Karnataka NewsBangalore News

ಉಚಿತ ಕರೆಂಟ್ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಅಪ್ಡೇಟ್! ಈಗ ಇನ್ನಷ್ಟು ಬೆನಿಫಿಟ್

ಕಳೆದ ಆರು ತಿಂಗಳುಗಳಿಂದ ಅದೇಷ್ಟೋ ಮನೆಗಳು ಒಂದೇ ಒಂದು ರೂಪಾಯಿಗಳನ್ನು ಕೂಡ ವಿದ್ಯುತ್ ಬೆಲೆ (electricity bill) ಪಾವತಿ ಮಾಡದೆ ಅಷ್ಟು ಹಣವನ್ನು ಉಳಿತಾಯ ಮಾಡಿದ್ದಾರೆ ಎಂದೇ ಹೇಳಬಹುದು.

ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಇನ್ನೂರು ಯೂನಿಟ್ (200 free unit) ಗಳ ವರೆಗೆ ಉಚಿತ ವಿದ್ಯುತ್ ಅನ್ನು ಸರ್ಕಾರ ನೀಡುತ್ತಿರುವುದೇ ಈ ಬೃಹತ್ ಉಳಿತಾಯಕ್ಕೆ ಕಾರಣ ಎನ್ನಬಹುದು.

New rule to get free electricity for rent House beneficiaries

ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್! ಈ ಮಹಿಳೆಯರಿಗೆ ಬರೋಲ್ಲ 6ನೇ ಕಂತಿನ ಹಣ

ಪ್ರತಿ ತಿಂಗಳು 1000 2,000 ವಿದ್ಯುತ್ ಪಾವತಿ ಮಾಡುತ್ತಿದ್ದ ಜನರು ಇಂದು ಜಿರೋ ಕರೆಂಟ್ ಬಿಲ್ ನೋಡುವಂತೆ ಆಗಿದೆ. ಮನೆ ಮನೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ (Gruha Jyothi Yojana) ಯಲ್ಲಿ ಈಗ ಮತ್ತೊಂದು ಮಹತ್ವದ ಮಾಹಿತಿಯನ್ನು ಸರ್ಕಾರ ನೀಡಿದೆ.

10 ಯೂನಿಟ್ ಗಳನ್ನು ಎಕ್ಸ್ಟ್ರಾ ನೀಡಲು ಸರ್ಕಾರ ನಿರ್ಧಾರ!

200 ಯೂನಿಟ್ ಗಳ ವರೆಗೆ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ಬಳಕೆ ಮಾಡಬಹುದಾಗಿದ್ದು ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಈ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಇನ್ನು ನಿಗದಿತ ಯೂನಿಟ್ ಗಿಂತಲೂ ಹೆಚ್ಚುವರಿಯಾಗಿ ವಿದ್ಯುತ್ ಖರ್ಚು ಮಾಡಿದರೆ ಅಂತವರು ವಿದ್ಯುತ್ ಬಿಲ್ ಪಾವತಿ ಮಾಡಲೇಬೇಕು.

ಇಂತಹ ಕೃಷಿಕ ರೈತರಿಗೆ ಸಿಗಲಿದೆ 4.40 ಲಕ್ಷ ರೂ. ಸಹಾಯಧನ! ಈ ರೀತಿ ಪಡೆದುಕೊಳ್ಳಿ

Electricity Billನಿಮಗೆಲ್ಲಾ ತಿಳಿದಿರುವ ಹಾಗೆ ಪ್ರತಿಯೊಬ್ಬರ ಸರಾಸರಿ ವಾರ್ಷಿಕ ಯೂನಿಟ್ ಬಳಕೆಯ ಮೇಲೆ 10% ನಷ್ಟು ಹೆಚ್ಚುವರಿ ಯೂನಿಟ್ ಅನ್ನು ಸರ್ಕಾರ ನೀಡುತ್ತಿತ್ತು. ಉದಾಹರಣೆಗೆ ನೀವು 170 ಯೂನಿಟ್ ಬಳಕೆ ಮಾಡುತ್ತಿದ್ದರೆ ಅದಕ್ಕೆ 10% ಸೇರಿ 180 ಯೂನಿಟ್ ವರೆಗೆ ಬಳಕೆ ಮಾಡಬಹುದು. ಇದೀಗ ಸರ್ಕಾರ 10% ಬದಲಿಗೆ 10 ಯೂನಿಟ್ ಗಳನ್ನು ಹೆಚ್ಚು ಹಾಕಿ ನೀಡಲು ಮುಂದಾಗಿದೆ.

ರಾಜ್ಯದಲ್ಲಿ ಸಾಕಷ್ಟು ಜನ ಅಂದರೆ ಸುಮಾರು 70,000 ಕುಟುಂಬಗಳು ಕೇವಲ 48 ಯೂನಿಟ್ ಗಳನ್ನು ಮಾತ್ರ ಬಳಕೆ ಮಾಡುತ್ತಾರೆ. ಇಂಥವರಿಗೆ ನೀಡಿದರೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ 48 ಯೂನಿಟ್ಗೆ ಇನ್ನೂ 10 ಯೂನಿಟ್ ಸೇರಿಸಿ 58 ಯೂನಿಟ್ ಗಳ ಲಿಮಿಟೇಶನ್ ಕೊಡಲಾಗಿದೆ. ಇಷ್ಟು ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವಂತಹ ಮನೆಗಳಿಗೆ ಉಚಿತ ವಿದ್ಯುತ್ ಸಿಗುತ್ತದೆ.

ರೇಷನ್ ಕಾರ್ಡ್ ಪರಿಶೀಲನೆ, ಇಂಥವರ ರೇಷನ್ ಕಾರ್ಡ್ ಅರ್ಜಿ ತಿರಸ್ಕರಿಸಿದ ಸರ್ಕಾರ

ಈ ಸೌಲಭ್ಯವನ್ನು ಜನರಿಗೆ ಸರ್ಕಾರ ನೀಡಲು ನಿರ್ಧರಿಸಿರುವುದರಿಂದ ವಾರ್ಷಿಕವಾಗಿ 398 ಕೋಟಿ ರೂಪಾಯಿಗಳ ಹೊರೆ ಆಗಲಿದೆ. ಆದರೂ ಜನರು ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲಿ ಈ ಬದಲಾವಣೆಗಳನ್ನು ಫೆಬ್ರವರಿ ಒಂದರಿಂದಲೇ ಆರಂಭಿಸಲಾಗಿದ್ದು 70,000 ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

Big Update on Free Electricity, Gruha jyothi Yojana, Get more benefits

Our Whatsapp Channel is Live Now 👇

Whatsapp Channel

Related Stories