ಲಿ ಅನರ್ಹರು ಕೂಡ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಅಷ್ಟೇ ಅಲ್ಲದೆ ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಕೂಡ ಮತ್ತೆ ಹೊಸ ಪಡಿತರ ಚೀಟಿ (Ration Card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ.
ಇಂತಹ ಅನರ್ಹ ಅರ್ಜಿಗಳನ್ನು ಸರ್ಕಾರ ಮುಲಾಜಿಲ್ಲದೆ ರಿಜೆಕ್ಟ್ ಮಾಡಿದೆ. ಇದರಿಂದಾಗಿ ಸಾಕಷ್ಟು ಜನರಿಗೆ, ಹೊಸ ರೇಷನ್ ಕಾರ್ಡ್ ಸಿಗುತ್ತದೆ ಎಂದುಕೊಂಡಿರುವವರಿಗೆ ನಿರಾಸೆಯಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ
ಅನರ್ಹರ ಪಟ್ಟಿ ಪ್ರಕಟ!
ಆಹಾರ ಇಲಾಖೆ, ಅನರ್ಹರಿಗೆ ಹಾಗೂ ವಂಚನೆ ಮಾಡಿ ಪಡಿತರ ಚೀಟಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ, ಮೊದಲು ಇಂತಹ ಪಡಿತರ ಚೀಟಿ ಅರ್ಜಿಗಳನ್ನು ತಿರಸ್ಕರಿಸುತ್ತಿದೆ. ಒಂದು ವೇಳೆ ನೀವು ಕೂಡ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು ಅರ್ಹರ ಅಥವಾ ಅನರ್ಹರ ಎಂಬುದನ್ನು ತಿಳಿದುಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ. ಇಲ್ಲಿ ಹೊಸ ಪಡಿತರ ಚೀಟಿ ವಿತರಣೆ ಹಾಗೂ ರಿಜೆಕ್ಟ್ ಆಗಿರುವ ಲಿಸ್ಟ್ ಬಗ್ಗೆ ಮಾಹಿತಿ ಸಿಗುತ್ತದೆ.
ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಕೈಗೆ ಸಿಗಲಿದೆ ಹಕ್ಕು ಪತ್ರ!
Ration card verification, the government rejected the ration card application of such people