ಸಿಹಿ ಸುದ್ದಿ! ಏ.1ರಿಂದ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳು ವಿತರಣೆ

ಕಡೆಗೂ ರಾಜ್ಯ ಸರ್ಕಾರದಿಂದ ಹೊರ ಬಿತ್ತು ಗುಡ್ ನ್ಯೂಸ್; ರೇಷನ್ ಕಾರ್ಡ್ ವಿತರಣೆ ಯಾವಾಗ ಗೊತ್ತಾ?

ನೀವು ಬಿಪಿಎಲ್ (BPL), ಅಂತ್ಯೋದಯ (antyodaya road) ಅಥವಾ ಎಪಿಎಲ್ ಕಾರ್ಡ್ (APL Card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರೆ ಈ ಸುದ್ದಿ ನಿಮಗಾಗಿ.. ಇಲ್ಲಿಯವರೆಗೆ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ, ಆದರೆ ಯಾರಿಗೂ ಪಡಿತರ ಚೀಟಿ ವಿತರಣೆ (ration card) ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಆಹಾರ ಸಚಿವ ಕೆಎಚ್ ಮುನಿಯಪ್ಪ (K.H. muniyappa) ಮಹತ್ತರವಾಗಿರುವ ಸುದ್ದಿ ಒಂದನ್ನು ನೀಡಿದ್ದಾರೆ. ಬಿಪಿಎಲ್ ಹಾಗೂ ಇತರ ಪಡಿತರ ಚೀಟಿ ಯಾವಾಗ ವಿತರಣೆ ಮಾಡಲಾಗುವುದು ಎಂಬುದನ್ನು ತಿಳಿಸಿದ್ದಾರೆ.

ಸ್ವಂತ ಮನೆ ಇಲ್ಲದವರಿಗೆ 36,000 ಮನೆ ವಿತರಣೆಗೆ ಸರ್ಕಾರ ನಿರ್ಧಾರ; ಇಲ್ಲಿದೆ ಮಾಹಿತಿ

ಸಿಹಿ ಸುದ್ದಿ! ಏ.1ರಿಂದ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳು ವಿತರಣೆ - Kannada News

ಕಲಾಪದಲ್ಲಿ ಕೇಳಲಾಗಿರುವ ಪ್ರಶ್ನೆಗೆ ಉತ್ತರ!

ವಿಪಕ್ಷ ನಾಯಕ ಆರ್ ಅಶೋಕ ಹಾಗೂ ಶಾಸಕಿ ನಯನ ಮೋಟಮ್ಮ ಪಡಿತರ ಚೀಟಿಗೆ ಸಂಬಂಧಪಟ್ಟ ಹಾಗೆ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. “ಇಲ್ಲಿಯವರೆಗೆ ಪಡಿತರ ಚೀಟಿ ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಇದಕ್ಕೆ ಕಾರಣ ಸಾಕಷ್ಟು ಜನರ ಆಧಾರ್ ಕಾರ್ಡ್ ಬ್ಯಾಂಕ್ ನೊಂದಿಗೆ ಲಿಂಕ್ (Aadhaar Card link) ಆಗಿಲ್ಲ ಹೀಗಾಗಿ ಇಂಥವರಿಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನು ಮುಂದೆ ಬರಲಿದೆಯೋ ಇಲ್ಲವೋ” ಎಂದು ಮೋಟಮ್ಮ ಪ್ರಶ್ನೆಸಿದ್ದಾರೆ

ಇದಕ್ಕೆ ಪೂರಕವಾಗಿ ಆರ್ ಅಶೋಕ್ ಕೂಡ ಕಲಾಪವನ್ನು ಪ್ರಶ್ನೆ ಮಾಡಿದ್ದು ” ಇದುವರೆಗೆ ಅರ್ಜಿ ಸಲ್ಲಿಸಿದ ಪಡಿತರ ಚೀಟಿ ವಿತರಣೆ ಮಾಡಿಲ್ಲ ಗ್ಯಾರಂಟಿ ಯೋಜನೆಗಳಿಗೆ ಪಡಿತರ ಚೀಟಿ ಅವಶ್ಯಕತೆ ಇದ್ದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಜಾಸ್ತಿ ಆಗಬಾರದು ಎನ್ನುವ ಕಾರಣಕ್ಕೆ ರೇಷನ್ ಕಾರ್ಡ್ ವಿತರಣೆ ಮಾಡುತ್ತಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.

ಯುವನಿಧಿ ಯೋಜನೆಯಲ್ಲಿ ಬಿಗ್ ಅಪ್ಡೇಟ್; ಹಣ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ!

BPL Ration Cardರೇಷನ್ ಕಾರ್ಡ್ ಪರಿಶೀಲನೆಗೆ ಕ್ರಮ!

ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ವಿತರಣೆ ಕಾರ್ಯವನ್ನು ಆರಂಭಿಸಿದೆ. ಈ ಬಗ್ಗೆ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಉತ್ತರ ನೀಡಿದ್ದು, ” ಈ ಹಿಂದೆ ಅಧಿಕಾರದಲ್ಲಿ ಇದ್ದ ಸರ್ಕಾರ ಚುನಾವಣೆಯ ಕಾರಣಕ್ಕೆ 2.96 ಲಕ್ಷ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲಿಸದೆ ಹಾಗೆಯೇ ಬಿಟ್ಟಿತ್ತು.

ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 57 ಸಾವಿರ ಪಡಿತರ ಚೀಟಿ ವಿತರಣೆ ಮಾಡಲಾಗಿದೆ ಅದರಲ್ಲೂ ತುರ್ತು ಆರೋಗ್ಯ ಪರಿಸ್ಥಿತಿ ಇರುವ ಸಮಯದಲ್ಲಿ ಪಡಿತರ ಚೀಟಿಯನ್ನು ಬಹಳ ಬೇಗ ವಿತರಣೆ ಮಾಡಲಾಗುತ್ತಿದ್ದು ಇಲ್ಲಿಯವರೆಗೆ 744 ತುರ್ತು ಆರೋಗ್ಯ ಅನಿವಾರ್ಯತೆಯ ಸಲುವಾಗಿ ಅರ್ಜಿ ಸಲ್ಲಿಸಿದ್ದ ಪಡಿತರ ಚೀಟಿ ಅರ್ಜಿಗಳನ್ನು ಪರಿಗಣಿಸಿ ಅಂತವರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡಲಾಗಿದೆ.

ಉಚಿತ ಕರೆಂಟ್ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಅಪ್ಡೇಟ್! ಈಗ ಇನ್ನಷ್ಟು ಬೆನಿಫಿಟ್

ಹೊಸ ಅರ್ಜಿ ಪರಿಶೀಲನೆ ಮಾಡಿ ಈ ತಿಂಗಳಿನಿಂದ ಪಡಿತರ ಚೀಟಿ ವಿತರಣೆ!

ಮುಂದುವರೆದು ಕೆಎಚ್ ಮುನಿಯಪ್ಪ ಅವರು ಹೊಸ ಪಡಿತರ ಚೀಟಿ ವಿತರಣೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅವರು ತಿಳಿಸಿರುವ ಪ್ರಕಾರ ಮಾರ್ಚ್ 31ರ ವೇಳೆಗೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ತಿಂಗಳಿನಿಂದ ಹೊಸ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ವಿತರಣೆ ಕಾರ್ಯ ಆರಂಭವಾಗಲಿದೆ.

ಇಂತಹ ಕೃಷಿಕ ರೈತರಿಗೆ ಸಿಗಲಿದೆ 4.40 ಲಕ್ಷ ರೂ. ಸಹಾಯಧನ! ಈ ರೀತಿ ಪಡೆದುಕೊಳ್ಳಿ

Distribution of APL and BPL ration cards from April 1

Follow us On

FaceBook Google News

Distribution of APL and BPL ration cards from April 1