Karnataka NewsBangalore News

ಹೊಸ ರೇಷನ್ ಕಾರ್ಡ್ ವಿತರಣೆಗೆ ಡೇಟ್ ಫಿಕ್ಸ್; ಬಿಪಿಎಲ್ ಕಾರ್ಡ್ ವಿತರಣೆಗೆ ನಿರ್ಧಾರ

ರೇಷನ್ ಕಾರ್ಡ್ (Ration Card) ಮಹತ್ವ ಈಗಾಗಲೇ ನಿಮಗೆ ತಿಳಿದಿರುತ್ತದೆ. ಸರ್ಕಾರ ಯೋಜನೆಯ ಪ್ರಯೋಜನ ಬೇಕು ಅಂದ್ರೆ ಆದ್ಯತಾ (BPL card) ಪಡಿತರ ಚೀಟಿ ಬೇಕು, ಜೊತೆಗೆ ಕಾರ್ಡ್ ಹೊಂದಿರುವವರೆಗೂ ಕೂಡ ಸಾಕಷ್ಟು ಬೆನಿಫಿಟ್ ಸಿಗುತ್ತದೆ.

ಆದರೆ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಸಾಕಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದುಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅರ್ಜಿ ಸಲ್ಲಿಸಿದ ಸಾಕಷ್ಟು ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡದೇ ಇರುವುದು ಅಂತಹ ಕುಟುಂಬಕ್ಕೆ ಅನ್ಯಾಯ ಮಾಡಿದಂತೆ ಆಗುತ್ತಿದೆ ಎಂದು ವಿಧಾನಸಭಾ ಕಲಾಪದಲ್ಲಿ ವಿಪಕ್ಷ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದರು.

The government has given good news to all families with ration cards

ಸಿಹಿ ಸುದ್ದಿ! ಏ.1ರಿಂದ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳು ವಿತರಣೆ

ಇದಕ್ಕೆ ಆಹಾರ ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪ (food minister K.H Muniyappa) ಉತ್ತರ ನೀಡಿದ್ದು ರೇಷನ್ ಕಾರ್ಡ್ ವಿತರಣೆ (ration card distribution) ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮೊದಲಾದ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಗೊಂದಲಗಳಿಗೆ ಉತ್ತರ ನೀಡಿದ್ದಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಾಗೂ ಉಚಿತ ಆರೋಗ್ಯ ಪ್ರಯೋಜನ ಪಡೆದುಕೊಳ್ಳಲು, ಬಿಪಿಎಲ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿರುವುದರಿಂದ ಯಾರಿಗೂ ವಂಚನೆ ಆಗದೆ ಇರುವ ರೀತಿಯಲ್ಲಿ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಲು ನಿರ್ಧರಿಸಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.

ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸ ಮಾಡಲೇಬೇಕು!

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್!

BPL Ration Cardಈಗಾಗಲೇ 2.95 ಲಕ್ಷ ಪಡಿತರ ಚೀಟಿ ಅರ್ಜಿ ಆಹಾರ ಇಲಾಖೆಯಲ್ಲಿ ಇದೆ. ಹಾಗಾಗಿ ಇವುಗಳ ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದ್ದು ಫಲಾನುಭವಿಗಳಿಗೆ ಬಿಪಿಎಲ್ (BPL) ಎಪಿಎಲ್ (APL ) ಹಾಗೂ ಎ ಎ ವೈ (AAY) ಕಾರ್ಡ್ ವಿತರಣೆ ಮಾಡಲು ನಿರ್ಧರಿಸಿದೆ.

ತುರ್ತು ಆರೋಗ್ಯ ಬೆನಿಫಿಟ್ ಪಡೆದುಕೊಳ್ಳಲು ಸುಮಾರು 700ಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಅನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಇಲ್ಲಿಯವರೆಗೆ 57,000 ಬಿಪಿಎಲ್ ಕಾರ್ಡ್ ವಿತರಣೆ ಆಗಿದೆ.

ಯುವನಿಧಿ ಯೋಜನೆಯಲ್ಲಿ ಬಿಗ್ ಅಪ್ಡೇಟ್; ಹಣ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ!

ಈಗ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲು ಮಾರ್ಚ್ 31ರ ಒಳಗೆ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಒಂದರಿಂದ ಬಿಪಿಎಲ್ ಹಾಗೂ ಮತ್ತಿತರ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಆರೋಗ್ಯ ಸೇವೆ ಉಚಿತವಾಗಿ ಪಡೆದುಕೊಳ್ಳಲು ಇಚ್ಚಿಸುವವರಿಗೆ ಅರ್ಜಿ ಸಲ್ಲಿಸಲು ಕೂಡ ಏಪ್ರಿಲ್ ತಿಂಗಳಿನಿಂದ ಅವಕಾಶ ಇದೆ ಎಂದು ತಿಳಿಸಿದ್ದಾರೆ. ಹಾಗಾಗಿ ಸದ್ಯದಲ್ಲಿಯೇ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಹಾಗೂ ಉಚಿತ ಆರೋಗ್ಯ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಿದ ಸಾಕಷ್ಟು ಫಲಾನುಭವಿಗಳಿಗೆ ರೇಷನ್ ಕಾರ್ಡ್ ಕೈಸೇರಲಿದೆ.

ಉಚಿತ ಕರೆಂಟ್ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಅಪ್ಡೇಟ್! ಈಗ ಇನ್ನಷ್ಟು ಬೆನಿಫಿಟ್

Decision to issue new BPL Ration card on This Date

Our Whatsapp Channel is Live Now 👇

Whatsapp Channel

Related Stories